2006ರಲ್ಲಿ ತೆರೆಗೆ ಬಂದ ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಫಿರ್ ಹೇರಾ ಫೇರಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಅನೇಕ ದೃಶ್ಯಗಳು ಐಕಾನಿಕ್ ಎನಿಸಿಕೊಂಡಿವೆ. ಅದನ್ನು ಈಗಲೂ ನೋಡಿ ಫ್ಯಾನ್ಸ್ ಎಂಜಾಯ್ ಮಾಡುತ್ತಾರೆ. ಈ ಸಿನಿಮಾ ವಿದೇಶದಲ್ಲೂ ಸಖತ್ ಫೇಮಸ್. ಅದಕ್ಕೆ ಈಗ ತಾಜಾ ಉದಾಹರಣೆ ಸಿಕ್ಕಿದೆ. ಅಕ್ಷಯ್ ಕುಮಾರ್ ಅವರು ಸೌದಿಗೆ ತೆರಳಿದ್ದರು. ಈ ವೇಳೆ ಅಭಿಮಾನಿಯೋರ್ವ ‘ಫಿರ್ ಹೇರಾ ಫೇರಿ’ ಚಿತ್ರದ (Phir Hera Pheri) ರಾಜು (ಅಕ್ಷಯ್ ಕುಮಾರ್) ಸ್ಟೈಲ್ನ ಕಾಪಿ ಮಾಡಿದ್ದಾನೆ. ಇದನ್ನು ಅಕ್ಷಯ್ ಕುಮಾರ್ ಕಾರಿನಲ್ಲಿ ಕುಳಿತು ನೋಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಫಿರ್ ಹೇರಾ ಫೇರಿ’ ಚಿತ್ರದಲ್ಲಿ ರಾಜು ಆಗಿ ಅಕ್ಷಯ್ ಕುಮಾರ್ ಮಿಂಚಿದ್ದರು. ಸುನೀಲ್ ಶೆಟ್ಟಿ, ಪರೇಶ್ ರಾವಲ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ರಾಜು ಸ್ಟೈಲ್ಗಳು ಈಗಲೂ ಫೇಮಸ್. ಅಕ್ಷಯ್ ಕುಮಾರ್ ಅವರು ‘ರೆಡ್ ಸೀ ಫಿಲ್ಮ್ ಫೆಸ್ಟಿವಲ್’ಗಾಗಿ ಸೌದಿ ಅರೇಬಿಯಾಗೆ ತೆರಳಿದ್ದಾರೆ. ಈ ವೇಳೆ ಅವರು ಕಾರಿನಿಂದ ಹೊರಡುವಾಗ ಅಕ್ಷಯ್ ಕುಮಾರ್ ಅಭಿಮಾನಿಗಳು ನೆರೆದಿದ್ದರು. ಓರ್ವ ಅಭಿಮಾನಿ ಅಕ್ಷಯ್ ಕುಮಾರ್ ಅವರ ‘ಫಿರ್ ಹೇರಾ ಫೇರಿ’ ಚಿತ್ರದ ಸ್ಟೈಲ್ನ ಕಾಪಿ ಮಾಡಿದ್ದಾನೆ. ಇದನ್ನು ನೋಡಿ ಅಕ್ಷಯ್ ಕುಮಾರ್ಗೆ ಖುಷಿಯಾಗಿದೆ.
ಈ ವಿಡಿಯೋ ಶೇರ್ ಮಾಡಿಕೊಂಡಿರುವ ಅಕ್ಷಯ್ ಕುಮಾರ್ ಅವರು, ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಸಿನಿಮೋತ್ಸವ ಆಯೋಜನೆ ಮಾಡಿದವರಿಗೂ ಹಾಗೂ ಫ್ಯಾನ್ಸ್ಗೆ ಅಕ್ಷಯ್ ಕುಮಾರ್ ಧನ್ಯವಾದ ಅರ್ಪಿಸಿದ್ದಾರೆ. ಈ ವಿಡಿಯೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ಬೇಸರದ ಸಂಗತಿ ಸಿಕ್ಕಿತ್ತು. ನಿರ್ಮಾಪಕ ಫಿರೋಜ್ ನಾಡಿಯಾದ್ವಾಲಾ ‘ಹೇರಾ ಫೇರಿ 3’ ಸಿನಿಮಾ ಮಾಡಲು ಆಲೋಚನೆ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಟಿಸುತ್ತಿಲ್ಲ. ಅವರ ಬದಲಿಗೆ ಕಾರ್ತಿಕ್ ಆರ್ಯನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Haha…for the most lovable of reasons, my fans’ Hera Pheri simply rocks my life. Thank you, Red Sea International Film Festival and everyone in Jeddah for a memorable time. Love and prayers to you all. @RedSeaFilm pic.twitter.com/UabutUx0sJ
— Akshay Kumar (@akshaykumar) December 4, 2022
ಇದನ್ನೂ ಓದಿ: ‘ರಾಮ್ ಸೇತು’ ಎದುರು ಹೆಚ್ಚಾಯ್ತು ‘ಕಾಂತಾರ’ ಶೋಗಳ ಸಂಖ್ಯೆ; ಮತ್ತೆ ಎಡವಿದ ಅಕ್ಷಯ್ ಕುಮಾರ್
‘ಹೇರಾ ಫೇರಿ’ ಸರಣಿಯಿಂದ ಹೊರ ಬಂದಿದ್ದಕ್ಕೆ ಅಕ್ಷಯ್ ಕಾರಣ ತಿಳಿಸಿದ್ದರು. ‘ನನಗೆ ಸ್ಕ್ರಿಪ್ಟ್ ಇಷ್ಟ ಆಗಿಲ್ಲ. ಹೀಗಾಗಿ ಹೊರ ಬಂದೆ’ ಎನ್ನುವ ಮಾತನ್ನು ಅವರು ಹೇಳಿದ್ದರು. ಆದರೆ, ಇದರ ಅಸಲಿಯತ್ತು ಬೇರೆ ಇದೆ ಎನ್ನಲಾಗುತ್ತಿದೆ. ಅಕ್ಷಯ್ ಕುಮಾರ್ ಅವರು ಈ ಚಿತ್ರಕ್ಕಾಗಿ ಬರೋಬ್ಬರಿ 90 ಕೋಟಿ ರೂಪಾಯಿ ಡಿಮ್ಯಾಂಡ್ ಮಾಡಿದ್ದರು. ಆದರೆ, ಇದನ್ನು ನೀಡಲು ಫಿರೋಜ್ ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ