
ನಟಿ ಅನನ್ಯಾ ಪಾಂಡೆ (Ananya Pandey) ಅವರು ಬಾಲಿವುಡ್ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನಟ ಚಂಕಿ ಪಾಂಡೆ ಮಗಳು ಎಂಬ ಕಾರಣಕ್ಕೆ ಅವರಿಗೆ ಸುಲಭದಲ್ಲಿ ಅವಕಾಶಗಳು ದೊರೆತವು. ಆದರೆ, ಯಶಸ್ಸು ಮಾತ್ರ ಅವರಿಗೆ ಸಿಕ್ಕೇ ಇಲ್ಲ ಅನ್ನೋದು ಬೇಸರದ ವಿಚಾರ. ಈ ಮಧ್ಯೆ ಅವರ ಹಳೆಯ ಸಂದರ್ಶನದ ಬಗ್ಗೆ ಚರ್ಚೆ ಆಗಿದೆ. ಅನನ್ಯಾ ಅವರ ಬಗ್ಗೆ ಎಲ್ಲರೂ ನಾನಾ ರೀತಿಯ ಕಮೆಂಟ್ಗಳನ್ನು ಮಾಡುತ್ತಿದ್ದರಂತೆ. ಇದರಿಂದ ಅನನ್ಯಾ ಪಾಂಡೆ ಅವರು ಸಖತ್ ಬೇಸರ ಮಾಡಿಕೊಳ್ಳುತ್ತಿದ್ದರು.
ಅನನ್ಯಾ ಪಾಂಡೆ ಅವರು ‘ಸ್ಟುಡೆಂಟ್ ಆಫ್ ದಿ ಇಯರ್ ಸೀಸನ್ 2’ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅವರು ನಟಿಸಿ ಮೊದಲ ಸಿನಿಮಾ ಫ್ಲಾಪ್ ಆಯಿತು. ಮೊದಲ ಸಿನಿಮಾ ನೆಲಕಚ್ಚಿದರೆ ಏನಂತೆ, ಮತ್ತೆ ಸಿನಿಮಾ ಮಾಡಿ ಗೆದ್ದರಾಯಿತು ಬಿಡು ಎಂದು ಅವರು ಅಂದುಕೊಂಡರು. ಆದರೆ, ಅದೃಷ್ಟ ಅವರ ಪರವಾಗಿ ಇರಲಿಲ್ಲ ಎನ್ನಿ.
‘ಪತಿ ಪತ್ನಿ ಔರ್ ವೋ’, ‘ಖಾಲಿ ಪೀಲಿ’, ‘ಗೆಹರಾಯಿಯಾ’ ಹೀಗೆ ಎಲ್ಲಾ ಸಿನಿಮಾಗಳು ಸೋಲೋಕೆ ಆರಂಭ ಆದವು. ಇತ್ತೀಚೆಗೆ ರಿಲೀಸ್ ಆದ ‘ಕೇಸರಿ ಚಾಪ್ಟರ್ 2’ ಸ್ವಲ್ಪ ಓಕೆ ಎಂಬ ರೀತಿಯಲ್ಲಿ ಪ್ರದರ್ಶನ ಕಂಡಿತು. ಸಾಮಾನ್ಯವಾಗಿ ಸಿನಿಮಾ ಗೆಲುವು ಕಂಡಿಲ್ಲ ಎಂದಾಗ, ಯಶಸ್ಸು ಸಿಕ್ಕಿಲ್ಲ ಎಂದಾಗ ಟ್ರೋಲ್ ಆಗೋದು ಸಾಮಾನ್ಯ. ಅನನ್ಯಾ ಪಾಂಡೆಗೂ ಹಾಗೆಯೇ ಆಗಿತ್ತು.
‘ನನಗೆ 18 ಅಥವಾ 19 ವರ್ಷ ಇರಬಹುದು. ನಾನು ಹೊರಗೆ ಗುರುತಿಸಿಕೊಳ್ಳಲು ಆರಂಭಿಸಿದ್ದೆ. ನಾನು ತೆಳ್ಳಗಿದ್ದೆ. ನನ್ನ ಬಗ್ಗೆ ಎಲ್ಲರೂ ಟೀಕೆ ಮಾಡುತ್ತಿದ್ದರು. ನಿಮ್ಮದು ಕೋಳಿ ಕಾಲು, ಬೆಂಕಿ ಕಡ್ಡಿ ರೀತಿ ಕಾಣುತ್ತೀಯಾ, ನಿಮಗೆ ಎದೆ ಭಾಗ, ಹಿಂಭಾಗದಲ್ಲಿ ಏನೂ ಇಲ್ಲ ಎನ್ನುತ್ತಿದ್ದರು’ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: 26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?
ಅನನ್ಯಾ ಪಾಂಡೆ ಈಗಲೂ ಟೀಕೆ ಎದುರಿಸುತ್ತಾರೆ. ನೆಪೋ ಕಿಡ್ ಎಂಬ ಕಾರಣಕ್ಕೆ ಅನನ್ಯಾ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದು ಇದೆ. ಅವರ ಬಗ್ಗೆ ಒಂದಲ್ಲಾ ಒಂದು ಟೀಕೆಗಳು ಹೊರ ಬರುತ್ತಲೇ ಇರುತ್ತವೆ. ಅವರು ಈಗ ಅವರು ಹೊಸ ಸಿನಿಮಾ ಒಪ್ಪಿಕೊಳ್ಳಲು ಎಚ್ಚರಿಕೆ ವಹಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.