ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್

Deepika Padukone: ದೀಪಿಕಾ ಪಡುಕೋಣೆ ಅವರು ‘ಸ್ಪಿರಿಟ್’ ಚಿತ್ರದಿಂದ ಹೊರಗುಳಿದಿದ್ದಾರೆ ಎಂಬ ಸುದ್ದಿ ಹರಡಿದೆ. ಅವರ ಭರ್ಜರಿ ಬೇಡಿಕೆಗಳು ಇದಕ್ಕೆ ಕಾರಣ ಎನ್ನಲಾಗಿದೆ. ಸಂದೀಪ್ ರೆಡ್ಡಿ ವಂಗ ಒಮ್ಮೆ ಶೂಟಿಂಗ್ಗೆ ಇಳಿದರೆ ಯಾವುದನ್ನೂ ಲೆಕ್ಕಿಸೋದಿಲ್ಲ. ಆದರೆ, ಇದಕ್ಕೆ ಹೊಂದಿಕೊಳ್ಳಲು ದೀಪಿಕಾ ರೆಡಿ ಇಲ್ಲ.

ಡಿಮ್ಯಾಂಡ್ ಮಾಡೋಕೆ ಶುರು ಮಾಡಿದ ದೀಪಿಕಾ ಪಡುಕೋಣೆ; ಕೈ ತಪ್ಪಿತು ಬಿಗ್ ಆಫರ್
ದೀಪಿಕಾ
Edited By:

Updated on: May 23, 2025 | 8:01 AM

ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜೊತೆಗೆ ಅವರು ಆಗಾಗ ಹೊಸ ಸಂದರ್ಶನಗಳನ್ನು ನೀಡುತ್ತಾ ಇದ್ದಾರೆ ಕೂಡ. ಈ ಮಧ್ಯೆ ದೀಪಿಕಾ ಪಡುಕೋಣೆ ಅವರು ಒಪ್ಪಿಕೊಳ್ಳುವ ಹೊಸ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರವಾಗಿ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ಸಿಕ್ಕಿತ್ತು. ಆದರೆ, ಈ ಚಿತ್ರದಿಂದ ಅವರನ್ನು ಹೊರಕ್ಕೆ ಇಡಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. ಇದಕ್ಕೆ ಕಾರಣ ಅವರು ಮಾಡುತ್ತಿರುವ ಡಿಮ್ಯಾಂಡ್.

ದೀಪಿಕಾ ಪಡುಕೋಣೆ ಅವರು ಭರ್ಜರಿ ಡಿಮ್ಯಾಂಡ್ ಮಾಡೋಕೆ ಆರಂಭಿಸಿದ್ದಾರೆ ಎಂದು ವರದಿ ಆಗಿದೆ. ಸಣ್ಣ ಪುಟ್ಟ ಬೇಡಿಕೆಗಳಾದರೆ ನಿರ್ದೇಶಕರೇ ಅದನ್ನು ಈಡೇರಿಸುತ್ತಿದ್ದರೇನೋ. ಆದರೆ, ಅವರು ಇಡುತ್ತಿರುವುದು ತುಂಬಾನೇ ದೊಡ್ಡ ಡಿಮ್ಯಾಂಡ್​ಗಳು. ಈ ಕಾರಣಕ್ಕೆ ಅವರು ಸಿನಿಮಾಗೆ ಹೊಂದಿಕೆ ಆಗುವುದಿಲ್ಲ ಎಂದು ಅವರನ್ನು ಕೈಬಿಟ್ಟಿದ್ದಾಗಿ ವರದಿ ಆಗಿದೆ.

ಸಂದೀಪ್ ರೆಡ್ಡಿ ವಂಗ ಒಮ್ಮೆ ಶೂಟಿಂಗ್​ಗೆ ಇಳಿದರೆ ಯಾವುದನ್ನೂ ಲೆಕ್ಕಿಸೋದಿಲ್ಲ. ಶೂಟ್ ಮಾಡೋದು ಒಂದೇ ಗುರಿ. ಒಂದು ದಿನ ಪೂರ್ತಿ ಶೂಟ್ ಮಾಡೋ ಪರಿಸ್ಥಿತಿ ಬಂದರೂ ಬರಬಹುದು. ಆದರೆ, ಇದಕ್ಕೆ ಹೊಂದಿಕೊಳ್ಳಲು ದೀಪಿಕಾ ರೆಡಿ ಇಲ್ಲ. ಇದು ಅವರ ಪ್ರಮುಖ ಷರತ್ತುಗಳಲ್ಲಿ ಒಂದು ಎಂದು ಹೇಳಲಾಗಿದೆ.

ಇದನ್ನೂ ಓದಿ
‘ಕಾಂತಾರ: ಚಾಪ್ಟರ್ 1’ ಅಡಚಣೆ; ಅಂದುಕೊಂಡ ದಿನಾಂಕದಲ್ಲೇ ಚಿತ್ರ ರಿಲೀಸ್
ಮಹೇಶ್ ಬಾಬು ಕುಟುಂಬದಲ್ಲಿ ಕೊವಿಡ್; ಅಭಿಮಾನಿಗಳಲ್ಲಿ ಹೆಚ್ಚಿತು ಆತಂಕ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
25ನೇ ವಯಸ್ಸಿಗೆ ಕಾಲಿಟ್ಟ ಸುಹಾನ; ಶಾರುಖ್ ಮಗಳ ಬಳಿ ಇದೆ ದುಬಾರಿ ವಸ್ತುಗಳು

ದಿನಕ್ಕೆ 8 ಗಂಟೆ ಮಾತ್ರ ಶೂಟಿಂಗ್​ಗೆ ಬರೋದಾಗಿ ದೀಪಿಕಾ ಹೇಳಿದ್ದಾರಂತೆ. ಅಂದರೆ, ಊಟ, ಮೇಕಪ್, ಡ್ರೆಸಿಂಗ್​ಗೆ ಕನಿಷ್ಠ 2-3 ಗಂಟೆ ಹೋಗಲಿದೆ. ಅಂದರೆ ಶೂಟ್​ಗೆ ಸರಿಯಾಗಿ ಸಿಗೋದು 5ರಿಂದ 6 ಗಂಟೆ ಮಾತ್ರ. ಇದರಲ್ಲಿ ಸಿನಿಮಾ ಶೂಟ್ ಮಾಡಬೇಕು ಎಂದರೆ ಸಂದೀಪ್ ಅವರಿಗೆ ಸಾಧ್ಯವಿಲ್ಲ. ಈ ಬಗ್ಗೆ ಕೇಳಿದರೆ ದೀಪಿಕಾ ಹೊಂದಾಣಿಕೆಗೆ ರೆಡಿ ಇಲ್ಲ. ಮಗುವಿನ ಆರೈಕೆಯ ಕಾರಣದಿಂದ ದೀಪಿಕಾ ಹೇಳಿರಬಹುದು ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಚಿತ್ರರಂಗಕ್ಕೆ ಮರಳುವ ಪ್ರಯತ್ನದಲ್ಲಿರುವ ದೀಪಿಕಾ ಪಡುಕೋಣೆಗೆ ಕಾಡುತ್ತಿದೆ ಆ ಭಯ

ಇಷ್ಟೇ ಅಲ್ಲ, ದೀಪಿಕಾ ಪಡುಕೋಣೆ ಅವರು ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ. ಇದನ್ನು ಕೊಡೋಕೆ ನಿರ್ಮಾಪಕರು ರೆಡಿ ಇದ್ದರು. ಆದರೆ, ಇಷ್ಟಕ್ಕೆ ನಿಂತಿಲ್ಲ. ಸಿನಿಮಾ ಲಾಭದಲ್ಲಿ ಷೇರನ್ನು ಕೂಡ ಅವರು ಕೇಳಿದ್ದರು. ಇದು ನಿರ್ದೇಶಕರಿಗೆ ಇಷ್ಟ ಆಗಿಲ್ಲ. ಹೀಗಾಗಿ, ಅವರನ್ನು ಕೈ ಬಿಡಲಾಗಿದ್ದು, ಬೇರೆ ಯಾವ ನಟಿ ತಂಡ ಸೇರಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.