
ಜನರನ್ನು ಆಕರ್ಷಿಸಲು ದೊಡ್ಡ ಬಜೆಟ್ನಲ್ಲಿ ಜಾಹೀರಾತುಗಳನ್ನು ಮಾಡಲಾಗುತ್ತಿದೆ. ಜನರನ್ನು ಆಕರ್ಷಿಸಲು ಏನೆಲ್ಲ ಬೇಕೋ ಅದೆಲ್ಲವನ್ನೂ ಮಾಡಲಾಗುತ್ತಿದೆ. ಇತ್ತೀಚೆಗೆ ಡ್ರೀಮ್ 11 (Dream 11) ಜಾಹೀರಾತೊಂದು ಪ್ರಸಾರ ಕಂಡಿದೆ. ಇದರಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ಈ ಜಾಹೀರಾತಿನ ಬಗ್ಗೆ ಭರ್ಜರಿ ಚರ್ಚೆ ನಡೆಯುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಡ್ರೀಮ್ 11’ ಜಾಹೀರಾತಿನಲ್ಲಿ ನಟರಾದ ಆಮಿರ್ ಖಾನ್, ರಣಬೀರ್ ಕಪೂರ್, ಕ್ರಿಕೆಟರ್ಗಳಾದ ರೋಹಿತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮೊದಲಾದವರು ಇದ್ದರು. ಇನ್ನು, ಇದರ ಪ್ರಮೋಷನ್ಗೆ ಆಲಿಯಾ ಭಟ್ ಹಾಗೂ ಮೊದಲಾದವರನ್ನು ಬಳಕೆ ಮಾಡಿಕೊಳ್ಳಲಾಗಿದೆ. ಈ ಕಾರಣಕ್ಕೆ ಜಾಹೀರಾತು ಗಮನ ಸೆಳೆದಿದೆ.
ಆಮಿರ್ ಖಾನ್ ಬಾಲಿವುಡ್ನ ಖ್ಯಾತ ಹೀರೋ. ರಣಬೀರ್ ಕಪೂರ್ ಅವರಿಗೂ ಬೇಡಿಕೆ ಇದೆ. ರೋಹಿತ್ ಶರ್ಮಾ, ರಿಷಭ್ ಪಂತ್ , ಹಾರ್ದಿಕ್ ಪಾಂಡ್ಯ, ಬೂಮ್ರಾಗೆ ಕ್ರಿಕೆಟ್ ಲೋಕದಲ್ಲಿ ಬೇಡಿಕೆ ಇದೆ. ಈ ಎಲ್ಲರೂ ಈ ಜಾಹೀರತಿನಲ್ಲಿ ಇದ್ದಾರೆ.
ಇದನ್ನೂ ಓದಿ: ಆಮಿರ್ ಖಾನ್-ರಣ್ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
ಈ ಜಾಹೀರಾತಿನಲ್ಲಿ ಇಷ್ಟೊಂದು ದೊಡ್ಡ ಸೆಲೆಬ್ರಿಟಿಗಳು ಇರೋದ್ರಿಂದ ಇದು ಸಾಕಷ್ಟು ಜನರಿಗೆ ರೀಚ್ ಆಗಿದೆ. ಇದು ಫನ್ ಆಗಿ ಕೂಡ ಇದೆ. ಈ ವಿಡಿಯೋ ಸುಮಾರು ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Sat, 15 March 25