ಈ ಸೆಲೆಬ್ರಿಟಿಗಳು ಭದ್ರತೆಗೆ ಖರ್ಚು ಮಾಡುತ್ತಿದ್ದಾರೆ ಕೋಟಿ ಕೋಟಿ ಹಣ
ಸೈಫ್ ಅಲಿ ಖಾನ್ ಅವರ ಮನೆ ಮೇಲೆ ನಡೆದ ದಾಳಿಯು ಬಾಲಿವುಡ್ ನಟರ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬಾಲಿವುಡ್ ತಾರೆಗಳ ಭದ್ರತಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಈ ಘಟನೆ ಬಹಿರಂಗಪಡಿಸಿದೆ. ಸೈಫ್ ಅಲಿ ಖಾನ್ ಸೇರಿದಂತೆ ಇತರ ಪ್ರಮುಖ ನಟರ ಭದ್ರತಾ ವೆಚ್ಚ ಮತ್ತು ಅವರ ಅಂಗರಕ್ಷಕರ ಸಂಬಳದ ವಿವರ ಇಲ್ಲಿದೆ.
ಸೈಫ್ ಅಲಿ ಖಾನ್ ಮೇಲೆ ದಾಳಿ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಬುಧವಾರ (ಜನವರಿ 16) ಮಧ್ಯರಾತ್ರಿ 2 ಗಂಟೆ ಸುಮಾರಿಗೆ ದಾಳಿ ನಡೆದಿದೆ. ಆ ಬಳಿಕ ಭದ್ರತೆಯ ಪ್ರಶ್ನೆ ಎದ್ದಿದೆ. ಬಾಲಿವುಡ್ ತಾರೆಯರು ಭದ್ರತೆಗೆ ಹೆಚ್ಚಿನ ಖರ್ಚು ಮಾಡುತ್ತಿದ್ದಾರೆ. ಸೈಫ್ ಅಲಿ ಖಾನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಭದ್ರತೆಗಾಗಿ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಆದಾಗ್ಯೂ ಸೈಫ್ ಮನೆ ಮೇಲೆ ದಾಳಿ ನಡೆದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ. ಯಾವ ಹೀರೋಗಳು ಎಷ್ಟು ಹಣ ಖರ್ಚು ಮಾಡುತ್ತಿದ್ದಾರೆ ಎಂಬ ಬಗ್ಗೆ ಇಲ್ಲಿದೆ ವಿವರ.
ಸೈಫ್ ಅಲಿ ಖಾನ್ ಮತ್ತು ಅವರ ಪತ್ನಿ ಕರೀನಾ ಕಪೂರ್ ಬಾಂದ್ರಾದ ಸದ್ಗುರು ಶರಣ್ ಅಪಾರ್ಟ್‌ಮೆಂಟ್‌ನಲ್ಲಿ ಖಾನ್ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಈ ಮನೆಯನ್ನು ಪ್ರಸಿದ್ಧ ಇಂಟೀರಿಯರ್ ಡಿಸೈನರ್ ದರ್ಶಿನಿ ಶಾ ವಿನ್ಯಾಸಗೊಳಿಸಿದ್ದಾರೆ . ಸೈಫ್ ಅಲಿ ಖಾನ್ ವಾಸಿಸುವ ಕಟ್ಟಡದಲ್ಲಿ 3BHK ಫ್ಲಾಟ್‌ನ ಬೆಲೆ 10 ಕೋಟಿಗೂ ಹೆಚ್ಚು. ಸೈಫ್ ಅವರ ಫ್ಲ್ಯಾಟ್ ಬೆಲೆ 100 ಕೋಟಿ ರೂಪಾಯಿ ಇದೆ. ಇವರು ನಾಲ್ಕು ಅಂತಸ್ತಿನಲ್ಲಿ ವಾಸಿಸುತ್ತಾರೆ.
ಸೈಫ್ ಅಲಿ ಖಾನ್ ಮನೆಗೆ 24 ಗಂಟೆಗಳ ಭದ್ರತೆ
ಸೈಫ್ ಅಲಿ ಖಾನ್ ಅವರ ಅಪಾರ್ಟ್‌ಮೆಂಟ್‌ಗೆ 24 ಗಂಟೆಗಳ ಭದ್ರತೆ ಇದೆ ಎನ್ನಲಾಗಿತ್ತು. ಆದರೆ, ಪೊಲೀಸರು ಇದನ್ನು ಅಲ್ಲಗಳೆದಿದ್ದಾರೆ. ಅವರ ಮನೆಯಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಹೀಗಾಗಿ, ಅವರು ಸುಲಭದಲ್ಲಿ ಬಂದರು. ವೈಯಕ್ತಿಕ ಬಾಡಿಗಾರ್ಡ್ಗೆ ಲಕ್ಷಾಂತರ ರೂಪಾಯಿ ಸುರಿಯುವ ಅವರು ಈ ಬಗ್ಗೆ ನಿರ್ಲಕ್ಷ್ಯ ಮಾಡಿದ್ದೇಕೆ ಎಂಬ ಪ್ರಶ್ನೆ ಮೂಡಿದೆ. ಸೈಫ್ ಮನೆಯಲ್ಲಿ ಭದ್ರತಾ ವ್ಯವಸ್ಥೆ ಹೇಗೆ ಉಲ್ಲಂಘನೆಯಾಯಿತು ಎಂಬುದು ದೊಡ್ಡ ಪ್ರಶ್ನೆ ಆಗಿ ಉಳಿದಿದೆ.
ಇದನ್ನೂ ಓದಿ: ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಧರಿಸಿರುವ ಈ ಉಡುಗೆಯ ಬೆಲೆ ಎಷ್ಟು ಲಕ್ಷ?
ಯಾವ ಅಂಗರಕ್ಷಕನಿಗೆ ಎಷ್ಟು ಪ್ಯಾಕೇಜ್
ರವಿ ಸಿಂಗ್ ಅವರು ಒಂದು ದಶಕದಿಂದ ಶಾರುಖ್ ಖಾನ್ ಅವರ ಅಂಗರಕ್ಷಕರಾಗಿದ್ದಾರೆ. ಅವರು 2.7 ಕೋಟಿ ರೂಪಾಯಿ ಪ್ಯಾಕೇಜ್ ಹೊಂದಿದ್ದಾರೆ. ಅವರು ಉದ್ಯಮದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಅಂಗರಕ್ಷಕರಾಗಿದ್ದಾರೆ. ಗುರ್ಮೀತ್ ಸಿಂಗ್ ಜಾಲಿ ಅಕಾ ಶೇರಾ 1995 ರಿಂದ ಸಲ್ಮಾನ್ ಖಾನ್ ಅವರ ಅಂಗರಕ್ಷಕ. ಅವರು ವರ್ಷಕ್ಕೆ 2 ಕೋಟಿ ರೂಪಾಯಿ ಪಡೆಯುತ್ತಾರೆ. ಯುವರಾಜ್ ಘೋರ್ಪಡೆ ಆಮಿರ್ ಖಾನ್ ಅವರ ಭದ್ರತಾ ಸಿಬ್ಬಂದಿ. ಅವರು 2 ಕೋಟಿ ರೂಪಾಯಿ ಪ್ಯಾಕೇಜ್ ಹೊಂದಿದ್ದಾರೆ. ಜಿತೇಂದ್ರ ಶಿಂಧೆ ಅವರು 2015ರಿಂದ 2021ರವರೆಗೆ ಅಮಿತಾಭ್ ಬಚ್ಚನ್ ಅವರ ಅಂಗರಕ್ಷಕರಾಗಿ ಕೆಲಸ ಮಾಡಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅವರು ಆ ಸಮಯದಲ್ಲಿ 1.5 ಕೋಟಿ ಪ್ಯಾಕೇಜ್‌ಗಳನ್ನು ಹೊಂದಿದ್ದರು. ಅಕ್ಷಯ್ ಕುಮಾರ್ ಅವರ ಅಂಗರಕ್ಷಕನಿಗೆ 1.2 ಕೋಟಿ ಪ್ಯಾಕೇಜ್ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.