ಬಾಲಿವುಡ್ನ ಕರಾಳ ಮುಖ ತೆರೆದಿಟ್ಟ, ‘ನಿನ್ನಿಂದಲೇ’ ಬೆಡಗಿ ಎರಿಕಾ ಫರ್ನಾಂಡೀಸ್
Erica Fernandes: ಪುನೀತ್ ರಾಜ್ಕುಮಾರ್ ನಟಿಸಿ, ಹೊಂಬಾಳೆ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದ ‘ನಿನ್ನಿಂದಲೆ’ ಸಿನಿಮಾದ ನಾಯಕಿ ಎರಿಕಾ ಫರ್ನಾಂಡೀಸ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿ ಬಾಲಿವುಡ್ನ ನಿಜ ಬಣ್ಣವನ್ನು ತೆರೆದಿಟ್ಟಿದ್ದಾರೆ. ಬಾಲಿವುಡ್ನಲ್ಲಿ ಎಂಥಹಾ ಕರಾಳ ಸಂಗತಿಗಳು ನಡೆಯುತ್ತವೆ ಎಂಬುದರ ಕೆಲವು ಝಲಕ್ಗಳನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ನಿನ್ನಿಂದಲೆ’ ಸಿನಿಮಾ ಹಲವರಿಗೆ ನೆನಪರಬೇಕು, ಹೊಂಬಾಳೆ ಫಿಲಮ್ಸ್ ನಿರ್ಮಿಸಿದ ಮೊದಲ ಸಿನಿಮಾ ಅದು. ಆ ಸಿನಿಮಾದ ಮೂಲಕ ಎರಿಕಾ ಫರ್ನಾಂಡೀಸ್ ಹೆಸರಿನ ಬಾಲಿವುಡ್ ಬೆಡಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಿದ್ದರು. ಸಿನಿಮಾ ಅನ್ನು ಅದ್ಧೂರಿಯಾಗಿ ಮಾಡಲಾಗಿತ್ತು, ಎರಿಕಾ ಸಹ ತಮ್ಮ ಅಂದ ಮತ್ತು ನಟನೆಯಿಂದ ಗಮನ ಸೆಳೆದಿದ್ದರು. ಆದರೆ ಆ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣಲಿಲ್ಲ. ಎರಿಕಾ ಫರ್ನಾಂಡೀಸ್ ಸಿನಿಮಾ ವೃತ್ತಿ ಜೀವನವೂ ಸಹ ಆ ನಂತರ ನಿರೀಕ್ಷಿತ ವೇಗದಲ್ಲಿ ಪ್ರಗತಿ ಕಾಣಲಿಲ್ಲ. ಇದೀಗ ಮುಂಬೈ ಬಿಟ್ಟು ದುಬೈಗೆ ಶಿಫ್ಟ್ ಆಗಿರುವ ಎರಿಕಾ ಫರ್ನಾಂಡೀಸ್, ಬಾಲಿವುಡ್ನ ಕರಾಳ ಮುಖವನ್ನು ತೆರೆದಿಟ್ಟಿದ್ದಾರೆ.
ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿರುವ ಎರಿಕಾ ಫರ್ನಾಂಡೀಸ್, ಬಾಲಿವುಡ್ ಬಹಳ ಟೊಳ್ಳಾದ ಇಂಡಸ್ಟ್ರಿ, ಬಾಲಿವುಡ್ನ ಮೇಲೆ ಮಾಲ ಥಳುಕಿದೆ, ಒಳಗೆ ಇರುವುದೆಲ್ಲ ಹುಳುಕೇ ಎಂದಿದ್ದಾರೆ. ಮುಂದುವರೆದು ಮಾತನಾಡಿರುವ ಎರಿಕಾ, ‘ಬಾಲಿವುಡ್ನಲ್ಲಿ ಕೊಡು-ಕೊಳ್ಳು ವ್ಯವಹಾರ ಹೆಚ್ಚಾಗಿದೆ’ ಎಂದಿದ್ದಾರೆ. ಪರೋಕ್ಷವಾಗಿ ಲೈಂಗಿಕ ಸವಲತ್ತುಗಳನ್ನು ಒದಗಿಸಿದರೆ ಮಾತ್ರವೇ ಅಲ್ಲಿ ಸಿನಿಮಾ ಅವಕಾಶಗಳು ಸಿಗುತ್ತವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ ಎರಿಕಾ ಫರ್ನಾಂಡೀಸ್.
ಅದೇ ಪಾಡ್ಕಾಸ್ಟ್ನಲ್ಲಿ ಬಾಲಿವುಡ್ನ ಕರಾಳ ಮುಖ ತೆರೆದಿಟ್ಟಿರುವ ನಟಿ ಎರಿಕಾ, ‘ನಾನು ಕೇಳಿರುವಂತೆ, ಬಾಲಿವುಡ್ನಲ್ಲಿ ಕೆಲವು ವಾಟ್ಸ್ಆಫ್ ಗ್ರೂಫ್ಗಳಿವೆ. ಆ ಗ್ರೂಪ್ಗಳಲ್ಲಿ ಅವರು ತಾವು ಯಾರು ಯಾರೊಂದಿಗೆ ಲೈಂಗಿಕ ಸುಖ ಅನುಭವಿಸಿದ್ದೀವಿ, ಯಾರೊಂದಿಗೆ ಅನುಭವಿಸಬೇಕು? ಯಾರು ಸುಲಭವಾಗಿ ಲೈಂಗಿಕತೆಗೆ ಒಪ್ಪುತ್ತಾರೆ, ಯಾರು ಒಪ್ಪುವುದಿಲ್ಲ ಎಂಬಿತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ’ ಎಂದಿದ್ದಾರೆ ನಟಿ ಎರಿಕಾ. ನಟಿಯ ಈ ಹೇಳಿಕೆಗಳು ಬಾಲಿವುಡ್ನ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಇದನ್ನೂ ಓದಿ:Pregnancy Health Tips: ಗರ್ಭಾವಸ್ಥೆಯಲ್ಲಿ ತುಟಿಗಳು ಕಪ್ಪಾಗದಂತೆ ತಡೆಯಲು ಇಲ್ಲಿವೆ 6 ಸಲಹೆಗಳು
ಅಂದಹಾಗೆ ಟಿವಿ ಧಾರಾವಾಹಿ ನಟಿಯಾಗಿದ್ದ ಎರಿಕಾ, ತಮಿಳಿನ ‘ಅನಿತು, ಅನಿತು ಅನಿತು’ ಸಿನಿಮಾ ಮೂಲಕ ಸಿನಿಮಾ ನಾಯಕಿಯಾದರು. ಅದಾದ ಕೂಡಲೇ ಪುನೀತ್ ರಾಜ್ ಕುಮಾರ್ ಜೊತೆಗೆ ‘ನಿನ್ನಿಂದಲೆ’ ಸಿನಿಮಾದಲ್ಲಿ ನಟಿಸಿದರು. ಅದಾದ ಬಳಿಕ ಎರಿಕಾಗೆ ಒಂದರ ಹಿಂದೊಂದರಂತೆ ಅವಕಾಶಗಳು ದೊರೆತವು. ಆದರೆ ಯಾವುದೂ ಸಹ ಹಿಟ್ ಎನಿಸಿಕೊಳ್ಳಲಿಲ್ಲ. 2015 ರಲ್ಲಿ ‘ಬುಗುರಿ’ ಹೆಸರಿನ ಕನ್ನಡ ಸಿನಿಮಾದಲ್ಲಿ ಸಹ ಎರಿಕಾ ನಟಿಸಿದರು. ಆ ಸಿನಿಮಾ ಸಹ ಹಿಟ್ ಆಗಲಿಲ್ಲ. 2017ರ ಬಳಿಕ ಅವಕಾಶಗಳು ಬರುವುದೇ ನಿಂತು ಹೋದ ಕಾರಣ ಮತ್ತೆ ಟಿವಿ ಲೋಕಕ್ಕೆ ಎಂಟ್ರಿ ನೀಡಿದರು. ಇದೀಗ ಮುಂಬೈನ ರಾಜಕೀಯದಿಂದ ಬೇಸತ್ತು ದುಬೈಗೆ ಶಿಫ್ಟ್ ಆಗಿದ್ದಾರೆ ಎರಿಕಾ ಫರ್ನಾಂಡೀಸ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ