ಪೈರಸಿ ಸಿನಿಮಾ ಪ್ರಸಾರಕ್ಕೆ ಸ್ವಂತ ಆ್ಯಪ್ ತಯಾರಿಸಿದ ಖದೀಮ ಈಗ ಪೊಲೀಸ್ ಬಲೆಗೆ

ತನ್ನದೇ ಆ್ಯಪ್ ತಯಾರಿಸಿ, ಅದರ ಮೂಲಕ ಪೈರಸಿ ಸಿನಿಮಾ ಪ್ರಸಾರ ಮಾಡುತ್ತಿದ್ದ ಕಿಡಿಗೇಡಿಯನ್ನು ಬಂಧಿಸಲಾಗಿದೆ. ಈ ಆ್ಯಪ್ ಮೂಲಕ ಆತ ಹಣ ಸಂಪಾದನೆ ಮಾಡುತ್ತಿದ್ದ. ಈಗ ಪೊಲೀಸರ ವಶದಲ್ಲಿದ್ದಾನೆ. ಪೈರಸಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಇನ್ನೂ ಅನೇಕರ ಹೆಸರುಗಳು ಹೊರಬರುವ ಸಾಧ್ಯತೆ ದಟ್ಟವಾಗಿದೆ.

ಪೈರಸಿ ಸಿನಿಮಾ ಪ್ರಸಾರಕ್ಕೆ ಸ್ವಂತ ಆ್ಯಪ್ ತಯಾರಿಸಿದ ಖದೀಮ ಈಗ ಪೊಲೀಸ್ ಬಲೆಗೆ
Chhaava Movie Poster

Updated on: Apr 11, 2025 | 7:28 PM

ಚಿತ್ರರಂಗದವರಿಗೆ ಪೈರಸಿ (Piracy) ದೊಡ್ಡ ಪಿಡುಗಾಗಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿದ ನಿರ್ಮಾಪಕರಿಗೆ ಪೈರಸಿಯಿಂದ ಸಿಕ್ಕಾಪಟ್ಟೆ ನಷ್ಟ ಆಗುತ್ತದೆ. ಇತ್ತೀಚೆಗೆ ಬಿಡುಗಡೆ ಆದ ಛಾವ, ಸಿಕಂದರ್ ಮುಂತಾದ ಸಿನಿಮಾಗಳ ಕೂಡ ಪೈರಸಿಗೆ ಒಳಗಾದವು. ಇಂಥ ಕೃತ್ಯದಲ್ಲಿ ತೊಡಗಿರುವವರ ವಿರುದ್ಧ ಸೈಬರ್ ಪೊಲೀಸರು ಸಮರ ಸಾರಿದ್ದಾರೆ. ‘ಛಾವ’ (Chhaava) ಸಿನಿಮಾವನ್ನು ಪೈರಸಿ ಮಾಡಿದ್ದ ಕಿಡಿಗೇಡಿಯನ್ನು ಮುಂಬೈನ ದಕ್ಷಿಣ ವಿಭಾಗದ ಸೈಬರ್ ಪೊಲೀಸರು (Cyber Police) ಬಂಧಿಸಿದ್ದಾರೆ. ತನಿಖೆ ವೇಳೆ ಹಲವು ಶಾಕಿಂಗ್ ವಿಚಾರಗಳು ಬಯಲಾಗಿವೆ. ಆ ಕುರಿತು ಇಲ್ಲಿದೆ ವಿವರ..

ತಮ್ಮ ಸಿನಿಮಾ ಪೈರಸಿ ಆಗಬಾರದು ಎಂಬ ಕಾರಣಕ್ಕೆ ನಿರ್ಮಾಣ ಸಂಸ್ಥೆಯವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ‘ಅಗಸ್ಟ್ ಎಂಟರ್​ಟೇನ್ಮೆಂಟ್​ ಕಂಪನಿ’ ನೀಡಿದ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಸಾಗರ್ ಮಾಣಿಕ್ ರಂಧಾವನ್ ಎಂಬಾತನನ್ನು ಬಂಧಿಸಿದ್ದಾರೆ. ಸಿನಿಮಾಗಳನ್ನು ಪೈರಸಿ ಮಾಡಲು ಈತ ವ್ಯವಸ್ಥಿತವಾಗಿ ಜಾಲ ರೂಪಸಿಕೊಂಡಿದ್ದಾನೆ ಎಂಬುದು ತಿಳಿದು ಬಂದಿದೆ.

ಈತ ತಮ್ಮದೇ ಆ್ಯಪ್ ತಯಾರಿಸಿಕೊಂಡಿದ್ದ. ಅದರಲ್ಲಿ ಪೈರಸಿ ಸಿನಿಮಾಗಳ ಪ್ರಸಾರ ಮಾಡಿ ಹಣ ಗಳಿಸುತ್ತಿದ್ದ. ‘ಛಾವ’ ಸಿನಿಮಾವನ್ನು ಕೂಡ ಇದೇ ಆ್ಯಪ್​ನಲ್ಲಿ ಪ್ರಸಾರ ಮಾಡಿದ್ದ ಎನ್ನಲಾಗಿದೆ. ಸದ್ಯಕ್ಕೆ ಈತ ಪೊಲೀಸ್ ವಶದಲ್ಲಿ ಇದ್ದಾನೆ. ತನಿಖೆ ಮುಂದುವರಿಯುತ್ತಿದೆ. ಸಮಗ್ರ ತನಿಖೆ ಬಳಿಕ ಪೈರಸಿ ಜಾಲದಲ್ಲಿರುವ ಇನ್ನೂ ಹಲವರ ಹೆಸರುಗಳು ಹೊರಬರುವ ನಿರೀಕ್ಷೆ ಇದೆ.

ಇದನ್ನೂ ಓದಿ
‘ಛಾವ’ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಬೆಂಕಿ; ಕಾರಣ ತಿಳಿಸಿದ ಪೊಲೀಸರು
‘ಛಾವ’ ಎಫೆಕ್ಟ್: ಶಾಲಾ ಪಠ್ಯದಲ್ಲಿ ಸಂಭಾಜಿ ಜೀವನದ ವಿಷಯ ಸೇರಿಸಲು ಒತ್ತಾಯ
ಛಾವ ಸಿನಿಮಾ ದೃಶ್ಯ ಹಾಗೂ ಕುಂಭಮೇಳ ಕಾಲ್ತುಳಿತದ ಬಗ್ಗೆ ಸ್ವರಾ ಭಾಸ್ಕರ್ ಟೀಕೆ
‘ಛಾವ’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರದ ಪರದೆ ಹರಿದು ಹಾಕಿದ ಕುಡುಕ

ಫೆಬ್ರವರಿ 14ರಿಂದ ಮಾರ್ಚ್ 20ರ ತನಕ ‘ಛಾವ’ ಸಿನಿಮಾದ 1818 ಪೈರಸಿ ಲಿಂಕ್​ಗ್ಳು ಹರಿದಾಡಿವೆ. ವಾಟ್ಸಪ್, ಟೆಲಿಗ್ರಾಮ್, ಇನ್​ಸ್ಟಾಗ್ರಾಮ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಮೂಲಕ ಪೈರಸಿ ಲಿಂಕ್​ ಕಳಿಸಲಾಗಿದೆ. ಇದರಿಂದಾಗಿ ಚಿತ್ರದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟ ಆಗಿದೆ. ಆದ್ದರಿಂದ ನಿರ್ಮಾಪಕರು ದೂರು ನೀಡಿದ್ದಾರೆ. ಅದರ ಅನ್ವಯ ಈಗ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಪೈರಸಿಯಿಂದ ವಾರ್ಷಿಕ 20 ಸಾವಿರ ಕೋಟಿ ನಷ್ಟ, ಪೈರಸಿ ಎದುರಿಸಲು ಕಠಿಣ ಕ್ರಮ

ಇತ್ತೀಚೆಗೆ ತೆರೆಕಂಡ ‘ಸಿಕಂದರ್’ ಸಿನಿಮಾ ಕೂಡ ಪೈರಸಿ ಕಾಟಕ್ಕೆ ಬಲಿಯಾಯಿತು. ಆದ್ದರಿಂದ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಬೇಸರ ಆಯಿತು. ‘ಛಾವ’ ಸಿನಿಮಾವನ್ನು ಪೈರಸಿ ಮಾಡಿದ ಖದೀಮರನ್ನು ಬಂಧಿಸಿದ ರೀತಿಯೇ ‘ಸಿಕಂದರ್’ ಚಿತ್ರದ ಪೈರಸಿಗೆ ಕಾರಣ ಆದವರನ್ನೂ ಅರೆಸ್ಟ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.