AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ಗೆ ಮೋಸ ಮಾಡಲು ಹೋಗಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಕ್ರೋಚ್ ಸುಧಿ

ಕಾಕ್ರೋಚ್ ಸುಧಿ ಅವರು ಬಹಳ ಚಾಲಾಕಿ ಎಂಬುದು ಗೊತ್ತು. ಆದರೆ ಬಿಗ್ ಬಾಸ್ ಮುಂದೆ ಅದು ನಡೆಯುತ್ತಿಲ್ಲ. ಟಾಸ್ಕ್ ವೇಳೆ ಯಾರಿಗೂ ಕಾಣದಂತೆ ಯಾಮಾರಿಸಲು ಕಾಕ್ರೋಚ್ ಸುಧಿ ಅವರು ಪ್ರಯತ್ನಿಸಿರುವುದು ಗೊತ್ತಾಗಿದೆ. ಬಿಗ್ ಬಾಸ್ ಮನೆಯ ಕ್ಯಾಮೆರಾದಲ್ಲಿ ಅದು ಸೆರೆಯಾಗಿದೆ. ಕೂಡಲೇ ಅವರಿಗೆ ಬಿಗ್ ಬಾಸ್ ಎಚ್ಚರಿಕೆ ನೀಡಿದರು.

ಬಿಗ್ ಬಾಸ್​ಗೆ ಮೋಸ ಮಾಡಲು ಹೋಗಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದ ಕಾಕ್ರೋಚ್ ಸುಧಿ
Cockroach Sudhi
ಮದನ್​ ಕುಮಾರ್​
|

Updated on: Nov 10, 2025 | 10:43 PM

Share

ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ಕಾಕ್ರೋಚ್ ಸುಧಿ ಅವರಿಗೆ ಒಂದು ಇಮೇಜ್ ಇತ್ತು. ಸಿನಿಮಾಗಳಲ್ಲಿ ಅವರು ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆದರೆ ಬಿಗ್ ಬಾಸ್ (Bigg Boss Kannada Season 12) ಆಟದಲ್ಲಿ ಅವರ ಚಾರ್ಮ್ ಕಡಿಮೆ ಆಗಿದೆ. ಅನೇಕ ಸಂದರ್ಭಗಳಲ್ಲಿ ಅವರು ಹಿಂದೇಟು ಹಾಕುತ್ತಾರೆ. ತಾವೇ ಮುಂದಾಳತ್ವ ವಹಿಸುವ ಶಕ್ತಿ ಇದ್ದರೂ ಕೂಡ ಅದನ್ನು ಅವರು ಬಳಸಿಕೊಂಡಂತೆ ಕಾಣುತ್ತಿಲ್ಲ. ಅದೂ ಸಾಲದೆಂಬಂತೆ ಅವರು ಕಳ್ಳಾಟ ಆಡಿ ಸಿಕ್ಕಿ ಬಿದ್ದಿದ್ದಾರೆ. ಸ್ಪರ್ಧಿಗಳಿಗೆ ಮಾತ್ರವಲ್ಲದೇ ಸ್ವತಃ ಬಿಗ್ ಬಾಸ್​​ಗೂ ಚಳ್ಳೆ ಹಣ್ಣು ತಿನ್ನಿಸಲು ಕಾಕ್ರೋಚ್ ಸುಧಿ (Cockroach Sudhi) ಪ್ರಯತ್ನಿಸಿದರು. ಆದರೆ ಕ್ಯಾಮೆರಾ ಕಣ್ಣಲ್ಲಿ ಅವರ ಕಳ್ಳಾಟ ಸೆರೆ ಆಯಿತು.

ನವೆಂಬರ್ 10ರ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಈ ಮನೆಯಲ್ಲಿ ಹೆಚ್ಚು ವಿಷ ಕಾರುವ ವ್ಯಕ್ತಿ ಯಾರು ಎಂಬುದನ್ನು ಸೂಚಿಸಿ ಅವರಿಗೆ ಹಸಿ ಮೆಣಸಿನ ಕಾಯಿ ತಿನ್ನಬೇಕು ಎಂದು ಟಾಸ್ಕ್ ನೀಡಲಾಯಿತು. ಹಲವರು ಕಾಕ್ರೋಚ್ ಸುಧಿ ಹೆಸರನ್ನು ಹೇಳಿದರು. ಪ್ರತಿ ಬಾರಿ ಹೆಸರು ಬಂದಾಗ ಕಾಕ್ರೋಚ್ ಸುಧಿ ಅವರು ಒಂದೊಂದು ಹಸಿ ಮೆಣಸಿನ ಕಾಯಿ ತಿನ್ನಬೇಕಾಯಿತು.

ಹಸಿ ಮೆಣಸಿನಕಾಯಿ ತಿನ್ನುವುದು ಸುಲಭ ಅಲ್ಲ. ಅದರಲ್ಲೂ ಒಂದರ ಹಿಂದೊಂದು ಮೆಣಸಿನಕಾಯಿ ತಿನ್ನಬೇಕಾದ ಸಂದರ್ಭ ಬಂದಾಗ ಕಾಕ್ರೋಚ್ ಸುಧಿ ಅವರು ಕಳ್ಳಾಟದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಮೆಣಸಿನಕಾಯಿ ಒಳಗೆ ಇದ್ದ ಬೀಜಗಳನ್ನು ಯಾರಿಗೂ ಕಾಣದಂತೆ ನೆಲಕ್ಕೆ ಬೀಳಿಸಿದರು. ಆ ಮೂಲಕ ಖಾರದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುವುದು ಅವರ ಪ್ಲ್ಯಾನ್ ಆಗಿತ್ತು.

ಆದರೆ ಅವರ ಈ ಕಳ್ಳಾಟ ಮುಂದುವರಿಯಲು ಬಿಗ್ ಬಾಸ್ ಬಿಡಲಿಲ್ಲ. ‘ನೀವು ಮಾಡಿದ ತಪ್ಪು ನಮಗೆ ಕಾಣಿಸಿದೆ’ ಎಂದು ಹೇಳುವ ಮೂಲಕ ಸರಿಯಾಗಿ ಮೆಣಸಿನಕಾಯಿ ತಿನ್ನುವಂತೆ ಸುಧಿಗೆ ಬಿಗ್ ಬಾಸ್ ಸೂಚಿಸಿದರು. ಹೊಸದಾಗಿ ಮೆಣಸಿನಕಾಯಿ ತಿನ್ನುವುದು ಅನಿವಾರ್ಯ ಆಯಿತು. ಈ ಟಾಸ್ಕ್ ವೇಳೆ ಅವರು ಹಲವು ಮೆಣಸಿನಕಾಯಿ ತಿಂದು ಸುಸ್ತಾದರು.

ಇದನ್ನೂ ಓದಿ: ಬಿಗ್ ಬಾಸ್ ಕರಿಬಸಪ್ಪ ಸದಾ ಖುಷಿ ಆಗಿರೋದು ಯಾಕೆ ಗೊತ್ತಾ?

ಅಶ್ವಿನಿ ಗೌಡ ಕೂಡ ಅತಿ ವಿಷಕಾರಿ ವ್ಯಕ್ತಿ ಎಂದು ಹಲವರು ಹೇಳಿದರು. ಅಲ್ಲದೇ ಜಾಹ್ನವಿ ಮತ್ತು ಅಶ್ವಿನಿ ಗೌಡ ನಡುವೆ ಇದ್ದ ಜಟಾಪಟಿ ಜಾಸ್ತಿ ಆಯಿತು. ಕೆಲವು ಸೀಕ್ರೆಟ್​​ಗಳು ಕೂಡ ಬಯಲಾದವು. ತಾವಿಬ್ಬರು ಜಗಳ ಮಾಡಿಕೊಂಡಂತೆ ನಟಿಸಬೇಕು ಎಂದು ಡ್ರೆಸಿಂಗ್ ರೂಮ್​​ನಲ್ಲಿ ಮೈಕ್ ಇಲ್ಲದೇ ಮಾತನಾಡಿಕೊಂಡು ಪ್ಲ್ಯಾನ್ ಮಾಡಿದ್ದನ್ನು ಕೂಡ ಅಶ್ವಿನಿ ಗೌಡ ಅವರು ಬಾಯಿ ಬಿಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ