Besharam Rang: ‘ಬೇಷರಂ ರಂಗ್​..’ ಹಾಡಿನ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್​

Shah Rukh Khan | Deepika Padukone: ‘ಬೇಷರಂ ರಂಗ್​..’ ಹಾಡಿನಲ್ಲಿ ದೀಪಿಕಾ ಪಡುಕೋಣೆ ತುಂಬ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಕೇಸರಿ ಬಿಕಿನಿ ಧರಿಸಿದ್ದಾರೆ ಎಂಬುದು ಕೂಡ ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು.

Besharam Rang: ‘ಬೇಷರಂ ರಂಗ್​..’ ಹಾಡಿನ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್​
ದೀಪಿಕಾ ಪಡುಕೋಣೆ

Updated on: Feb 15, 2023 | 10:51 PM

ಬಾಲಿವುಡ್​ನಲ್ಲಿ ಈ ವರ್ಷದ ಆರಂಭದಲ್ಲೇ ‘ಪಠಾಣ್​’ (Pathaan Movie) ಚಿತ್ರಕ್ಕೆ ಬಹುದೊಡ್ಡ ಗೆಲುವು ಸಿಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 22 ದಿನ ಕಳೆದಿದ್ದರೂ ಕೂಡ ಹವಾ ಹಾಗೆಯೇ ಇದೆ. ಭಾರತದ ಬಾಕ್ಸ್​ ಆಫೀಸ್​ನಲ್ಲಿ 500 ಕೋಟಿ ರೂಪಾಯಿ ಗಳಿಸಿರುವುದು ‘ಪಠಾಣ್​’ ಹೆಗ್ಗಳಿಕೆ. ಇದರ ನಡುವೆ ಒಂದಷ್ಟು ವಿವಾದಗಳು ಕೂಡ ಈ ಚಿತ್ರಕ್ಕೆ ಸುತ್ತಿಕೊಂಡಿದ್ದವು. ಶಾರುಖ್​ ಖಾನ್​ (Shah Rukh Khan) ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವ ‘ಬೇಷರಂ ರಂಗ್​..’ (Besharam Rang) ಹಾಡಿನ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಗೀತೆಯ ಪ್ರಸಾರಕ್ಕೆ ಸಂಬಂಧಿಸಿದಂತೆ ಕೆಲವರು ಕೋರ್ಟ್​ ಮೆಟ್ಟಿಲು ಏರಿದ್ದರು. ಆ ಕೇಸ್​ನಲ್ಲಿ ‘ಪಠಾಣ್​’ ನಿರ್ಮಾಣ ಸಂಸ್ಥೆಯಾದ ‘ಯಶ್​ ರಾಜ್​ ಫಿಲ್ಮ್ಸ್​’ಗೆ ಜಯ ಸಿಕ್ಕಿದೆ.

ದೀಪಿಕಾ ಪಡುಕೋಣೆ ಅವರು ‘ಬೇಷರಂ ರಂಗ್​..’ ಹಾಡಿನಲ್ಲಿ ತುಂಬ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅವರು ಕೇಸರಿ ಬಿಕಿನಿ ಧರಿಸಿದ್ದಾರೆ ಎಂಬುದು ಕೂಡ ಅನೇಕರ ಅಸಮಾಧಾನಕ್ಕೆ ಕಾರಣ ಆಗಿತ್ತು. ‘ಇಷ್ಟು ಬೋಲ್ಡ್​ ಆಗಿರುವ ಹಾಡನ್ನು ಯೂಟ್ಯೂಬ್​ನಲ್ಲಿ ಪ್ರಸಾರ ಮಾಡುವಾಗ ‘ಯು/ಎ’ ಪ್ರಮಾಣಪತ್ರ ಬಿತ್ತರಿಸಬೇಕು. ಇಲ್ಲದಿದ್ದರೆ ಹಾಡಿನ ಪ್ರಸಾರಕ್ಕೆ ತಡೆ ನೀಡಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತರೊಬ್ಬರು ಮಹಾರಾಷ್ಟ್ರದ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ತಳ್ಳಿಹಾಕಿದೆ.

‘ಪಠಾಣ್​’ ಗೆದ್ದಿದ್ದಕ್ಕೆ ಬಾಲಿವುಡ್​ ಮಂದಿಗೆ ಬಂತು ಧೈರ್ಯ; ದೊಡ್ಡ ಓಪನಿಂಗ್​ಗಾಗಿ​ ನಡೆದಿದೆ ಪ್ಲ್ಯಾನ್​

ಇದನ್ನೂ ಓದಿ
119 ಕೋಟಿ ರೂಪಾಯಿ ಕೊಟ್ಟು ಮನೆ ಖರೀದಿಸಿದ ರಣವೀರ್​-ದೀಪಿಕಾ; ಇದರ ವಿಶೇಷತೆಗಳೇನು?
Brahmastra: ಮಾಜಿ ಪ್ರೇಮಿಯ ಸಿನಿಮಾದಲ್ಲಿ ದೀಪಿಕಾ ಕದ್ದುಮುಚ್ಚಿ ನಟನೆ? ಝೂಮ್​ ಮಾಡಿ ಸಾಕ್ಷಿ ತೋರಿಸಿದ ನೆಟ್ಟಿಗರು
Deepika Padukone: ಹೈದರಾಬಾದ್​ನಲ್ಲಿ ಶೂಟಿಂಗ್ ಬಿಟ್ಟು ಆಸ್ಪತ್ರೆಗೆ ಓಡಿದ ದೀಪಿಕಾ ಪಡುಕೋಣೆ; ಅಂಥದ್ದೇನಾಯ್ತು?
Cannes 2022: ಕಾನ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಮಿಂಚಿದ ದೀಪಿಕಾ; ಇಲ್ಲಿವೆ ಫೋಟೋಗಳು

ಸಾರ್ವಜನಿಕವಾಗಿ ಪ್ರದರ್ಶನವಾಗುವ ಸಿನಿಮಾ, ಕಿರುಚಿತ್ರ, ಜಾಹೀರಾತು ಇತ್ಯಾದಿಗಳಿಗೆ ಸೆನ್ಸಾರ್​ ಮಂಡಳಿಯು ಪ್ರಮಾಣ ಪತ್ರ ನೀಡುತ್ತದೆ. 12 ವರ್ಷ ವಯಸ್ಸಿಗಿಂತ ಕಿರಿಯ ಪ್ರೇಕ್ಷಕರು ತಮ್ಮ ಪಾಲಕರ ಮಾರ್ಗದರ್ಶನದಲ್ಲಿ ಮಾತ್ರ ನೋಡಬಹುದಾದ ಚಿತ್ರಗಳಿಗೆ ‘ಯು/ಎ’ ಪ್ರಮಾಣಪತ್ರ ನೀಡಲಾಗುತ್ತದೆ. ‘ಬೇಷರಂ ರಂಗ್​..’ ಹಾಡು ಮತ್ತು ‘ಪಠಾಣ್​’ ಚಿತ್ರದ ಟೀಸರ್​ ಯೂಟ್ಯೂಬ್​ನಲ್ಲಿ ಪ್ರಸಾರ ಆಗುವುದಕ್ಕೂ ಮುನ್ನ ‘ಯು/ಎ’ ಪ್ರಮಾಣಪತ್ರ ಬಿತ್ತರ ಆಗಬೇಕು ಎಂಬುದು ಅರ್ಜಿದಾರರ ವಾದವಾಗಿತ್ತು. ಇದನ್ನು ಕೋರ್ಟ್​ ತಳ್ಳಿಹಾಕಿದೆ.

Pathaan Movie: ‘ಶ್ರೀನಗರದಲ್ಲಿ ದಶಕಗಳ ಬಳಿಕ ಹೌಸ್​ಫುಲ್​ ಆಗಿದೆ’: ‘ಪಠಾಣ್​’ ಗೆಲುವಿನ ಬಳಿಕ ಸಂಸತ್ತಿನಲ್ಲಿ ಮೋದಿ ಭಾಷಣ

ಪ್ರಸ್ತುತ ಇರುವ ನಿಯಮದ ಪ್ರಕಾರ, ಸಾರ್ವಜನಿಕವಾಗಿ ಚಿತ್ರಮಂದಿರ ಮುಂತಾದ ಸ್ಥಳಗಳಲ್ಲಿ ಪ್ರದರ್ಶನವಾಗುವ ಕಂಟೆಂಟ್​ಗಳಿಗೆ ಮಾತ್ರ ಪ್ರಮಾಣಪತ್ರದ ಅಗತ್ಯ ಇದೆ. ಇಂಟರ್​ನೆಟ್​ನಲ್ಲಿ ಯೂಟ್ಯೂಬ್​, ಒಟಿಟಿ ಮುಂತಾದ ಕಡೆಗಳಲ್ಲಿ ಪ್ರಸಾರ ಮಾಡಲು ಸೆನ್ಸಾರ್​ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ‘ಯಶ್​ ರಾಜ್​ ಫಿಲ್ಮ್ಸ್​’ ವಾದ ಮಂಡಿಸಿದೆ. ಇದನ್ನು ಆಧರಿಸಿ ಕೋರ್ಟ್​ ತೀರ್ಪು ನೀಡಿದೆ.

Pathaan Movie: ಪಾಕಿಸ್ತಾನದಲ್ಲಿ ‘ಪಠಾಣ್​’ ಚಿತ್ರದ ಅಕ್ರಮ ಪ್ರದರ್ಶನ; ಕಾನೂನು ಕ್ರಮ ಕೈಗೊಂಡ ಸೆನ್ಸಾರ್​ ಮಂಡಳಿ

ಆರಂಭದಲ್ಲಿ ‘ಪಠಾಣ್​’ ಚಿತ್ರಕ್ಕೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿತ್ತು. ‘ಬೇಷರಂ ರಂಗ್​..’ ಹಾಡು ಬಿಡುಗಡೆ ಆದಾಗ ಕೆಲವು ಕಡೆ ದಾಂಧಲೆ ಕೂಡ ಆಗಿತ್ತು. ಆದರೆ ಈ ಸಿನಿಮಾದಲ್ಲಿ ದೇಶಭಕ್ತಿ ಕಥಾವಸ್ತು ಇದ್ದಿದ್ದರಿಂದ ವಿರೋಧ ಮಾಡುವವರು ಸೈಲೆಂಟ್​ ಆದರು. ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:51 pm, Wed, 15 February 23