Anupam Shyam Death: ಬಹು ಅಂಗಾಂಗ ವೈಫಲ್ಯದಿಂದ ಹಿರಿಯ ನಟ ಅನುಪಮ್ ಶ್ಯಾಮ್ ನಿಧನ
Anupam Shyam: ‘ಮನ್ ಕಿ ಅವಾಜ್: ಪ್ರತಿಗ್ಯಾ’ ಸೀರಿಯಲ್ ಮೂಲಕ ಅನುಪಮ್ ಶ್ಯಾಮ್ ಫೇಮಸ್ ಆಗಿದ್ದರು. ‘ಸ್ಲಂ ಡಾಗ್ ಮಿಲಿಯನೇರ್’, ‘ಬ್ಯಾಂಡಿಟ್ ಕ್ವೀನ್’ ಮುಂತಾದ ಸಿನಿಮಾಗಳಲ್ಲೂ ಅವರು ನಟಿಸಿದ್ದರು.
ಹಿರಿಯ ನಟ ಅನುಪಮ್ ಶ್ಯಾಮ್ (Anupam Shyam) ಅವರು ಸೋಮವಾರ (ಆ.9) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಲವೇ ದಿನಗಳ ಹಿಂದೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹು ಅಂಗಾಗ ವೈಫಲ್ಯದಿಂದ ಅವರು ಕೊನೆಯುಸಿರು ಎಳೆದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡದ ಸೋಂಕಿನ (Kidney Infection) ಕಾರಣ ಅನುಪಮ್ ಶ್ಯಾಮ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ನಿಧನದ ಸುದ್ದಿಯನ್ನು ಸ್ನೇಹಿತ, ನಟ ಯಶ್ಪಾಲ್ ಶರ್ಮಾ ಖಚಿತಪಡಿಸಿದ್ದಾರೆ.
‘ಮನ್ ಕಿ ಅವಾಜ್: ಪ್ರತಿಗ್ಯಾ’ ಸೀರಿಯಲ್ ಮೂಲಕ ಅನುಪಮ್ ಶ್ಯಾಮ್ ಫೇಮಸ್ ಆಗಿದ್ದರು. ‘ಸ್ಲಂ ಡಾಗ್ ಮಿಲಿಯನೇರ್’, ‘ಬ್ಯಾಂಡಿಟ್ ಕ್ವೀನ್’ ಮುಂತಾದ ಸಿನಿಮಾಗಳಲ್ಲೂ ಅವರು ನಟಿಸಿದ್ದರು. ಅನುಪಮ್ ಶ್ಯಾಮ್ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ. ‘ಅವರು ಕೊನೆಯುಸಿರು ಎಳೆಯುವಾಗ ಸಹೋದರರಾದ ಅನುರಾಗ್ ಮತ್ತು ಕಾಂಚನ್ ಜೊತೆಯಲ್ಲಿ ಇದ್ದರು. ಅನುಪಮ್ಗೆ ಮಧುಮೇಹ ಅಧಿಕವಾಗಿತ್ತು. ತಮ್ಮ ಕೊನೇ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರು’ ಎಂದು ಯಶ್ಪಾಲ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ:
ಜಯಂತಿ ನಿಧನಕ್ಕೆ ಕಂಬನಿ ಮಿಡಿದ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್
Published On - 10:14 am, Mon, 9 August 21