AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡಾನ್ 3’ ವಿವಾದ: ನಟ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ ಫರ್ಹಾನ್ ಅಖ್ತರ್

‘ಧುರಂಧರ್ 2’ ಚಿತ್ರದ ಯಶಸ್ಸಿನ ಬಳಿಕ ರಣವೀರ್ ಸಿಂಗ್ ಅವರು ‘ಡಾನ್ 3’ ಸಿನಿಮಾದಲ್ಲಿ ನಟಿಸಲು ಸಿದ್ಧರಿಲ್ಲ. ಆದ್ದರಿಂದಲೇ ಈ ವಿವಾದ ಹೆಚ್ಚಿದೆ. ರಣವೀರ್ ಸಿಂಗ್ ವಿರುದ್ಧ ನಿರ್ದೇಶಕ, ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ದೂರು ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ..

‘ಡಾನ್ 3’ ವಿವಾದ: ನಟ ರಣವೀರ್ ಸಿಂಗ್ ವಿರುದ್ಧ ದೂರು ನೀಡಿದ ಫರ್ಹಾನ್ ಅಖ್ತರ್
Farhan Ahtar, Ranveer Singh
ಮದನ್​ ಕುಮಾರ್​
|

Updated on: May 24, 2026 | 12:43 PM

Share

ಬಾಲಿವುಡ್‌ನ ಬಹುನಿರೀಕ್ಷಿತ ‘ಡಾನ್ 3’ (Don 3) ಚಿತ್ರದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಚಿತ್ರದಿಂದ ನಟ ರಣವೀರ್ ಸಿಂಗ್ ದಿಢೀರ್ ಹೊರನಡೆದಿರುವ ಹಿನ್ನೆಲೆಯಲ್ಲಿ, ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ (Farhan Ahtar) ಈಗ ಸಿನಿಮಾ ನೌಕರರ ಒಕ್ಕೂಟದ (FWICE) ಮೆಟ್ಟಿಲೇರಿದ್ದಾರೆ. ರಣವೀರ್ ಸಿಂಗ್ ವಿರುದ್ಧ ಅವರು ಅಧಿಕೃತ ದೂರು ದಾಖಲಿಸಿದ್ದು, ಈ ಕುರಿತು ಒಕ್ಕೂಟವು ಮೇ 25ರ ಪತ್ರಿಕಾಗೋಷ್ಠಿ ನಡೆಸಿ ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. ಸದ್ಯ ‘ಧುರಂಧರ್ 2’ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಣವೀರ್ ಸಿಂಗ್ (Ranveer Singh) ಅವರು ‘ಡಾನ್ 3’ ಚಿತ್ರದಲ್ಲಿ ನಟಿಸಲು ಸಿದ್ಧರಿಲ್ಲ. ಅದೇ ಇಷ್ಟೆಲ್ಲ ವಿವಾದಕ್ಕೆ ಕಾರಣ ಆಗಿದೆ.

ಶಾರುಖ್ ಖಾನ್ ಬಳಿಕ ‘ಡಾನ್’ ಸರಣಿಯ ಹೊಸ ನಾಯಕನಾಗಿ ರಣವೀರ್ ಸಿಂಗ್ ಅವರನ್ನು ಅಧಿಕೃತವಾಗಿ ಘೋಷಿಸಲಾಗಿತ್ತು. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ತಿಂಗಳುಗಳಿಂದ ನಡೆಯುತ್ತಿದ್ದವು. ಆದರೆ, ಇತ್ತೀಚೆಗೆ ರಣವೀರ್ ಸಿಂಗ್ ಚಿತ್ರದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿತು. ಸ್ಕ್ರಿಪ್ಟ್ ಮತ್ತು ಚಿತ್ರದ ನಿರ್ದೇಶನದ ವಿಷಯದಲ್ಲಿ ಮೂಡಿದ ಕೆಲವು ಭಿನ್ನಾಭಿಪ್ರಾಯಗಳೇ ರಣವೀರ್ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ, ಈ ಬಗ್ಗೆ ರಣವೀರ್ ಸಿಂಗ್ ಆಗಲಿ ಅಥವಾ ‘ಎಕ್ಸೆಲ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯಾಗಲಿ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿರಲಿಲ್ಲ.

ವರದಿಗಳ ಪ್ರಕಾರ, ಎಕ್ಸೆಲ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯು ರಣವೀರ್ ಸಿಂಗ್ ಅವರನ್ನು ಗಮನದಲ್ಲಿಟ್ಟುಕೊಂಡು ಚಿತ್ರಕಥೆ ಮತ್ತು ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಈಗಾಗಲೇ ಭಾರಿ ಹಣ ಹೂಡಿಕೆ ಮಾಡಿದೆ. ನಟನ ದಿಢೀರ್ ನಿರ್ಧಾರದಿಂದ ಚಿತ್ರೀಕರಣ ತಡವಾಗುತ್ತಿರುವುದರಿಂದ ನಿರ್ಮಾಣ ಸಂಸ್ಥೆಗೆ ಸುಮಾರು 40 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದ್ದು, ಈ ನಷ್ಟವನ್ನು ರಣವೀರ್ ಸಿಂಗ್ ಅವರಿಂದಲೇ ವಸೂಲಿ ಮಾಡಲು ಫರ್ಹಾನ್ ಅಖ್ತರ್ ಕಾನೂನು ಹೋರಾಟದ ಆಯ್ಕೆಗಳನ್ನು ಪರಿಶೀಲಿಸುತ್ತಿದ್ದಾರೆ.

ಫರ್ಹಾನ್ ಅಖ್ತರ್ ಅವರು ಸದಸ್ಯರಾಗಿರುವ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಿರ್ದೇಶಕರ ಸಂಘದ (IFTDA) ಮೂಲಕ ಈ ದೂರನ್ನು FWICEಗೆ ರವಾನಿಸಲಾಗಿದೆ. ‘ದೂರಿನ ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಸೋಮವಾರ ನಡೆಸಲಿರುವ ಸುದ್ದಿಗೋಷ್ಠಿಯಲ್ಲಿ ನಮ್ಮ ಅಧಿಕೃತ ನಿಲುವನ್ನು ಪ್ರಕಟಿಸುತ್ತೇವೆ’ ಎಂದು ಒಕ್ಕೂಟ ತಿಳಿಸಿದೆ. ಮತ್ತೊಂದೆಡೆ, ವಿವಾದ ಇತ್ಯರ್ಥದ ಭಾಗವಾಗಿ ರಣವೀರ್ ಸಿಂಗ್ ತಾವು ಪಡೆದಿದ್ದ ಮುಂಗಡ ಹಣವನ್ನು ಮರಳಿ ನೀಡಲು ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ: ರಣವೀರ್ ಸಿಂಗ್, ಆದಿತ್ಯ ಚೋಪ್ರಾ ರಹಸ್ಯ ಸಭೆ; ಹಳೇ ಮುನಿಸು ಮರೆತು ಒಂದಾದ ಗುರು-ಶಿಷ್ಯ

‘ಡಾನ್ 3’ ಚಿತ್ರದಲ್ಲಿ ಶಾರುಖ್ ಖಾನ್ ಅವರ ಐಕಾನಿಕ್ ಪಾತ್ರಕ್ಕೆ ರಣವೀರ್ ಸಿಂಗ್ ಆಯ್ಕೆಯಾದಾಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧದ ದೊಡ್ಡ ಚರ್ಚೆಯೇ ನಡೆದಿತ್ತು. ಈಗ ಸೃಷ್ಟಿಯಾಗಿರುವ ಗೊಂದಲಗಳಿಂದಾಗಿ ‘ಡಾನ್ 3’ ಚಿತ್ರ ರಣವೀರ್ ಅವರೊಂದಿಗೇ ಮುಂದುವರಿಯುತ್ತದೆಯೇ, ಹೊಸ ನಾಯಕನ ಹುಡುಕಾಟ ನಡೆಯಲಿದೆಯೇ ಅಥವಾ ಚಿತ್ರದ ಕಥೆಯಲ್ಲೇ ದೊಡ್ಡ ಬದಲಾವಣೆ ಮಾಡಲಾಗುತ್ತದೆಯೇ ಎಂಬ ಕುತೂಹಲ ಬಾಲಿವುಡ್ ವಲಯದಲ್ಲಿ ಮನೆಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ದೇವೇಗೌಡ್ರು ನಿವಾಸಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಸಿಜೆಪಿ ಪ್ರತಿಭಟನೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸರ ರಜೆ ರದ್ದು
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಚಿಕ್ಕೋಡಿ, ನಿಪ್ಪಾಣಿ ತಾಲೂಕಿನ 8 ಸೇತುವೆಗಳು ಜಲಾವೃತ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಪಿಎಲ್ ಕಾರ್ಡುದಾರರಿಗೆ ಗುಡ್​ ನ್ಯೂಸ್ ನೀಡಿದ ಆಹಾರ ಸಚಿವ ಮುನಿಯಪ್ಪ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
ಬಿಡಾಡಿ ವಾಹನಗಳ ಟೋಯಿಂಗ್: ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳು ಜಪ್ತಿ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
‘ಸ್ವಾರ್ಥ ಬಿಡಿ’: ಚಿತ್ರರಂಗದವರ ಬಗ್ಗೆ ಸಾಧುಕೋಕಿಲ ಬೇಸರ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಕಾಕ್ರೋಚ್ ಹೋರಾಟಗಾರರಿಗೆ ಮುಲ್ಲಾಗಳು ಬಿರಿಯಾನಿ ತಿನ್ನಿಸ್ತಾವಸ್ರೆ: ಸಿಂಹ
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಸಾರಿಗೆ ಸಚಿವರ ಕ್ಷೇತ್ರದಲ್ಲೇ ಗೋದಾಮಾಗಿ ಮಾರ್ಪಟ್ಟಿರುವ ಬಸ್​​ ನಿಲ್ದಾಣ!
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ಚಾಲಕನ ಜೀವಕ್ಕಿಂತ ಬಿಯರ್ ಬಾಟಲಿಯೇ ಮುಖ್ಯವಾಯಿತೇ?
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ
ನೀಟ್ ಪ್ರತಿಭಟನೆ, ಮೋದಿ ಹೇಳಿಕೆ ಬಗ್ಗೆ ಪ್ರಲ್ಹಾದ್ ಜೋಶಿ ಮಹತ್ವದ ಹೇಳಿಕೆ