‘ರಾಮಾಯಣ’ ಚಿತ್ರದ ಜಟಾಯು ಪಾತ್ರದಲ್ಲಿ ಅನುಪಮ್ ಖೇರ್; ಪೋಸ್ಟರ್ ಬಿಡುಗಡೆ

‘ರಾಮಾಯಣ’ ಸಿನಿಮಾದ ಪಾತ್ರವರ್ಗ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಜಟಾಯು ಪಾತ್ರವನ್ನು ಅನುಪಮ್ ಖೇರ್ ಅವರು ಮಾಡಿದ್ದಾರೆ. ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿರುವಾಗ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸಲಾಗಿದೆ. ಜಟಾಯು ಪಾತ್ರದ ಪೋಸ್ಟರ್ ಹಂಚಿಕೊಳ್ಳಲಾಗಿದೆ. ಹಲವು ಘಟಾನುಘಟಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

‘ರಾಮಾಯಣ’ ಚಿತ್ರದ ಜಟಾಯು ಪಾತ್ರದಲ್ಲಿ ಅನುಪಮ್ ಖೇರ್; ಪೋಸ್ಟರ್ ಬಿಡುಗಡೆ
Ramayana Part 1 Movie Poster

Updated on: Oct 13, 2026 | 8:02 PM

ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಭಿನಯದ, ಭಾರತೀಯ ಚಿತ್ರರಂಗದ ಅತ್ಯಂತ ನಿರೀಕ್ಷಿತ ದೃಶ್ಯಕಾವ್ಯ ‘ರಾಮಾಯಣ’ ಚಿತ್ರದ ಕುರಿತು ಪ್ರಮುಖ ಅಪ್‌ಡೇಟ್‌ ಒಂದನ್ನು ಚಿತ್ರತಂಡ ಹಂಚಿಕೊಂಡಿದೆ. ಈ ಪೌರಾಣಿಕ ಕಥಾಹಂದರದ ಚಿತ್ರದಲ್ಲಿ ಜಟಾಯು ಪಾತ್ರಕ್ಕೆ ಹಿರಿಯ ನಟ ಅನುಪಮ್ ಖೇರ್ ಅವರು ಧ್ವನಿ ನೀಡಿದ್ದಾರೆ ಎಂದು ನಿರ್ಮಾಪಕರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಹಂಚಿಕೊಂಡು ಈ ವಿಷಯವನ್ನು ತಿಳಿಸಲಾಗಿದೆ.

ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಅಂದರೆ ಅಕ್ಟೋಬರ್ 20ರಿಂದ ಚಿತ್ರದ ಮುಂಗಡ ಬುಕಿಂಗ್ ಆರಂಭಗೊಳ್ಳುತ್ತಿದ್ದು, ಇದಕ್ಕೂ ಸರಿಯಾಗಿ 8 ದಿನಗಳ ಮುನ್ನ ಜಟಾಯುವಿನ ಆಕರ್ಷಕ ಪೋಸ್ಟರ್ ಒಂದನ್ನು ಚಿತ್ರತಂಡ ಅನಾವರಣಗೊಳಿಸಿದೆ. ಧರ್ಮ ಮತ್ತು ಶೌರ್ಯದ ಸಂಕೇತವಾಗಿರುವ ಜಟಾಯುವಿನ ತೀಕ್ಷ್ಣ ನೋಟ ಹಾಗೂ ವಿಶಾಲವಾಗಿ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಿರುವುದು ಈ ಪೋಸ್ಟರ್‌ನಲ್ಲಿ ಗಮನ ಸೆಳೆಯುತ್ತಿವೆ.

‘ಅಧರ್ಮವು ಹಾರಾಟ ಆರಂಭಿಸಿದಾಗ, ಶೌರ್ಯವು ಅದನ್ನು ಎದುರಿಸಲು ಎದ್ದು ನಿಂತಿತು. ಆತ ಹೋರಾಡಿದ್ದು ಗೆಲುವಿಗಾಗಿ ಅಲ್ಲ, ಧರ್ಮಕ್ಕಾಗಿ! ಜಟಾಯು – ಧರ್ಮದ ರೆಕ್ಕೆಗಳು. ‘ರಾಮಾಯಣ’ ಚಿತ್ರದಲ್ಲಿ ಜಟಾಯುವಾಗಿ ಅನುಪಮ್ ಖೇರ್’ ಎಂದು ಚಿತ್ರತಂಡದವರು ಈ ಪೋಸ್ಟ್​ಗೆ ಕ್ಯಾಪ್ಷನ್ ನೀಡಿದ್ದಾರೆ. ರಾಮಾಯಣದ ಕಥೆಯಲ್ಲಿ ರಾವಣನು ಸೀತೆಯನ್ನು ಅಪಹರಿಸಿ ಒಯ್ಯುವಾಗ, ರಾವಣನ ಅಪಾರ ಶಕ್ತಿಯ ಅರಿವಿದ್ದರೂ ಸಹ ಜಟಾಯು ಧೈರ್ಯದಿಂದ ಆತನನ್ನು ತಡೆದು ಸೀತೆಯನ್ನು ರಕ್ಷಿಸಲು ಹೋರಾಡುವ ಸನ್ನಿವೇಶವು ಪ್ರಮುಖ ಮತ್ತು ಭಕ್ತಿಪೂರ್ವಕ ಭಾಗವಾಗಿದೆ.

ಇತ್ತೀಚೆಗಷ್ಟೇ ಚಿತ್ರತಂಡವು ‘ರಾಮಾಯಣ ಪಾರ್ಟ್ 1’ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿತ್ತು. ಆರಂಭದಲ್ಲಿ ವಿದೇಶಗಳಲ್ಲಿ ಬಿಡುಗಡೆಯಾದ ಎರಡು ದಿನಗಳ ನಂತರ ಭಾರತದಲ್ಲಿ ಪ್ರದರ್ಶನಗೊಳ್ಳಲಿದೆ ಎಂಬ ವದಂತಿಗಳಿದ್ದವು. ಆದರೆ, ಈ ವದಂತಿಗಳಿಗೆ ತೆರೆ ಎಳೆದಿರುವ ನಿರ್ಮಾಪಕರು, ನವೆಂಬರ್ 5ರಂದು ಭಾರತ ಸೇರಿದಂತೆ ಪ್ರಪಂಚದಾದ್ಯಂತ ಏಕಕಾಲಕ್ಕೆ ಸಿನಿಮಾ ತೆರೆಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಎಂಟ್ರಿ; ಇಲ್ಲಿದೆ ‘ರಾಮಾಯಣ’ ಕಲಾವಿದರ ಫುಲ್ ಲಿಸ್ಟ್

‘ನವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ, ನಾವು ಹೊಸ ಯುಗದ ಆರಂಭವನ್ನು ಆಚರಿಸುತ್ತಿದ್ದೇವೆ. ಇದು ರಾಮನ ಯುಗದ ಆರಂಭ. ರಾಮಾಯಣ ಪಾರ್ಟ್ 1 ಪ್ರಪಂಚದಾದ್ಯಂತ ನವೆಂಬರ್ 5ರಿಂದ ಪ್ರದರ್ಶನಗೊಳ್ಳಲಿದೆ’ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಈ ಚಿತ್ರವನ್ನು ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘DNEG’, ಹಾಗೂ ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ನಿರ್ಮಿಸುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us