ವಮಿಕಾಳ ಮುಖ ತೋರಿಸಿ ಎಂದವರಿಗೆ ಅನುಷ್ಕಾ ಶರ್ಮಾ ವಿಶೇಷ ಮನವಿ

‘ವಮಿಕಾಳ ಚಿತ್ರಗಳು/ವಿಡಿಯೋಗಳನ್ನು ಪ್ರಕಟಿಸದಿದ್ದಕ್ಕಾಗಿ ನಾವು ಭಾರತೀಯ ಪಾಪರಾಜಿಗಳಿಗೆ ಮತ್ತು ಮಾಧ್ಯಮದವರಿಗೆ ಕೃತಜ್ಞರಾಗಿರುತ್ತೇವೆ’ ಎಂದಿದ್ದಾರೆ ಅನುಷ್ಕಾ.

ವಮಿಕಾಳ ಮುಖ ತೋರಿಸಿ ಎಂದವರಿಗೆ ಅನುಷ್ಕಾ ಶರ್ಮಾ ವಿಶೇಷ ಮನವಿ
ವಿರಾಟ್​-ಅನುಷ್ಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 19, 2021 | 10:08 PM

ಅನುಷ್ಕಾ ಶರ್ಮಾ (Anushka Sharma) ಹಾಗೂ ವಿರಾಟ್​ ಕೊಹ್ಲಿ (Virat Kohli) ದಂಪತಿಯ ಮಗು ವಮಿಕಾಗೆ (Vamika) ಒಂದು ವರ್ಷ ತುಂಬುತ್ತಾ ಬಂದಿದೆ. ಅಚ್ಚರಿ ಎಂದರೆ ಒಂದು ವರ್ಷದ ಅವಧಿಯಲ್ಲಿ ಅವರು ಎಲ್ಲಿಯೂ ಮಗುವಿನ ಮುಖವನ್ನು ತೋರಿಸಿಲ್ಲ. ಅವಳಿಗೆ ಅನಗತ್ಯ ಪ್ರಚಾರ ನೀಡುವುದು ಬೇಡ ಹಾಗೂ ಸೋಶಿಯಲ್​ ಮೀಡಿಯಾದಿಂದ ಆಕೆಯನ್ನು ದೂರವೇ ಇಡಬೇಕು ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ದಂಪತಿ ಆಕೆಯ ಫೋಟೋ ಹಂಚಿಕೊಂಡಿಲ್ಲ. ಇದನ್ನು ಮಾಧ್ಯಮದವರು ಹಾಗೂ ಪಾಪರಾಜಿಗಳು ಬೆಂಬಲಿಸುತ್ತಿದ್ದಾರೆ. ಆದಾಗ್ಯೂ ಕೆಲವರು ವಮಿಕಾಳ ಮುಖವನ್ನು ತೋರಿಸುವಂತೆ ಮನವಿ ಇಡುತ್ತಿದ್ದಾರೆ. ಅವರಿಗೆ ಅನುಷ್ಕಾ ವಿಶೇಷ ಪತ್ರ ಬರೆದಿದ್ದಾರೆ.

ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಸಾಲುಗಳನ್ನು ಬರೆದುಕೊಂಡಿರುವ ಅನುಷ್ಕಾ, ‘ವಮಿಕಾಳ ಚಿತ್ರಗಳು/ವಿಡಿಯೋಗಳನ್ನು ಪ್ರಕಟಿಸದಿದ್ದಕ್ಕಾಗಿ ನಾವು ಭಾರತೀಯ ಪಾಪರಾಜಿಗಳಿಗೆ ಮತ್ತು ಮಾಧ್ಯಮದವರಿಗೆ ಕೃತಜ್ಞರಾಗಿರುತ್ತೇವೆ’ ಎಂದಿದ್ದಾರೆ.

‘ನಮ್ಮ ಮಗುವಿಗೆ ಖಾಸಗಿತನ ನೀಡಿ. ಸೋಶಿಯಲ್​ ಮೀಡಿಯಾದಿಂದ ಮುಕ್ತವಾಗಿ ಜೀವನವನ್ನು ನಡೆಸಲು ಅವಳಿಗೆ ಅವಕಾಶವನ್ನು ಕೊಡಿ. ಅವಳು ಬೆಳೆದಂತೆ ನಾವು ಅವಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಬೆಂಬಲದ ಅಗತ್ಯವಿದೆ. ಅವಳ ಚಿತ್ರಗಳನ್ನು ಪೋಸ್ಟ್ ಮಾಡದಿರಲು ಕೋರುತ್ತೇವೆ. ನಮ್ಮ ಫ್ಯಾನ್​ ಕ್ಲಬ್‌ಗಳು ಮತ್ತು ಸೋಶಿಯಲ್​ ಮೀಡಿಯಾ ಬಳಕೆದಾರರಿಗೆ ವಿಶೇಷ ಧನ್ಯವಾದಗಳು’ ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಆಡಲು ವಿರಾಟ್​ ಕೊಹ್ಲಿ ಆ ದೇಶಕ್ಕೆ ತೆರಳಿದ್ದಾರೆ. ಅನುಷ್ಕಾ ಶರ್ಮಾ ಕೂಡ ವಿರಾಟ್​ ಜತೆಯಲ್ಲಿ ಇದ್ದಾರೆ. ವಿಮಾನ ನಿಲ್ದಾಣದಲ್ಲಿ ವಿರಾಟ್​ ಮಗುವನ್ನು ಕರೆದುಕೊಂಡು ಬಂದಿದ್ದರು. ಪಾಪರಾಜಿಗಳು ಫೋಟೋ ತೆಗೆಯೋಕೆ ಮುಂದಾದರು. ಮಗುವಿನ ಫೋಟೋವನ್ನು ತೆಗೆಯದಂತೆ ವಿರಾಟ್​ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪಾಪರಾಜಿಗಳು ಒಪ್ಪಿಗೆ ಸೂಚಿಸಿದ್ದರು.

ಅನುಷ್ಕಾ ತಮ್ಮ ಸಂಪೂರ್ಣ ಸಮಯವನ್ನು ಮಗುವಿಗೆ ನೀಡುತ್ತಿದ್ದಾರೆ. ಅವರು ನಟನೆಯಿಂದ ದೂರ ಉಳಿದು ಕೆಲವು ವರ್ಷಗಳು ಕಳೆದಿವೆ. ಸಿನಿಮಾ ನಿರ್ಮಾಣದತ್ತ ಅವರು ಹೆಚ್ಚು ಗಮನಹರಿಸುತ್ತಿದ್ದಾರೆ. ಅನುಷ್ಕಾ ಮತ್ತೆ ನಟನೆಗೆ ಮರಳಬೇಕು ಎಂಬುದು ಅನೇಕರ ಆಶಯ.

ಇದನ್ನೂ ಓದಿ: IND vs SA: ವಿರಾಟ್ ಶತಕದ ಬರ ನೀಗಲಿದೆ; ಕಿಂಗ್ ಕೊಹ್ಲಿಗೆ ಬ್ಯಾಟಿಂಗ್ ಪಾಠ ಮಾಡಿದ ಗುರು ದ್ರಾವಿಡ್

ವಿರಾಟ್​- ಅನುಷ್ಕಾ ಮನೆಯ ನೆರೆಮನೆಯವರಾಗಲಿದ್ದಾರೆ ಕತ್ರಿನಾ ಕೈಫ್​ – ವಿಕ್ಕಿ ಕೌಶಲ್​

Published On - 8:33 pm, Sun, 19 December 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ