ಅಮಿತಾಭ್ ಹೆಸರು, ಧ್ವನಿ ಬಳಕೆಗೆ ಸಂಪೂರ್ಣ ತಡೆಕೊಟ್ಟ ಕೋರ್ಟ್

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಹೆಸರು, ಧ್ವನಿ ಮತ್ತು ಚಿತ್ರಗಳನ್ನು ಅನುಮತಿಯಿಲ್ಲದೆ ವಾಣಿಜ್ಯ ಉದ್ದೇಶಕ್ಕೆ ಬಳಸುವುದನ್ನು ತಡೆಯಲು ದೆಹಲಿ ಹೈಕೋರ್ಟ್ ಶಾಶ್ವತ ತಡೆ ನೀಡಿದೆ. ಡಿಜಿಟಲ್ ಲೋಕದಲ್ಲಿ ನಟರ ಪಬ್ಲಿಸಿಟಿ ಹಾಗೂ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನ್ಯಾಯಾಲಯವು ಈ ಪ್ರಮುಖ ಮತ್ತು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ.

ಅಮಿತಾಭ್ ಹೆಸರು, ಧ್ವನಿ ಬಳಕೆಗೆ ಸಂಪೂರ್ಣ ತಡೆಕೊಟ್ಟ ಕೋರ್ಟ್
ಅಮಿತಾಭ್
Edited By:

Updated on: Nov 07, 2026 | 7:44 AM

ಮುಖ್ಯಾಂಶಗಳು

  • ಆನ್‌ಲೈನ್‌ನಲ್ಲಿ ಅಮಿತಾಭ್ ಬಚ್ಚನ್ ಹೆಸರು ಬಳಸುವಂತಿಲ್ಲ
  • ದೆಹಲಿ ಹೈಕೋರ್ಟ್ ಐತಿಹಾಸಿಕ ಆದೇಶ
  • ನಕಲಿ ಆ್ಯಪ್, ಪೋಸ್ಟರ್ ಹಾವಳಿಗೆ ಬ್ರೇಕ್

ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ ಅವರ ಹೆಸರು ಮತ್ತು ಧ್ವನಿಯನ್ನು ಅನುಮತಿ ಇಲ್ಲದೆ ಬಳಸುವುದಕ್ಕೆ ದೆಹಲಿ ಹೈಕೋರ್ಟ್ ಶಾಶ್ವತ ತಡೆ ನೀಡಿದೆ. ಅವರ ಅನುಮತಿಯಿಲ್ಲದೆ ಯಾರೂ ಅವರ ವ್ಯಕ್ತಿತ್ವವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸುವಂತಿಲ್ಲ ಎಂದು ಕೋರ್ಟ್ ಖಡಕ್ ಆದೇಶ ಹೊರಡಿಸಿದೆ. ನಟರ ಹಕ್ಕುಗಳನ್ನು ಎತ್ತಿಹಿಡಿದಿರುವ ನ್ಯಾಯಾಲಯವು, ಅಭಿಮಾನಿಗಳನ್ನು ವಂಚಿಸುವ ಇಂತಹ ಕೃತ್ಯಗಳಿಗೆ ಸಂಪೂರ್ಣವಾಗಿ ಬ್ರೇಕ್ ಹಾಕಿದೆ.

ಅಮಿತಾಭ್ ಬಚ್ಚನ್ ಅವರು 2022ರಲ್ಲಿ ಸಲ್ಲಿಸಿದ್ದ ವಾಣಿಜ್ಯ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಈ ತೀರ್ಪು ನೀಡಿದ್ದಾರೆ. ಮೊಬೈಲ್ ಆ್ಯಪ್‌ಗಳು, ವೆಬ್‌ಸೈಟ್‌ಗಳು, ಪೋಸ್ಟರ್‌ಗಳು ಹಾಗೂ ರಸಪ್ರಶ್ನೆ ಪುಸ್ತಕಗಳಲ್ಲಿ ಅವರ ಗುರುತನ್ನು ಅಕ್ರಮವಾಗಿ ಬಳಸಲಾಗುತ್ತಿತ್ತು. ಇದನ್ನು ತಡೆಯಲು ಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಈಗ ಶಾಶ್ವತ ಆದೇಶವನ್ನಾಗಿ ಬದಲಾಯಿಸಲಾಗಿದೆ.

Loading...

ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ಕು ಪ್ರಮುಖ ಸಂಸ್ಥೆಗಳು ರಾಜಿಗೆ ಮುಂದಾಗಿವೆ. ನಕಲಿ ವೀಡಿಯೊ ಕಾಲ್ ಆ್ಯಪ್, ರಸಪ್ರಶ್ನೆ ಪುಸ್ತಕ, ಪೋಸ್ಟರ್ ಮಾರಾಟಗಾರರು ಮತ್ತು ವೆಬ್‌ಸೈಟ್ ಮಾಲೀಕರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರು ನಟನ ವ್ಯಕ್ತಿತ್ವವನ್ನು ಮುಂದಿನ ದಿನಗಳಲ್ಲಿ ಬಳಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಹೀಗಾಗಿ ನ್ಯಾಯಾಲಯವು ಅವರಿಗೆ ದಂಡದಿಂದ ವಿನಾಯಿತಿ ನೀಡಿದೆ.

ಆದರೆ ಕೋರ್ಟ್‌ಗೆ ಹಾಜರಾಗದ ಇತರ ನಾಲ್ಕು ಆರೋಪಿಗಳ ವಿರುದ್ಧ ನ್ಯಾಯಾಲಯ ಕಠಿಣ ಕ್ರಮ ಕೈಗೊಂಡಿದೆ. ವಿಚಾರಣೆಗೆ ಹಾಜರಾಗದ ಕಾರಣ ಅವರ ವಿರುದ್ಧ ನೇರ ಆದೇಶ ಹೊರಡಿಸಲಾಗಿದೆ. ಅಮಿತಾಭ್ ಅವರ ಹೆಸರನ್ನು ಅಕ್ರಮವಾಗಿ ಬಳಸಿರುವುದು ಸ್ಪಷ್ಟವಾಗಿದೆ. ಹೀಗಾಗಿ ಈ ವಿಚಾರದಲ್ಲಿ ಹೆಚ್ಚಿನ ವಿಚಾರಣೆಯ ಅಗತ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಬಾಂಬ್ ಬೆದರಿಕೆ: ಬುಲೆಟ್‌ಪ್ರೂಫ್ ಗ್ಲಾಸ್ ಕವರ್‌ನೊಂದಿಗೆ ಅಭಿಮಾನಿಗಳನ್ನು ಭೇಟಿಯಾದ ಅಮಿತಾಭ್ 

ಡಿಜಿಟಲ್ ಜಗತ್ತಿನಲ್ಲಿ ಹೆಸರು ಮತ್ತು ಧ್ವನಿನ ಅಕ್ರಮವಾಗಿ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಗುರುತು ಸಿಗದ ವ್ಯಕ್ತಿಗಳ ವಿರುದ್ಧವೂ ಈ ಆದೇಶ ಅನ್ವಯವಾಗುವಂತೆ ಮಾಡಲಾಗಿದೆ. ‘ಜಾನ್ ಡೋ’ ನಿಯಮದಡಿ ಅನಾಮಧೇಯ ವ್ಯಕ್ತಿಗಳು ಕೂಡ ಬಚ್ಚನ್ ಅವರ ಹೆಸರನ್ನು ಬಳಸದಂತೆ ಹೈಕೋರ್ಟ್ ಸಂಪೂರ್ಣವಾಗಿ ನಿಷೇಧಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us