ಬಾಲಿವುಡ್ನ ಖ್ಯಾತ ನಿರ್ದೇಶಕ ರಾಕೇಶ್ ರೋಷನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಲಿವುಡ್ನಲ್ಲಿ ಹಲವು ಭಿನ್ನ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಆದರೆ, ಈಗ ಅವರು ಟ್ರೋಲ್ ಆಗಿದ್ದಾರೆ. ‘ಕೆಜಿಎಫ್ 2’, ‘ಪುಷ್ಪ 2’ ರೀತಿಯ ಸಿನಿಮಾಗಳ ಯಶಸ್ವಿ ಸಿನಿಮಾ ಬಗ್ಗೆ ಅವರು ಕಮೆಂಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ‘ದಕ್ಷಿಣದ ಸಿನಿಮಾಗಳು ಈ ಹಿಂದಿನ ಟ್ರೆಂಡ್ನ ಫಾಲೋ ಮಾಡುತ್ತಿವೆ. ಹಾಡು, ಆ್ಯಕ್ಷನ್, ಡೈಲಾಗ್ ಹಾಗೂ ಭಾವನಾತ್ಮಕ ದೃಶ್ಯವನ್ನು ತೋರಿಸುತ್ತಿವೆ. ಅವರು ಏಳ್ಗೆ ಕಾಣುತ್ತಿಲ್ಲ. ಅವರು ಯಾವುದೇ ಹೊಸ ಮಾರ್ಗ ಅನ್ವೇಷಣೆ ಮಾಡದ ಕಾರಣ ಯಶಸ್ವಿಯಾಗಿದ್ದಾರೆ’ ಎಂದು ಹೇಳಿದ್ದಾರೆ.
‘ನಾವು ಹೊಸ ಮಾರ್ಗ ಅನ್ವೇಷಿಸುತ್ತಿದ್ದೇವೆ. ‘ಕ ಹೋನಾ ಪ್ಯಾರ್ ಹೇ’ ಬಳಿಕ ನಾನು ರೊಮ್ಯಾಂಟಿಕ್ ಸಿನಿಮಾ ಮಾಡಿಲ್ಲ. ನಾನು ಕೊಯಿ ಮಿಲ್ ಗಯಾ ಮಾಡಿದೆ. ನಾನು ರೋಹಿತ್ನ (ಹೃತಿಕ್ ಪಾತ್ರದ ಹೆಸರು) ಸೂಪರ್ ಹೀರೋ ಮಾಡಿದೆ. ನಾವು ಈ ರೀತಿಯ ಚಾಲೆಂಜ್ನ ಸ್ವೀಕರಿಸಿದ್ದೇವೆ. ಅವರಿಗೆ ಇದು ಸಾಧ್ಯವಾಗುತ್ತಿಲ್ಲ. ಅವರು ಸೇಫ್ ಆಗಿ ಆಡುತ್ತಿದ್ದಾರೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಬಾಲಿವುಡ್ನಲ್ಲಿ ಅವಕಾಶಗಳ ಮೇಲೆ ಅವಕಾಶ ಬಾಚಿಕೊಳ್ಳುತ್ತಿರುವ ಶ್ರೀಲೀಲಾ
ಇತ್ತೀಚೆಗೆ ಬಾಲಿವುಡ್ನ ಯಾವುದೇ ಸಿನಿಮಾಗಳು ಹಿಟ್ ಆಗುತ್ತಿಲ್ಲ. ಬದಲಿಗೆ ಅವುಗಳು ಸೋಲು ಕಾಣುತ್ತಿವೆ. ದೊಡ್ಡ ಬಜೆಟ್ ಚಿತ್ರಗಳು ಮಕಾಡೆ ಮಲಗುತ್ತಿವೆ. ನಿರ್ದೇಶಕರು ಯಾವ ರೀತಿಯ ಸಿನಿಮಾಗಳು ಮಾಡಬೇಕು ಎಂದು ಯೋಚಿಸುತ್ತಿದ್ದಾರೆ. ಹೀಗಿರುವಾಗಲೇ ದಕ್ಷಿದ ಸಿನಿಮಾಗಳು ಭರ್ಜರಿ ಗಳಿಕೆ ಮಾಡತ್ತಿದೆ. ‘ಕೆಜಿಎಫ್ 2’, ‘ಆರ್ಆರ್ಆರ್’ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಹಲ್ಚಲ್ ಎಬ್ಬಿಸಿದೆ. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಆದಾಗ್ಯೂ ರಾಕೇಶ್ ರೋಷನ್ ಹೀಗೇಕೆ ಹೇಳಿದರು ಎಂಬ ಪ್ರಶ್ನೆ ಮೂಡಿದೆ.
ಸದ್ಯ ರಾಕೇಶ್ ರೋಷನ್ ಹೇಳಿಕೆಗೆ ಎಲ್ಲ ಕಡೆಗಳಲ್ಲಿ ಟೀಕೆ ವ್ಯಕ್ತವಾಗಿದೆ. ಅವರು ಹೇಳಿಕೆ ಹಿಂಪಡೆಯಬೇಕು ಎಂದಿದ್ದಾರೆ. ‘ಬಾಲಿವುಡ್ ಸಿನಿಮಾಗಳಲ್ಲೂ ಸಾಂಗ್ ಹಾಗೂ ಫೈಟ್ ಬಿಟ್ಟು ಬೇರೆ ಏನೇ ಇರುವುದಿಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ರಾಕೇಶ್ ರೋಷನ್ಗೆ ವಯಸ್ಸಾಗಿದ್ದು, ಅವರು ನಿರ್ದೇಶನದಿಂದ ನಿವೃತ್ತಿ ಪಡೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ