AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀದೇವಿ ಆಸ್ತಿ ವಿವಾದ, ದೂರು ನೀಡಿದ ಪತಿ ಬೋನಿ ಕಪೂರ್

Sridevi and Boney Kapoor: ಶ್ರೀದೇವಿ ಹಲವು ದಶಕಗಳ ಕಾಲ ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. 80ರ ದಶಕದ ಅತ್ಯಂತ ಬೇಡಿಕೆಯ ಮತ್ತು ದುಬಾರಿ ನಟಿಯಾಗಿದ್ದರು ಶ್ರೀದೇವಿ. ಆಗ ಶ್ರೀದೇವಿ ಖರೀದಿ ಮಾಡಿದ್ದ ಜಮೀನಿನ ವಿವಾದ ಈಗ ಭುಗಿಲೆದ್ದಿದ್ದು, ಶ್ರೀದೇವಿಯ ಪತಿ ಬೋನಿ ಕಪೂರ್ ಇದೀಗ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.

ಶ್ರೀದೇವಿ ಆಸ್ತಿ ವಿವಾದ, ದೂರು ನೀಡಿದ ಪತಿ ಬೋನಿ ಕಪೂರ್
Sridevi Boney
ಮಂಜುನಾಥ ಸಿ.
|

Updated on: Aug 26, 2025 | 8:38 PM

Share

ನಟಿ ಶ್ರೀದೇವಿ (Sridevi) ಕಾಲವಾಗಿ ಏಳು ವರ್ಷಗಳಾಯ್ತು. ಸ್ನಾನದ ತೊಟ್ಟಿಯಲ್ಲಿ (ಬಾತ್ ಟಬ್)ನಲ್ಲಿ ಮುಳುಗಿ ಶ್ರೀದೇವಿ ನಿಧನ ಹೊಂದಿದರು. ಆರಂಭದಲ್ಲಿ ಅವರ ಪತಿ, ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಪ್ರಕರಣದ ತನಿಖೆ ನಡೆಸಿದ ದುಬೈ ಪೊಲೀಸರು ಶ್ರೀದೇವಿ ಅವರದ್ದು ಆಕಸ್ಮಿಕ ಸಾವು ಎಂದು ಘೋಷಿಸಿದರು. ಶ್ರೀದೇವಿಯ ಇಬ್ಬರು ಪುತ್ರಿಯರು ಈಗ ನಟಿಯರು. ಬೋನಿ ಕಪೂರ್ ಬಾಲಿವುಡ್​ನ ಯಶಸ್ವಿ ನಿರ್ಮಾಪಕರಲ್ಲಿ ಒಬ್ಬರು. ಇದೀಗ ಶ್ರೀದೇವಿ ಹೆಸರು ಮತ್ತೆ ಸುದ್ದಿಗೆ ಬಂದಿದೆ. ಆದರೆ ವಿವಾದದ ಕಾರಣಕ್ಕೆ.

ಶ್ರೀದೇವಿ ಹಲವು ದಶಕಗಳ ಕಾಲ ತೆಲುಗು, ತಮಿಳು, ಹಿಂದಿ ಚಿತ್ರರಂಗಗಳಲ್ಲಿ ಸ್ಟಾರ್ ನಟಿಯಾಗಿ ಮೆರೆದಿದ್ದರು. 80ರ ದಶಕದ ಅತ್ಯಂತ ಬೇಡಿಕೆಯ ಮತ್ತು ದುಬಾರಿ ನಟಿಯಾಗಿದ್ದರು ಶ್ರೀದೇವಿ. ಆಗ ಶ್ರೀದೇವಿ ಖರೀದಿ ಮಾಡಿದ್ದ ಜಮೀನಿನ ವಿವಾದ ಈಗ ಭುಗಿಲೆದ್ದಿದ್ದು, ಶ್ರೀದೇವಿಯ ಪತಿ ಬೋನಿ ಕಪೂರ್ ಇದೀಗ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ.

1988ರಲ್ಲಿ ನಟಿ ಶ್ರೀದೇವಿ, ಚೆನ್ನೈನ ಈಸ್ಟ್ ಕೋಸ್ಟ್ ರೋಡ್​​ನಲ್ಲಿ ಆಸ್ತಿಯೊಂದರ ಖರೀದಿ ಮಾಡಿದ್ದರು. ಅದನ್ನು ಫಾರಂ ಹೌಸ್ ರೀತಿ ಶ್ರೀದೇವಿ ಮತ್ತು ಅವರ ಕುಟುಂಬದವರು ಬಳಸುತ್ತಿದ್ದರು. ಆದರೆ 2005 ರಿಂದಲೂ ಆ ಆಸ್ತಿ ಮೇಲೆ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು ಇದೀಗ ಅಕ್ರಮವಾಗಿ ಆ ಜಾಗವನ್ನು ಆಕ್ರಮಿಸಲಾಗಿದೆ ಎಂದು ಬೋನಿ ಕಪೂರ್ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಇದನ್ನೂ ಓದಿ:ಶ್ರೀದೇವಿ ಮನ ಒಲಿಸಲು ಒಂದು ಟ್ರಕ್ ಗುಲಾಬಿ ಕಳುಹಿಸಿದ್ದ ಅಮಿತಾಭ್ ಬಚ್ಚನ್

ಸಂಬಂಧ ಮುದಲಿಯಾರ್ ಎನ್ನುವರಿಗೆ ಸೇರಿದ್ದ ಆ ಜಾಗವನ್ನು ಅವರ ಮಕ್ಕಳು 1960ರಲ್ಲಿಯೇ ಭಾಗ ಮಾಡಿಕೊಂಡಿದ್ದರು. ಆ ಬಳಿಕ ಅವರ ಮಗನೋರ್ವನಿಂದ ಜಾಗವನ್ನು ಶ್ರೀದೇವಿ ಖರೀದಿ ಮಾಡಿದ್ದರು. ಆದರೆ 2005 ರಲ್ಲಿ ಮುದಲಿಯಾರ್ ಅವರ ಎರಡನೇ ಪತ್ನಿಯ ಇಬ್ಬರು ಮಕ್ಕಳು ಮತ್ತು ಮೊದಲನೇ ಪತ್ನಿಯ ಒಬ್ಬ ಮಗಳು ಸೇರಿ ದಾವೆ ಹೂಡಿದ್ದರು. ಇದೀಗ ದಾವೆ ಹೂಡಿದವರಲ್ಲಿ ಕೆಲವರು ಆ ಆಸ್ತಿಯನ್ನು ಅತಿಕ್ರಮಿಸಿದ್ದಾರೆ ಎಂದು ಬೋನಿ ಕಪೂರ್ ಆರೋಪಿಸಿದ್ದಾರೆ.

ಬೋನಿ ಕಪೂರ್ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ತಾಂಬರಂ ತಾಲ್ಲೂಕು ತಹಶೀಲ್ದಾರ್​ಗೆ ಸೂಚನೆ ನೀಡಿದ್ದು, ಸದರಿ ಜಮೀನಿನ ಕುರಿತ ದಾಖಲೆಯನ್ನು ಪರಿಶೀಲಿಸುವ ಬಗ್ಗೆ ಹಾಗೂ ಬೋನಿ ಕಪೂರ್ ಆರೋಪ ಮಾಡಿರುವಂತೆ ನಕಲಿ ಉತ್ತರಾಧಿಕಾರ ಪ್ರಮಾಣಪತ್ರದ ಸತ್ಯಾಸತ್ಯತೆಯ ಬಗ್ಗೆ ನಾಲ್ಕು ವಾರಗಳಲ್ಲಿ ಮಾಹಿತಿ ನೀಡುವಂತೆ ಸೂಚಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ