ಹಮ್ಜಾ ಅಲಿ ಮಜಾರಿಯನ್ನು ಸಾಯಿಸೋದು ಈ ವ್ಯಕ್ತಿ? ಇದೆ ದೊಡ್ಡ ಟ್ವಿಸ್ಟ್

ಧುರಂಧರ್ 2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಅಡ್ವಾನ್ಸ್ ಬುಕಿಂಗ್ ಭರ್ಜರಿಯಾಗಿದೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಕಥೆಯ ಬಗ್ಗೆ ಹಲವು ಥಿಯರಿಗಳು ಹರಿದಾಡುತ್ತಿವೆ. ಸಾರಾ ಅರ್ಜುನ್ (ಯಲಿನಾ ಜಮಾಲಿ) ರಣವೀರ್ ಸಿಂಗ್ (ಹಮ್ಜಾ ಅಲಿ) ಅವರನ್ನು ಹತ್ಯೆ ಮಾಡಲಿದ್ದಾರೆ ಎಂಬುದು ಪ್ರಮುಖ ಚರ್ಚೆ.

ಹಮ್ಜಾ ಅಲಿ ಮಜಾರಿಯನ್ನು ಸಾಯಿಸೋದು ಈ ವ್ಯಕ್ತಿ? ಇದೆ ದೊಡ್ಡ ಟ್ವಿಸ್ಟ್
ಯಲಿನಾ-ಹಮ್ಜಾ

Updated on: Mar 14, 2026 | 7:29 AM

‘ಧುರಂಧರ್ 2’ ಸಿನಿಮಾ (Dhurandhar 2) ರಿಲೀಸ್​​ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಅಡ್ವಾನ್ಸ್ ಬುಕಿಂಗ್​​​ನಲ್ಲೂ ಚಿತ್ರ ಅಬ್ಬರಿಸುತ್ತಿದೆ. ದೊಡ್ಡ ಚಿತ್ರಗಳು ರಿಲೀಸ್ ಆಗುತ್ತವೆ ಎಂದರೆ ಅದಕ್ಕೆ ತಕ್ಕಂತೆ ಒಂದಷ್ಟು ಥಿಯರಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ. ಅದೇ ರೀತಿ ‘ಧುರಂಧರ್ 2’ ಸಿನಿಮಾಗೆ ಸಂಬಂಧಿಸಿದ ಒಂದು ದೊಡ್ಡ ಥಿಯರಿ ಹುಟ್ಟಿಕೊಂಡಿದೆ. ತೆರೆಮೇಲೆ ರಣವೀರ್ ಸಿಂಗ್ ಅವರನ್ನು ಕೊಲ್ಲೋದು ಸಾರಾ ಅರ್ಜುನ್ ಎನ್ನಲಾಗಿದೆ. ಈ ಬಗ್ಗೆ ಚರ್ಚೆಗಳು ನಡೆದಿವೆ.

ಈ ಮೊದಲು ‘ಟಾಕ್ಸಿಕ್’ ರಿಲೀಸ್ ಆಗುತ್ತದೆ ಎಂದಾಗ ಒಂದಷ್ಟು ಥಿಯರಿಗಳು ಹೊರ ಬಂದವು.ಕಥೆ ಹಾಗಿರಲಿದೆ, ಹೀಗಿರಲಿದೆ ಎಂದೆಲ್ಲ ಹೇಳಲಾಯಿತು. ಈಗ ‘ಧುರಂಧರ್ 2’ ಸಿನಿಮಾ ಬಗ್ಗೆಯೂ ಇದೇ ರೀತಿಯ ಥಿಯರಿಗಳು ಹುಟ್ಟಿಕೊಳ್ಳುತ್ತಿವೆ. ಹಮ್ಜಾ ಅಲಿ ಮಜಾರಿಯನ್ನು ಯಲಿನಾ ಜಮಾಲಿ ಸಾಯಿಸುತ್ತಾಳಾ ಎಂಬ ಪ್ರಶ್ನೆ ಮೂಡಿದೆ.

ಯಲಿನಾ ರಾಜಕಾರಣಿಯ ಮಗಳು. ಈಕೆಯ ಮೇಲೆ ಹಮ್ಜಾಗೆ ಪ್ರೀತಿ ಮೂಡುತ್ತದೆ. ಇಬ್ಬರೂ ವಿವಾಹ ಆಗುತ್ತಾರೆ.ಈ ಹಮ್ಜಾ ಅಲಿ ಭಾರತದ ಸ್ಪೈ ಎಂಬ ವಿಷಯ ಆಕೆಗೆ ತಿಳಿದಿರೋದಿಲ್ಲ. ಹೀಗಾಗಿ, ಈ ವಿಷಯ ತಿಳಿದ ಬಳಿಕ ಆಕೆ ಹತ್ಯೆ ಮಾಡುತ್ತಾಳೆ ಎಂದು ಹೇಳಲಾಗುತ್ತಾ ಇದೆ. ಇದಕ್ಕೆ ಕಾರಣವೂ ಇದೆ. ಯಲಿನಾ ಗನ್ ಹಿಡಿದು ನಿಲ್ಲೋ ದೃಶ್ಯ ಟ್ರೇಲರ್​​ನಲ್ಲಿ ಬರುತ್ತದೆ. ಇದನ್ನು ನೋಡಿದ ಅನೇಕರು ಹೀಗೊಂದು ಥಿಯರಿಯನ್ನು ಹುಟ್ಟುಹಾಕಿದ್ದಾರೆ.

ಇನ್ನು, ‘ಗೆಹ್ರಾ ಹುವಾ..’ ಹಾಡಿನ ಸಾಲುಗಳು ಕೂಡ ಚರ್ಚೆಯನ್ನು ಹುಟ್ಟುಹಾಕಿದೆ. ಪ್ರೀತಿ ಹಾಗೂ ಮೋಸದ ಕುರಿತು ಈ ಹಾಡಿನ ಸಾಲು ಸಾಗುತ್ತದೆ. ಯಲಿನಾ ಜೊತೆ ಪ್ರೀತಿ ಮಾಡಿದ್ದು, ಹಮ್ಜಾ ತೆಗೆದುಕೊಂಡ ದೊಡ್ಡ ತಪ್ಪು ನಿರ್ಧಾರ ಆಗಿ ಮಾರ್ಪಡಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ

ಇನ್ನು, ಹಮ್ಜಾನ ಯಲಿನಾ ಎಕ್ಸ್​​​ಪೋಸ್ ಮಾಡಬಹುದು ಎಂದು ಕೂಡ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿವಿಧ ಚರ್ಚೆಗಳು ಜೋರಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us