ಜಯಾ ಬಚ್ಚನ್ನ ಮನೆಯಿಂದ ಹೊರ ಹಾಕಿದ್ರಾ? ಅಮಿತಾಭ್ಗೆ ಪ್ರಶ್ನೆ ಮಾಡಿದ ಫ್ಯಾನ್ಸ್
Amitabh Bachchan: ಅಮಿತಾಭ್ ಬಚ್ಚನ್ ಅವರ 'ನಿಕಾಲ್ ದಿಯಾ' ಟ್ವೀಟ್ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಗೂಢ ಅರ್ಥದ ಟ್ವೀಟ್ ಕಂಡು ಅಭಿಮಾನಿಗಳು ಗೊಂದಲಕ್ಕೊಳಗಾಗಿದ್ದಾರೆ. ಕೆಲವರು ಇದು ಜಯಾ ಬಚ್ಚನ್ ಅಥವಾ ಅಭಿಷೇಕ್ ಬಚ್ಚನ್ ಕುರಿತು ಮಾಡಿರುವ ಟ್ವೀಟ್ಟೇ ಎಂದು ಪ್ರಶ್ನಿಸಿದ್ದಾರೆ. ನೆಟಿಜನ್‌ಗಳು ತಮಾಷೆಯ ಪ್ರತಿಕ್ರಿಯೆಗಳು ಮತ್ತು ಮೀಮ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಬಾಲಿವುಡ್ (Bollywood) ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ವಿವಿಧ ಪೋಸ್ಟ್‌ಗಳನ್ನು ಮಾಡುತ್ತಾರೆ. ಅವರ ಪೋಸ್ಟ್‌ಗಳು ನೆಟ್ಟಿಗರಲ್ಲಿ ನಿರಂತರವಾಗಿ ಚರ್ಚೆಯಾಗುತ್ತಿರುತ್ತವೆ. ಇತ್ತೀಚೆಗೆ ಅವರು ತಮ್ಮ 83 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈಗ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕೆಲವರು ತಮಾಷೆಯ ಪ್ರತಿಕ್ರಿಯೆಗಳನ್ನು ಸಹ ನೀಡಿದ್ದಾರೆ.
ಅಮಿತಾಭ್ ಅವರು ‘T 5533- ನಿಕಾಲ್ ದಿಯಾ’ ಎಂಬ ಪೋಸ್ಟ್ ಬರೆದಿದ್ದಾರೆ. ಇದರಲ್ಲಿರುವ T ಅಕ್ಷರ ‘ಟ್ವೀಟ್’ ಅನ್ನು ಸೂಚಿಸುತ್ತದೆ. ಸಂಖ್ಯೆ, ಅವರು ಮಾಡಿರುವ ಟ್ವೀಟ್ನ ಸಂಖ್ಯೆ ಸೂಚಿಸುತ್ತದೆ. ನಿಕಾಲ್ ದಿಯಾ ಎಂದರೆ ಹೊರಹಾಕಿದ್ದೇನೆ ಅಥವಾ ತೆಗೆದು ಹಾಕಿದ್ದೇನೆ ಎಂಬರ್ಥ ಕೊಡುತ್ತದೆ. ಕೆಲವರು ಇದನ್ನು ಗೇಲಿ ಮಾಡಲು ಪ್ರಾರಂಭಿಸಿದ್ದಾರೆ. ಕೆಲವರು ಕಾಮೆಂಟ್‌ಗಳಲ್ಲಿ ಅವರ ಪತ್ನಿ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರನ್ನು ಉಲ್ಲೇಖಿಸಿದರೆ, ಇತರರು ಅವರ ಮಗ ಅಭಿಷೇಕ್ ಅವರನ್ನು ಉಲ್ಲೇಖಿಸಿ ತಮಾಷೆ ಮಾಡಿದ್ದಾರೆ.
ಇದನ್ನೂ ಓದಿ:ವಿಷ್ಣುವರ್ಧನ್ ಜೊತೆಗೂ ನಟಿಸಿದ್ದ ಬಾಲಿವುಡ್ ಹಿರಿಯ ನಟ ಪಂಜಜ್ ನಿಧನ
‘ಅಭಿಷೇಕ್ ನಿಮ್ಮನ್ನು ಮನೆಯಿಂದ ಹೊರ ಹಾಕಿದಿರಾ?’ ಎಂದು ಒಬ್ಬರು ಕೇಳಿದ್ದಾರೆ. ‘ನೀವು ಜಯಾ ಬಚ್ಚನ್ ಜೊತೆ ಏಕೆ ಜಗಳವಾಡಿದ್ದೀರಿ?’ ಎಂದು ಮತ್ತೊಬ್ಬರು ಕೇಳಿದ್ದಾರೆ. ಕೆಲವು ನೆಟಿಜನ್‌ಗಳು ಇದರ ಬಗ್ಗೆ ತಮಾಷೆಯ ಮೀಮ್‌ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ‘ಜಯಾಜಿಗೆ ಕ್ಷಮೆಯಾಚಿಸಿ, ಬಹುಶಃ ಅವರು ನಿಮಗೆ ಮತ್ತೆ ಕರೆ ಮಾಡಬಹುದು’ ಎಂದು ನೆಟ್ಟಿಗರು ತಮಾಷೆ ಮಾಡಿದ್ದಾರೆ. ಈಗ ಬಿಗ್ ಬಿ ಈ ಪೋಸ್ಟ್‌ನಿಂದ ನಿಜವಾಗಿಯೂ ಏನು ಹೇಳುತ್ತಿದ್ದಾರೆ ಎಂಬುದನ್ನು ಅವರೇ ಬಹಿರಂಗಪಡಿಸಬೇಕಿದೆ. ಅವರು ಈ ಹಿಂದೆ ಹಲವು ಬಾರಿ ಇಂತಹ ಪೋಸ್ಟ್‌ಗಳನ್ನು ಬರೆದಿದ್ದಾರೆ, ಇದು ಅಭಿಮಾನಿಗಳಲ್ಲಿ ಗೊಂದಲವನ್ನು ಸೃಷ್ಟಿಸಿದೆ.
ಅಮಿತಾಭ್ ಬಚ್ಚನ್ ಅವರ ಕೆಲಸದ ಬಗ್ಗೆ ಹೇಳುವುದಾದರೆ, ಅವರು ಪ್ರಸ್ತುತ ‘ಕೌನ್ ಬನೇಗಾ ಕರೋಡ್‌ಪತಿ’ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಇದಲ್ಲದೆ, ಅವರು ‘ಕಲ್ಕಿ 2898 AD’ ಸೀಕ್ವೆಲ್, ‘ಸೆಕ್ಷನ್ 84′ ಮತ್ತು ‘ಬ್ರಹ್ಮಾಸ್ತ್ರ: ಭಾಗ 2’ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 83ನೇ ವಯಸ್ಸಿನಲ್ಲೂ ದಣಿವರಿಯದೆ ಕೇಲಸ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



