Drishyam 2: 76 ಕೋಟಿ ರೂ. ಕಲೆಕ್ಷನ್​ ಮಾಡಿದ ‘ದೃಶ್ಯಂ 2’; ಅಜಯ್​ ದೇವಗನ್​ ಸಿನಿಮಾ ಸೂಪರ್​ ಹಿಟ್​

| Updated By: ಮದನ್​ ಕುಮಾರ್​

Updated on: Nov 22, 2022 | 12:54 PM

Drishyam 2 Box Office Collection Day 4: ಸೋಮವಾರದ ಪರೀಕ್ಷೆಯಲ್ಲಿ ‘ದೃಶ್ಯಂ 2’ ಸಿನಿಮಾ ಪಾಸ್​ ​ ಆಗಿದೆ. ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಕಲೆಕ್ಷನ್​ ಮಾಡುವ ಮೂಲಕ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ.

Drishyam 2: 76 ಕೋಟಿ ರೂ. ಕಲೆಕ್ಷನ್​ ಮಾಡಿದ ‘ದೃಶ್ಯಂ 2’; ಅಜಯ್​ ದೇವಗನ್​ ಸಿನಿಮಾ ಸೂಪರ್​ ಹಿಟ್​
‘ದೃಶ್ಯಂ 2’ ಚಿತ್ರದ ಪೋಸ್ಟರ್​
Follow us on

ಅಜಯ್​ ದೇವಗನ್​ ನಟನೆಯ ‘ದೃಶ್ಯಂ 2’ (Drishyam 2) ಚಿತ್ರ ಈ ಪರಿ ಕಲೆಕ್ಷನ್​ ಮಾಡುತ್ತದೆ ಎಂದು ಬಹುತೇಕರು ಊಹಿಸಿರಲಿಲ್ಲ. ಯಾಕೆಂದರೆ ಇದು ಮಲಯಾಳಂನಿಂದ ಹಿಂದಿಗೆ ರಿಮೇಕ್​ ಆದ ಸಿನಿಮಾ. ಒಟಿಟಿಯಲ್ಲಿ ಮಲಯಾಳಂ ‘ದೃಶ್ಯಂ 2’ ಚಿತ್ರವನ್ನು ಪ್ರೇಕ್ಷಕರು ಈ ಮೊದಲೇ ನೀಡಿದ್ದರು. ಹಾಗಿದ್ದರೂ ಕೂಡ ಹಿಂದಿ ರಿಮೇಕ್​ ನೋಡಲು ಉತ್ತರ ಭಾರತದ ಮಂದಿ ಮುಗಿ ಬಿದ್ದಿದ್ದಾರೆ. ಅದರ ಪರಿಣಾಮವಾಗಿ ಈ ಚಿತ್ರಕ್ಕೆ ಭರ್ಜರಿ ಕಲೆಕ್ಷನ್​ (Drishyam 2 Box Office Collection) ಆಗುತ್ತಿದೆ. 4 ದಿನಕ್ಕೆ ಬರೋಬ್ಬರಿ 76 ಕೋಟಿ ರೂಪಾಯಿ ಹರಿದುಬಂದಿದೆ. ಸೋಮವಾರದ ಪರೀಕ್ಷೆಯಲ್ಲೂ ಈ ಸಿನಿಮಾ ಪಾಸ್​ ಆಗಿದ್ದು, ಶೀಘ್ರವೇ ನೂರು ಕೋಟಿ ರೂಪಾಯಿ ಕ್ಲಬ್​ ಸೇರಲಿದೆ. ಈ ಸಿನಿಮಾದಿಂದ ನಟ ಅಜಯ್​ ದೇವಗನ್ (Ajay Devgn) ಅವರು ಮತ್ತೆ ಮೊದಲಿನ ಚಾರ್ಮ್​ ಪಡೆದುಕೊಂಡಿದ್ದಾರೆ.

ಮೊದಲ ವೀಕೆಂಡ್​ನಲ್ಲಿಯೇ ‘ದೃಶ್ಯಂ 2’ ನಿರ್ಮಾಪಕರ ಜೇಬು ತುಂಬಿದೆ. ನ.18ರಂದು ತೆರೆಕಂಡ ಈ ಚಿತ್ರದಲ್ಲಿ ಅಜಯ್​ ದೇವಗನ್​ ಜೊತೆ ಶ್ರೀಯಾ ಶರಣ್​, ಟಬು, ಅಕ್ಷಯ್​ ಖನ್ನಾ, ಇಶಿತಾ ದತ್ತ ಮುಂತಾದವರು ನಟಿಸಿದ್ದಾರೆ. ಮೊದಲ ದಿನ ಸಂಗ್ರಹ ಆಗಿದ್ದು 15.38 ಕೋಟಿ ರೂಪಾಯಿ. ಎರಡನೇ ದಿನ ಕಲೆಕ್ಷನ್​ ಹೆಚ್ಚಿತು. ಶನಿವಾರ (ನ.19) ಬರೋಬ್ಬರಿ 21.59 ಕೋಟಿ ರೂಪಾಯಿ ಆದಾಯ ಹರಿದು ಬಂತು. ಭಾನುವಾರ (ನ.20) 27.17 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಗೆ.

ಇದನ್ನೂ ಓದಿ
‘ಯಶೋದಾ’ ಚಿತ್ರದ ಮೊದಲನೇ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಎಷ್ಟು?
Puri Jagannadh: ‘ಬಾಕ್ಸ್​ ಆಫೀಸ್​ ಲೆಕ್ಕ ಸುಳ್ಳು ಹೇಳ್ತಾರೆ, ಅಸಹ್ಯ ಆಗತ್ತೆ’: ನಿರ್ದೇಶಕ ಪುರಿ ಜಗನ್ನಾಥ್ ಆಡಿಯೋ ವೈರಲ್​
Rishab Shetty: ಐಎಂಡಿಬಿಯಲ್ಲಿ ಗಮ್ಮತ್​ ರೇಟಿಂಗ್​ ಪಡೆದ ‘ಕಾಂತಾರ’; ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿದ ರಿಷಬ್​ ಸಿನಿಮಾ
ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ಬಾಚಿದ ‘ಬ್ರಹ್ಮಾಸ್ತ್ರ’ ಚಿತ್ರದಿಂದ ರಾಜಮೌಳಿಗೆ ಸಿಕ್ಕ ಹಣ ಎಷ್ಟು?

ಯಾವುದೇ ಚಿತ್ರಕ್ಕೆ ಸೋಮವಾರದ ಗಳಿಕೆ ತುಂಬ ಮುಖ್ಯವಾಗುತ್ತದೆ. ಸೋಮವಾರದ ಪರೀಕ್ಷೆಯಲ್ಲಿ ಚಿತ್ರ ಪಾಸ್​ ಆದರೆ ಇನ್ನೂ ಒಂದಷ್ಟು ದಿನ ಉತ್ತಮ ಗಳಿಕೆ ಮಾಡುವುದು ಖಚಿತ. ಈ ವಿಚಾರದಲ್ಲಿ ‘ದೃಶ್ಯಂ 2’ ಸಿನಿಮಾ ಯಶಸ್ವಿ ಆಗಿದೆ. ಸೋಮವಾರ (ನ.21) 11.87 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈ ಮೂಲಕ ಒಟ್ಟು ನಾಲ್ಕು ದಿನಕ್ಕೆ 76 ಕೋಟಿ ರೂಪಾಯಿ ಸಂಗ್ರಹ ಆಗಿದೆ.

‘ದೃಶ್ಯಂ 2’ ಚಿತ್ರಕ್ಕೆ ಅಭಿಷೇಕ್​ ಪಾಠಕ್​ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆತ್ಮರಕ್ಷಣೆಗಾಗಿ ನಡೆದ ಒಂದು ಕೊಲೆಯನ್ನು ಕಥಾನಾಯಕ ಮುಚ್ಚಿ ಹಾಕುತ್ತಾನೆ. ತನ್ನ ಕುಟುಂಬದವರು ಪೊಲೀಸರ ಕೈಗೆ ಸಿಕ್ಕಿ ಹಾಕಿಕೊಳ್ಳದಂತೆ ಚಾಲಾಕಿತನದಿಂದ ಬಚಾವ್​ ಮಾಡುತ್ತಾನೆ. ಇದು ‘ದೃಶ್ಯಂ’ ಮೊದಲ ಪಾರ್ಟ್​ ಕಥೆ. ಎರಡನೇ ಪಾರ್ಟ್​ನಲ್ಲಿ ಆ ಕೇಸ್​ ಮತ್ತೆ ಓಪನ್​ ಆಗುತ್ತದೆ. ಹಲವು ಟ್ವಿಸ್ಟ್​ಗಳ ಮೂಲಕ ಕಥೆ ಸಾಗುತ್ತದೆ. ಈ ಬಾರಿ ಹೀರೋ ತನ್ನ ಕುಟುಂಬವನ್ನು ಹೇಗೆ ರಕ್ಷಿಸುತ್ತಾನೆ ಎಂಬುದು ‘ದೃಶ್ಯಂ 2’ ಕಥಾಹಂದರ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 12:46 pm, Tue, 22 November 22