ಆಮಿರ್ ಖಾನ್ ಜತೆ ‘ಘಜಿನಿ 2’ ಮಾಡ್ತೀರಾ? ಉತ್ತರ ನೀಡಿದ ನಿರ್ದೇಶಕ ಮುರುಗದಾಸ್

|

Updated on: Mar 21, 2025 | 12:04 PM

ಸೂಪರ್ ಹಿಟ್ ‘ಘಜನಿ’ ಸಿನಿಮಾಗೆ ಸೀಕ್ವೆಲ್ ಯಾವಾಗ ಬರಲಿದೆ ಎಂದು ಸಿನಿಪ್ರಿಯರು ಕೇಳುತ್ತಲೇ ಇದ್ದಾರೆ. ಈ ಬಗ್ಗೆ ನಿರ್ದೇಶಕ ಎ.ಆರ್. ಮುರುಗದಾಸ್ ಅವರು ಸುಳಿವು ನೀಡಿದ್ದಾರೆ. ಸೀಕ್ವೆಲ್ ಕುರಿತಂತೆ ಅವರು ಈಗಾಗಲೇ ಆಮಿರ್ ಖಾನ್ ಜೊತೆ ಮಾತುಕತೆ ನಡೆಸಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..

ಆಮಿರ್ ಖಾನ್ ಜತೆ ‘ಘಜಿನಿ 2’ ಮಾಡ್ತೀರಾ? ಉತ್ತರ ನೀಡಿದ ನಿರ್ದೇಶಕ ಮುರುಗದಾಸ್
Aamir Khan, Ar Murugadoss
Follow us on

ಆಮಿರ್ ಖಾನ್ (Aamir Khan) ಅವರು ಈಗ ಸಿನಿಮಾಗಳನ್ನು ಒಪ್ಪಿಕೊಳ್ಳುವಲ್ಲಿ ಅವಸರ ತೋರುತ್ತಿಲ್ಲ. ಸಿನಿಮಾಗಿಂತಲೂ ಹೆಚ್ಚಾಗಿ ವೈಯಕ್ತಿಕ ಜೀವನಕ್ಕೆ ಅವರು ಹೆಚ್ಚು ಗಮನ ನೀಡುತ್ತಿದ್ದಾರೆ. ಸದ್ಯದಲ್ಲೇ ಮೂರನೇ ಮದುವೆ ಆಗಲಿದ್ದಾರೆ. ಈ ನಡುವೆ ಅವರ ಅಭಿಮಾನಿಗಳಿಗೆ ‘ಘಜಿನಿ 2’ (Ghajini 2) ಸಿನಿಮಾ ಸೆಟ್ಟೇರುತ್ತೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಈ ಬಗ್ಗೆ ಕೆಲವು ಅಂತೆ-ಕಂತೆಗಳು ಮೊದಲಿನಿಂದಲೂ ಕೇಳಿಬರುತ್ತಿವೆ. ಈಗ ನಿರ್ದೇಶಕ ಮುರುಗದಾಸ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಘಜಿನಿ 2’ ಬಗ್ಗೆ ಈಗಾಗಲೇ ಮಾತುಕಥೆ ಆರಂಭ ಆಗಿರುವುದಾಗಿ ಎ.ಆರ್. ಮುರುಗದಾಸ್ (AR Murugadoss) ಅವರು ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಮೇಲೆ ಅಭಿಮಾನಿಗಳ ಕೌತುಕ ಜಾಸ್ತಿ ಆಗಿದೆ.

ಕಾಲಿವುಡ್ ನಿರ್ದೇಶಕ ಎ.ಆರ್. ಮುರುಗದಾಸ್ ಅವರಿಗೆ ಬಾಲಿವುಡ್​ನಲ್ಲೂ ಬೇಡಿಕೆ ಇದೆ. ಈಗ ಅವರು ಸಲ್ಮಾನ್ ಖಾನ್ ಜೊತೆ ‘ಸಿಕಂದರ್’ ಸಿನಿಮಾ ಮಾಡಿದ್ದಾರೆ. ಮಾರ್ಚ್​ 30ರಂದು ‘ಸಿಕಂದರ್’ ಬಿಡುಗಡೆ ಆಗಲಿದೆ. ಆ ಬಳಿಕ ಅವರು ‘ಘಜಿನಿ 2’ ಸಿನಿಮಾ ಶುರು ಮಾಡಲಿ ಎಂಬುದು ಫ್ಯಾನ್ಸ್ ಆಸೆ. ಆದರೆ ಅದಕ್ಕೆ ಇನ್ನೂ ಸಮಯ ಹತ್ತಿರ ಆಗಿಲ್ಲ. ಆದರೆ ಆಮಿರ್ ಖಾನ್ ಜೊತೆ ಅವರು ಚರ್ಚೆ ಮಾಡಿರುವುದು ನಿಜ.

ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸೆಟ್​ನಲ್ಲಿ ಎ.ಆರ್. ಮುರುಗದಾಸ್ ಮತ್ತು ಆಮಿರ್ ಖಾನ್ ಅವರು ಭೇಟಿ ಆಗಿದ್ದರು. ಆಗ ‘ಘಜಿನಿ 2’ ಬಗ್ಗೆ ಮಾತುಕಥೆ ಮಾಡಲಾಗಿತ್ತು ಎಂದು ಮುರುಗದಾಸ್ ಅವರು ಹೇಳಿದ್ದಾರೆ. ‘ಅಂದು ನಾವು ಭೇಟಿ ಆದೆವು. ಕೆಲವು ಮಾತುಕಥೆ ಮಾಡಿದೆವು. ನಮ್ಮ ಬಳಿ ಕೆಲವು ಐಡಿಯಾಗಳು ಇವೆ. ಆ ಬಳಿಕ ಫೋನ್​ನಲ್ಲಿ ಮಾತನಾಡುತ್ತಿದ್ದೇವೆ’ ಎಂದಿದ್ದಾರೆ ಎ.ಆರ್. ಮುರುಗದಾಸ್.

ಇದನ್ನೂ ಓದಿ
ಆಮಿರ್ ಖಾನ್-ರಣ್​ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಹೊಸ ಪ್ರಾಜೆಕ್ಟ್​ಗಾಗಿ ಒಂದಾದ ಆಮಿರ್-ರಣಬೀರ್; ವಿಚಾರ ರಿವೀಲ್ ಮಾಡಿದ ಆಲಿಯಾ
59ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಮೇಲೆ ಆಮಿರ್​​​ಗೆ ಲವ್? ಯಾರು ಈ ಗೌರಿ?
ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಇದನ್ನೂ ಓದಿ: ಆಮಿರ್ ಖಾನ್ ಜತೆ ‘ಗಜಿನಿ 2’ ಸಿನಿಮಾ ಮಾಡಲು ಮುಂದಾದ ಅಲ್ಲು ಅರ್ಜುನ್ ತಂದೆ

ಕಾಲಿವುಡ್​ನಲ್ಲಿ ಸೂರ್ಯ ನಟನೆಯ ‘ಘಜಿನಿ’ ಸಿನಿಮಾ 2005ರಲ್ಲಿ ಬಿಡುಗಡೆ ಆಗಿತ್ತು. ಅದೇ ಸಿನಿಮಾವನ್ನು ಆಮಿರ್ ಖಾನ್ ಅವರು ಹಿಂದಿಗೆ 2008ರಲ್ಲಿ ರಿಮೇಕ್ ಮಾಡಿದ್ದರು. ಈಗ ಸೀಕ್ವೆಲ್ ಮಾಡಿದರೆ ತಮಿಳಿನಲ್ಲಿ ಸೂರ್ಯ ಹಾಗೂ ಹಿಂದಿಯಲ್ಲಿ ಆಮಿರ್ ಖಾನ್ ಒಟ್ಟಿಗೆ ಸಿನಿಮಾ ಆರಂಭಿಸುವ ಪ್ಲ್ಯಾನ್ ಹೊಂದಿದ್ದಾರೆ. ಆದರೆ ಸರಿಯಾದ ಸ್ಕಿಪ್ಟ್ ಸಿಗಬೇಕಿದೆ. ಸುಮ್ಮನೆ ಹಣಕ್ಕಾಗಿ ಅವರು ಈ ಸಿನಿಮಾ ಮಾಡುವುದಿಲ್ಲ ಎಂದು ಆಪ್ತ ಮೂಲಗಳು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿ ಆಗಿದೆ. ಒಟ್ಟಿನಲ್ಲಿ ಅಭಿಮಾನಿಗಳು ಘಜಿನಿ ಸೀಕ್ವೆಲ್ ನೋಡಲು ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.