‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ

‘ಧುರಂಧರ್ 2’ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದಗಳ ಸುಳಿಯಲ್ಲಿದೆ. ‘ಟಾಕ್ಸಿಕ್’ ಚಿತ್ರದ ವಿರುದ್ಧ ವದಂತಿ ಹಬ್ಬಿಸಿದ್ದಕ್ಕೆ ‘ಧುರಂಧರ್ 2’ ತಂಡಕ್ಕೆ ‘ಕರ್ಮ’ ಸುತ್ತಿಕೊಂಡಿದೆ ಎಂದು ಹಿಂದಿ ಯೂಟ್ಯೂಬರ್ ಒಬ್ಬರು ಹೇಳಿದ್ದಾರೆ. ಟೀಸರ್ ನಿರಾಸೆ, IMDb ರೇಟಿಂಗ್‌ನಲ್ಲಿ ಹಿನ್ನಡೆ ಹಾಗೂ ನಿರ್ಬಂಧಿತ ಪ್ರದೇಶಗಳಲ್ಲಿ ಶೂಟಿಂಗ್ ಮಾಡಿ BMC ಕೆಂಗಣ್ಣಿಗೆ ಗುರಿಯಾಗಿರುವುದು ಚಿತ್ರತಂಡದ ಸಮಸ್ಯೆಗಳನ್ನು ಹೆಚ್ಚಿಸಿದೆ.

‘ಟಾಕ್ಸಿಕ್​​ಗೆ ಕೇಡು ಬಯಸಿದ ಧುರಂಧರ್​ನ ಕರ್ಮ ಹಿಂಬಾಲಿಸುತ್ತಿದೆ’; ಹಿಂದಿ ಯೂಟ್ಯೂಬರ್​​ ಸೆನ್ಸೇಷನ್ ಹೇಳಿಕೆ
ಯಶ್-ರಣವೀರ್

Updated on: Feb 19, 2026 | 7:31 AM

‘ಧುರಂಧರ್ 2’ ಸಿನಿಮಾ (Dhurandhar 2 Movie) ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರ ಗೆದ್ದೇ ಗೆಲ್ಲುತ್ತೆ ಎಂಬ ನಂಬಿಕೆ ಅಭಿಮಾನಿಗಳದ್ದು. ಈ ಚಿತ್ರದ ಟೀಸರ್ ಇತ್ತೀಚೆಗೆ ರಿಲೀಸ್ ಆಯಿತು. ಆದರೆ, ಹೆಚ್ಚಿನ ಪರಿಣಾಮ ಬೀರಲು ಇದು ವಿಫಲವಾಗಿದೆ. ಇನ್ನು, ಐಎಂಡಿಬಿ ರೇಟಿಂಗ್​​ನಲ್ಲಿಯೂ ‘ಧುರಂಧರ್ 2’ ಸಿನಿಮಾನ ‘ಟಾಕ್ಸಿಕ್’ ಹಿಂದಕ್ಕೆ ಹಾಕಿದೆ. ಈ ಎಲ್ಲಾ ವಿಷಯಗಳ ಮಧ್ಯೆ ‘ಧುರಂಧರ್ 2 ತಂಡವನ್ನು ಕರ್ಮ ಹಿಂಬಾಲಿಸುತ್ತಿದೆ ಎಂದು ಹಿಂದಿ ಯೂಟ್ಯೂಬರ್ ಒಬ್ಬರು ಹೇಳಿದ್ದಾರೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ.

ಹಿಂದಿ ಮಂದಿ ‘ಧರುಂದರ್ 2’ ಸಿನಿಮಾ ಪರವಾಗಿ ಮಾತನಾಡುತ್ತಾ ಇದ್ದಾರೆ. ಈ ಚಿತ್ರದ ಎದುರು ರಿಲೀಸ್ ಆಗೋ ಸಿನಿಮಾಗಳು ನಾಶವಾಗುತ್ತವೆ ಎಂದು ಭಯ ಹುಟ್ಟಿಸೋ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ಒಳಗೆ ಭಯ ಇದ್ದೇ ಇದೆ. ಈ ಕಾರಣದಿಂದಲೇ ವದಂತಿ ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬುದು ಕೆಲವರ ಆರೋಪ. ‘ಟಾಕ್ಸಿಕ್ ಮುಂದಕ್ಕೆ ಹೋಗುತ್ತೆ, ಟಾಕ್ಸಿಕ್ ಅಂದುಕೊಂಡ ದಿನಾಂಕದಂದು ರಿಲೀಸ್ ಆಗಲ್ಲ’ ಎಂದೆಲ್ಲ ವದಂತಿ ಹಬ್ಬಿಸುವ ಕೆಲಸ ಮಾಡಿದ್ದು ‘ಧುರಂಧರ್’ ತಂಡ ಎಂದು ಹಿಂದಿ ಯೂಟ್ಯೂಬರ್ ವಾದಿಸಿದ್ದಾರೆ.

‘ನೂರಕ್ಕೆ ನೂರಾಹತ್ತು ಪರ್ಸೆಂಟ್ ಹೇಳ್ತಿದೀನಿ ಧುರಂಧರ್ 2 ಸಿನಿಮಾ ಪೋಸ್ಟ್​ಪೋನ್ ಆಗಲಿದೆ. ಬೇರೆಯವರಿಗೆ ಹೊಂಡ ತೋಡಿದರೆ, ಬೀಳೋದು ನಾವೇ. ಟಾಕ್ಸಿಕ್ ಪೋಸ್ಟ್​​ಪೋನ್​ ಆಗುತ್ತದೆ ಎಂದು ಧುರಂಧರ್ ತಂಡದವರು ಸುದ್ದಿ ಹಬ್ಬಿಸುತ್ತಲೇ ಬಂದರು. ಚಿತ್ರದ ಕಥೆ ಲೀಕ್ ಆಗಿದೆ ಎಂದು ಕೂಡ ಹೇಳಿದರು. ಆದರೆ, ಈಗ ಕರ್ಮ ಧುರಂಧರ್ 2 ಚಿತ್ರಕ್ಕೆ ಸುತ್ತಿಕೊಂಡು ಬಂದಿದೆ. ಅವರ ಸಿನಿಮಾ ಮುಂದಕ್ಕೆ ಹೋಗುತ್ತದೆ’ ಎಂದು ಹೇಳಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ‘ಧುರಂಧರ್ 2’ ಜೊತೆ ಬರ್ತಾರಾ ಅಕ್ಷಯ್ ಕುಮಾರ್? ಆದರೆ ಒಂದು ಟ್ವಿಸ್ಟ್

‘ಧುರಂಧರ್ 2’ ಚಿತ್ರಕ್ಕೆ ಕಾನೂನಾತ್ಮಕವಾಗಿಯೂ ಸಮಸ್ಯೆ ಆಗಿದೆ. ಮುಂಬೈನ ಅನೇಕ ಕಡೆಗಳಲ್ಲಿ ಇವರು ಶೂಟ್ ಮಾಡುತ್ತಿದ್ದಾರೆ. ನಿರ್ಬಂಧಿತ ಪ್ರದೇಶಗಳಲ್ಲೂ ಶೂಟ್ ಮಾಡುವ ಮೂಲಕ ಬೃಹತ್ ಮುಂಬೈ ಪಾಲಿಕೆಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:29 am, Thu, 19 February 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us