ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ಕೆಲವೇ ದಿನಗಳ ಹಿಂದೆ ‘ಬಿಗ್ ಬಾಸ್ 17’ ಶೋನಲ್ಲಿ ಸ್ಪರ್ಧಿಸಿ ಹೊರಬಂದಿದ್ದಾರೆ. ಈಗ ಅವರ ಕಡೆಯಿಂದ ಒಂದು ಕಹಿ ಸುದ್ದಿ ಸಿಕ್ಕಿದೆ. ಅವರ ಮನೆಯಲ್ಲಿ ಸಾಕಿದ್ದ ಮುದ್ದಿನ ನಾಯಿ (Ankita Lokhande Dog) ಸತ್ತು ಹೋಗಿದೆ. ಈ ಶ್ವಾನಕ್ಕೆ ಪ್ರೀತಿಯಿಂದ ಸ್ಕಾಚ್ ಎಂದು ಹೆಸರು ಇಡಲಾಗಿತ್ತು. ಈಗ ಸ್ಕಾಚ್ ಮೃತಪಟ್ಟಿದೆ. ಅದರ ಫೋಟೋವನ್ನು ಅಂಕಿತಾ ಲೋಖಂಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. ವಿಶೇಷ ಏನೆಂದರೆ, ಅಂಕಿತಾಗೆ ಈ ಶ್ವಾನವನ್ನು ನೀಡಿದ್ದು ಮಾಜಿ ಪ್ರಿಯಕರ ಸುಶಾಂತ್ ಸಿಂಗ್ ರಜಪೂತ್. ಹಾಗಾಗಿ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ಅಭಿಮಾನಿಗಳು ಕೂಡ ಸ್ಕಾಚ್ ನಿಧನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಮತ್ತು ಅಂಕಿತಾ ಲೋಖಂಡೆ ಅವರು ಕಿರುತೆರೆಯ ‘ಪವಿತ್ರ ರಿಷ್ತಾ’ ಧಾರಾವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಪ್ರಾಣಿಗಳ ಬಗ್ಗೆ ಸುಶಾಂತ್ ಸಿಂಗ್ ರಜಪೂತ್ ವಿಶೇಷ ಕಾಳಜಿ ಮತ್ತು ಪ್ರೀತಿ ಹೊಂದಿದ್ದರು. ತಮ್ಮ ಮುದ್ದಿನ ಶ್ವಾನದ ಜೊತೆ ಅವರು ಆಟವಾಡುತ್ತಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಅದೇ ನಾಯಿ ಈಗ ಮೃತಪಟ್ಟಿದೆ.
ಸ್ಕಾಚ್ ಶ್ವಾನದ ಜೊತೆ ಅನೇಕ ನೆನಪುಗಳು ಬೆರೆತಿದ್ದವು. ಸುಶಾಂತ್ ಸಿಂಗ್ ರಜಪೂತ್ ಅವರು ಉಡುಗೊರೆಯಾಗಿ ನೀಡಿದ್ದು ಎಂಬ ಕಾರಣದಿಂದಲೂ ಅದು ತುಂಬಾ ಸ್ಪೆಷಲ್ ಎನಿಸಿಕೊಂಡಿತ್ತು. ಪ್ರೀತಿಯಿಂದ ಸಾಕಿದ ನಾಯಿಯನ್ನು ಕಳೆದುಕೊಂಡು ಅಂಕಿತಾ ಲೋಖಂಡೆ ಅವರಿಗೆ ಬೇಸರ ಆಗಿದೆ. ‘ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ ಸ್ಕಾಚ್. ಅಮ್ಮ ನಿನ್ನನ್ನು ಯಾವಾಗಲೂ ಮಿಸ್ ಮಾಡಿಕೊಳ್ಳುತ್ತಾಳೆ’ ಎಂದು ಅಂಕಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ‘ನಾಗಿನ್’ ಧಾರಾವಾಹಿಯಲ್ಲಿ ನಟಿಸೋಕೆ ರೆಡಿ ಆದ ಅಂಕಿತಾ ಲೋಖಂಡೆ; ಸಿಗುತ್ತಿದೆ ಭರ್ಜರಿ ಸಂಭಾವನೆ?
ಅಂಕಿತಾ ಲೋಖಂಡೆ ಹಂಚಿಕೊಂಡ ಫೋಟೋಗೆ ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಮ್ಮ ಟೈಮ್ ಈಗ ಸರಿಯಿಲ್ಲ ಎನಿಸುತ್ತದೆ’ ಎಂದು ಕೆಲವರು ಎಚ್ಚರಿಕೆ ನೀಡಿದ್ದಾರೆ. ಟ್ರೋಫಿ ಗೆಲ್ಲಬೇಕು ಎಂದು ಅಂಕಿತಾ ಲೋಖಂಡೆ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದರು. ಆದರೆ ಫಿನಾಲೆ ತನಕ ಬಂದ ಅವರಿಗೆ ವಿನ್ನರ್ ಆಗಲು ಸಾಧ್ಯವಾಗಲಿಲ್ಲ. ಅವರ ಜೊತೆ ಪತಿ ವಿಕ್ಕಿ ಜೈನ್ ಕೂಡ ದೊಡ್ಮನೆಯಲ್ಲಿ ಸ್ಪರ್ಧಿಯಾಗಿದ್ದರು. ಆದರೆ ಅವರಿಬ್ಬರ ನಡುವೆ ಸಾಕಷ್ಟು ಬಾರಿ ಜಗಳ ಆಗಿತ್ತು. ಬಿಗ್ ಬಾಸ್ ಶೋ ಮುಗಿಸಿ ಬಂದ ಕೆಲವೇ ದಿನಗಳಲ್ಲಿ ಸ್ಕಾಚ್ ಶ್ವಾನ ಮೃತಪಟ್ಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:28 pm, Mon, 5 February 24