ಶೆರ್ಲಿನ್​ ನೀಡಿದ ಮಾಹಿತಿಯಿಂದ ರಾಜ್​ ಕುಂದ್ರಾಗೆ ಮತ್ತಷ್ಟು ಸಂಕಷ್ಟ; ಚೋಪ್ರಾ ಹಂಚಿಕೊಂಡಿದ್ದೇನು?

ನಟಿ ಶೆರ್ಲಿನ್​ ಚೋಪ್ರಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಅವರಿಗೆ ಏನನ್ನು ಕೇಳಲಾಗಿತ್ತು ಎಂಬುದಕ್ಕೆ ಇಲ್ಲಿದೆ ಉತ್ತರ.

ಶೆರ್ಲಿನ್​ ನೀಡಿದ ಮಾಹಿತಿಯಿಂದ ರಾಜ್​ ಕುಂದ್ರಾಗೆ ಮತ್ತಷ್ಟು ಸಂಕಷ್ಟ; ಚೋಪ್ರಾ ಹಂಚಿಕೊಂಡಿದ್ದೇನು?
ರಾಜ್​ ಕುಂದ್ರಾ- ಶೆರ್ಲಿನ್​ ಚೋಪ್ರಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 09, 2021 | 4:08 PM

ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್​ ಕುಂದ್ರಾ ಬಂಧನ ನಡೆದು ಕೆಲ ವಾರಗಳು ಕಳೆದಿವೆ. ಅವರ ಜಾಮೀನು ಅರ್ಜಿ ಕೂಡ ವಜಾಗೊಂಡಿದ್ದು, ಜೈಲಿನಲ್ಲಿ ಕಳೆಯೋದು ಅನಿವಾರ್ಯ ಆಗಿದೆ. ಈ ಮಧ್ಯೆ ನೀಲಿ ಚಿತ್ರ ಪ್ರಕರಣದಲ್ಲಿ ನಟಿ ಶೆರ್ಲಿನ್​ ಚೋಪ್ರಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಈ ವೇಳೆ ಅವರಿಗೆ ಏನನ್ನು ಕೇಳಲಾಗಿತ್ತು ಎಂಬುದಕ್ಕೆ ಇಲ್ಲಿದೆ ಉತ್ತರ.

ವಿಚಾರಣೆ ಮುಗಿಸಿ ಬಂದ ನಂತರ ಮಾತನಾಡಿದ ಶೆರ್ಲಿನ್ ಚೋಪ್ರಾ, ‘ಕೆಲವು ದಿನಗಳ ಹಿಂದೆ ತನಿಖಾಧಿಕಾರಿಗಳು ನನಗೆ ಸಮನ್ಸ್ ನೀಡಿದ್ದರು. ನಾನು ಇಂದು ಅಧಿಕಾರಿಗಳ ಮುಂದೆ ಹಾಜರಾಗಿದ್ದೆ. ಈ ವೇಳೆ ರಾಜ್ ಕುಂದ್ರಾಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ನನ್ನನ್ನು ಕೇಳಿದರು. ಆರ್ಮ್ಸ್‌ಪ್ರೈಮ್‌ ಆ್ಯಪ್​​ನೊಂದಿಗೆ ನನ್ನ ಒಪ್ಪಂದದ ಬಗ್ಗೆ, ಒಪ್ಪಂದದ ನಿಯಮಗಳು ಮತ್ತು ಷರತ್ತುಗಳೇನು ಎಂದು ಅವರು ನನ್ನನ್ನು ಕೇಳಿದರು. ಎಷ್ಟು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದೀರಿ ಎಂಬುದನ್ನು ಕೇಳಿದರು’ ಎಂದಿದ್ದಾರೆ ಶೆರ್ಲಿನ್​.

‘ರಾಜ್ ಕುಂದ್ರಾ ಅವರೊಂದಿಗಿನ ನನ್ನ ಸಂಬಂಧ ಹೇಗಿದೆ ಎಂದು ಕೇಳಿದರು. ಅವರ ಮಾಲಿಕತ್ವದ ಇತರ ಕಂಪನಿಗಳ ಬಗ್ಗೆ ನಿಮಗೆ ಏನಾದರೂ ಮಾಹಿತಿ ಇದೆಯೇ? ಎಂದು ನನ್ನನ್ನು ಪ್ರಶ್ನಿಸಿದರು. ದಯವಿಟ್ಟು ಈ ನೀಲಿ ಚಿತ್ರ ದಂಧೆಗೆ ಬಲಿಯಾದ ಎಲ್ಲ ಮಹಿಳೆಯರು, ಕಲಾವಿದರಿಗೆ ನ್ಯಾಯ ಕೊಡಿಸಿ ಎಂದು ಕೇಳಿದೆ. ಈ ದಂಧೆ ನಿಲ್ಲಬೇಕು. ಯಾರಿಗಾದರೂ ಈ ದಂಧೆಗೆ ಸಂಬಂಧಪಟ್ಟಂತೆ ಏನಾದರೂ ತಿಳಿದಿದ್ದರೆ, ದಯವಿಟ್ಟು ಮುಂದೆ ಬನ್ನಿ ಮತ್ತು ಮಾಹಿತಿಯನ್ನು ಪೊಲೀಸರೊಂದಿಗೆ ಹಂಚಿಕೊಳ್ಳಿ’ ಎಂದು ಕೋರಿದ್ದಾರೆ ಅವರು.

ವಿಚಾರಣೆ ವೇಳೆ ಶೆರ್ಲಿನ್​ ಚೋಪ್ರಾ ಪೊಲೀಸರ ಜತೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಪೊಲೀಸರು ಇದನ್ನೇ ಇಟ್ಟುಕೊಂಡು ರಾಜ್​ ಕುಂದ್ರಾ ಅವರನ್ನು ಪ್ರಶ್ನಿಸಬಹುದು. ಅಲ್ಲದೆ, ರಾಜ್​ ಕುಂದ್ರಾ ಪ್ರಕರಣದಲ್ಲಿ ಇದನ್ನು ಪ್ರಮುಖ ಸಾಕ್ಷಿ ಎಂದು ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಈ ಎಲ್ಲಾ ಕಾರಣಕ್ಕೆ ರಾಜ್​ ಕುಂದ್ರಾ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಬಹುದು.

ಇದನ್ನೂ ಓದಿ: ‘ಶಿಲ್ಪಾ ಶೆಟ್ಟಿಗೂ ನಿಮ್ಮ ವಿಡಿಯೋ ಸಖತ್​ ಇಷ್ಟ’ ಎಂದು ಪತ್ನಿ ಹೆಸರಲ್ಲಿ ಶೆರ್ಲಿನ್​ಗೆ ಯಾಮಾರಿಸಿದ್ದ ರಾಜ್​ ಕುಂದ್ರಾ