‘We Stand With SRK’ ಎಂದು ಶಾರುಖ್​ ಪರ ನಿಂತಿರುವ ಇವರೆಲ್ಲ ಯಾರು? ಟ್ವಿಟರ್​ನಲ್ಲಿ ಜೋರಾಗಿದೆ ಟ್ರೆಂಡ್​

| Updated By: ಮದನ್​ ಕುಮಾರ್​

Updated on: Oct 04, 2021 | 1:45 PM

ಆರ್ಯನ್​ ಖಾನ್​ ಡ್ರಗ್ಸ್​ ಕೇಸ್​ ವಿಚಾರದಲ್ಲಿ ಶಾರುಖ್​ ಖಾನ್​ಗೆ ಬೆಂಬಲ ನೀಡುತ್ತಿರುವವರೆಲ್ಲ ಅವರ ಡೈಹಾರ್ಡ್​ ಅಭಿಮಾನಿಗಳು. ಅವರೆಲ್ಲ ತಮ್ಮದೇ ಮೊಂಡುವಾದವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

‘We Stand With SRK’ ಎಂದು ಶಾರುಖ್​ ಪರ ನಿಂತಿರುವ ಇವರೆಲ್ಲ ಯಾರು? ಟ್ವಿಟರ್​ನಲ್ಲಿ ಜೋರಾಗಿದೆ ಟ್ರೆಂಡ್​
ಆರ್ಯನ್ ಖಾನ್, ಶಾರುಖ್ ಖಾನ್
Follow us on

ಡ್ರಗ್ಸ್​ ಪಾರ್ಟಿ ಮಾಡುತ್ತಿರುವಾಗ ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರು ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಅಷ್ಟೇ ಅಲ್ಲ, ಈ ಕುರಿತು ಪರ-ವಿರೋಧದ ಚರ್ಚೆ ಕೂಡ ಆಗುತ್ತಿದೆ. ಕೆಲವರು ಆರ್ಯನ್​ ಖಾನ್ ಪರವಾಗಿ ಬ್ಯಾಟ್​ ಬೀಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ #WeStandWithSRK ಎಂಬ ಹ್ಯಾಷ್​ಟ್ಯಾಗ್​ ಮೂಲಕ ಅನೇಕರು ಶಾರುಖ್​ ಖಾನ್​ ಪರ ನಿಂತಿದ್ದಾರೆ.

ಬಾಲಿವುಡ್​ನ ಸೂಪರ್​ ಸ್ಟಾರ್​ ನಟನ ಮಗ ಎಂಬುದನ್ನೂ ಲೆಕ್ಕಿಸದೇ ಅರೆಸ್ಟ್​ ಮಾಡಿರುವ ಎನ್​ಸಿಬಿ ಅಧಿಕಾರಿಗಳನ್ನು ಅನೇಕರು ಶ್ಲಾಘಿಸುತ್ತಿದ್ದಾರೆ. ಆದರೆ ಕೆಲವರು ಮಾತ್ರ ಆರ್ಯನ್​ ಖಾನ್​ ಪರ ಮಾತನಾಡುತ್ತಿದ್ದಾರೆ. ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಕೂಡ ಶಾರುಖ್​ ಪುತ್ರನಿಗೆ ಕರುಣೆ ತೋರಿಸುವ ರೀತಿಯಲ್ಲಿ ಟ್ವೀಟ್​ ಮಾಡಿ, ನೆಟ್ಟಿಗರಿಂದ ವಿರೋಧ ಎದುರಿಸುತ್ತಿದ್ದಾರೆ. ಅದರ ಬೆನ್ನಲೇ #WeStandWithSRK ಎಂಬ ಹ್ಯಾಷ್​ಟ್ಯಾಗ್ ಮೂಲಕ ಶಾರುಖ್​ ಫ್ಯಾನ್ಸ್​ ಅಭಿಯಾನ ಶುರುಮಾಡಿಕೊಂಡಿದ್ದಾರೆ.

ಶಾರುಖ್​ ಖಾನ್​ಗೆ ಬೆಂಬಲ ನೀಡುತ್ತಿರುವವರೆಲ್ಲ ಅವರ ಡೈಹಾರ್ಡ್​ ಅಭಿಮಾನಿಗಳು. ಅವರೆಲ್ಲ ತಮ್ಮದೇ ಮೊಂಡುವಾದವನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ‘ಶಾರುಖ್​ ಖಾನ್​ರನ್ನು ಮಣಿಸಲು ಆಗದವರು ಈಗ ಅವರ ಮಕ್ಕಳ ಮೂಲಕ ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ನೋಡುತ್ತಿದ್ದಾರೆ. ಏನೇ ಆದರೂ ನಾವು ಶಾರುಖ್​ ಪರ ನಿಲ್ಲುತ್ತೇವೆ’ ಎಂದು ಅನೇಕರು ಟ್ವೀಟ್​ ಮಾಡಿದ್ದಾರೆ.

ಹೈ-ಪ್ರೊಫೈಲ್​ ವ್ಯಕ್ತಿಗಳ ಜೀವನದಲ್ಲಿ ಏನೇ ನಡೆದರೂ ಕೂಡ ಮಾಧ್ಯಮಗಳು ತೀರ್ಪು ನೀಡಲು ಮುಂದಾಗುತ್ತವೆ ಎಂಬುದು ಅನೇಕ ಆರೋಪ. ಸದ್ಯ ಅಧಿಕಾರಿಗಳು, ವಕೀಲರು ಅವರವರ ಕೆಲಸ ಮಾಡುತ್ತಿದ್ದಾರೆ. ಕೋರ್ಟ್​ ತೀರ್ಪು ನೀಡುವುದಕ್ಕಿಂತಲೂ ಮುನ್ನವೇ ಶಾರುಖ್​ ಪುತ್ರನನ್ನು ಟಾರ್ಗೆಟ್​ ಮಾಡುವುದು ಸರಿಯಲ್ಲ ಎಂದು ಕೂಡ ಕೆಲವರು ವಾದಿಸುತ್ತಿದ್ದಾರೆ.

ಎನ್​ಸಿಬಿ ಅಧಿಕಾರಿಗಳು ಆರ್ಯನ್​ಗೆ ಹಲವು ಪ್ರಶ್ನೆ ಕೇಳಿದ್ದಾರೆ. ವಿಚಾರಣೆ ವೇಳೆ ಅನೇಕ ಸತ್ಯಗಳನ್ನು ಅವರು ಬಾಯಿ ಬಿಟ್ಟಿದ್ದಾರೆ. ಕಳೆದ ನಾಲ್ಕು ವರ್ಷದಿಂದಲೂ ತಾವು ಡ್ರಗ್ಸ್​ ಸೇವಿಸುತ್ತಿರುವುದಾಗಿ ಆರ್ಯನ್ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿದೆ. ಅವರಿಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಹರಸಾಹಸ ಮಾಡುತ್ತಿದ್ದಾರೆ.

ಇದನ್ನೂ ಓದಿ:

‘ನನ್ನ ಮಗ ಡ್ರಗ್ಸ್​ ಸೇವಿಸಲಿ, ಹುಡುಗಿಯರ ಹಿಂದೆ ಹೋಗಲಿ’ ಎಂದಿದ್ದ ಶಾರುಖ್​; ಇಲ್ಲಿದೆ ಶಾಕಿಂಗ್​ ವಿಡಿಯೋ​

ಶಾರುಖ್​ ಪುತ್ರ ಆರ್ಯನ್​ ಖಾನ್​ ಅರೆಸ್ಟ್​ ಆದಾಗ ಅಕ್ಷಯ್​ ಕುಮಾರ್​ ಮಗ ಆರವ್​ ಏನು ಮಾಡ್ತಿದ್ರು? ಎಲ್ಲಿದ್ರು?