ಬಾಲಿವುಡ್ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಪತಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಎರಡು ತಿಂಗಳ ಬಂಧನದ ನಂತರ ಕೊನೆಗೂ ಜಾಮೀನು ಪಡೆದಿದ್ದಾರೆ. ಮಂಗಳವಾರ (ಸೆಪ್ಟೆಂಬರ್ 21) ಅವರು ಜೈಲಿನಿಂದ ಬಿಡುಗಡೆಯಾಗಿದ್ದು, ಅವರ ಕುಟುಂಬ ಮತ್ತು ಆಪ್ತರು ಸಂತಸಗೊಂಡಿದ್ದಾರೆ. ಈಗ ಈ ಪಟ್ಟಿಗೆ ಈ ಹಿಂದೆ ಅಶ್ಲೀಲ ಚಿತ್ರಗಳಲ್ಲಿ ನಟಿಸಿದ್ದ ಮತ್ತು ತಯಾರಿಕೆಯಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿತರಾಗಿದ್ದ ನಟಿ ಗೆಹನಾ ವಸಿಷ್ಠ್ ಕೂಡ ಸೇರಿದ್ದಾರೆ. ಅವರು ರಾಜ್ ಕುಂದ್ರಾ ಬಿಡುಗಡೆಯನ್ನು ಇನ್ಸ್ಟಾಗ್ರಾಂ ಪೋಸ್ಟ್ ಮುಖಾಂತರ ಸ್ವಾಗತಿಸಿದ್ದಾರೆ.
ಜುಲೈನಲ್ಲಿ ಅಶ್ಲೀಲ ಚಲನಚಿತ್ರಗಳನ್ನು ಮಾಡಿದ್ದಕ್ಕಾಗಿ ರಾಜ್ ಕುಂದ್ರಾ ಅವರನ್ನು ಬಂಧಿಸಲಾಯಿತು. ರಾಜ್ ಕುಂದ್ರಾ ವಿರುದ್ಧ ಶೆರ್ಲಿನ್ ಚೋಪ್ರಾ, ಪೂನಮ್ ಪಾಂಡೆ ಸೇರಿದಂತೆ ಅನೇಕ ನಟಿಯರು ಗಂಭೀರ ಆರೋಪ ಮಾಡಿದ್ದರು. ಮತ್ತೊಂದೆಡೆ ಗೆಹನಾ, ನಿರಂತರವಾಗಿ ರಾಜ್ ಕುಂದ್ರಾರನ್ನು ಬೆಂಬಲಿಸುತ್ತಿದ್ದರು. ‘ಗಂಡಿ ಬಾತ್’ ವೆಬ್ ಸರಣಿಯ ಮುಖಾಂತರ ವಿವಾದ ಹುಟ್ಟುಹಾಕಿದ್ದ ಗೆಹನಾ, ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಾದಕ ಚಿತ್ರವೊಂದನ್ನು ಹಂಚಿಕೊಂಡು ರಾಜ್ ಕುಂದ್ರಾರನ್ನು ಸ್ವಾಗತಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಗೆಹನಾ, ‘ಹೃತ್ಪೂರ್ವಕ ಅಭಿನಂದನೆಗಳು. ನಿಮಗೆ ಸ್ವಾಗತ ಆರ್ಕೆ (ರಾಜ್ ಕುಂದ್ರಾ). ನೀವು ಧೈರ್ಯಶಾಲಿ, ಚೀರ್ಸ್’ ಎಂದು ಬರೆದುಕೊಂಡಿದ್ದಾರೆ. ಈಗ ಗೆಹನಾ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂದಹಾಗೆ, ಅಶ್ಲೀಲ ಚಿತ್ರಗಳ ಆರೋಪದ ಮೇಲೆ ಗೆಹನಾರನ್ನು ಮೊದಲಿಗೆ ಪೊಲೀಸರು ಬಂಧಿಸಲಾಗಿತ್ತು. ಅವರು ಕೆಲಕಾಲ ಜೈಲಿನಲ್ಲಿದ್ದರು. ನಂತರ, ಜುಲೈ 19 ರ ರಾತ್ರಿ ಅಶ್ಲೀಲ ಚಿತ್ರ ನಿರ್ಮಾಣ ಹಾಗೂ ಹಂಚಿಕೆಯ ಆರೋಪದಲ್ಲಿ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸ್ ಅಪರಾಧ ವಿಭಾಗವು ಬಂಧಿಸಿತು. ರಾಜ್ ವಿರುದ್ಧ ಸಾಕಷ್ಟು ಸಾಕ್ಷ್ಯಗಳಿವೆ ಎಂದು ಪೊಲೀಸರು ತಿಳಿಸಿದ್ದು, ಇತ್ತೀಚೆಗೆ ಸುಮಾರು 1500 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಗೆಹನಾರನ್ನು 3ನೇ ಎಫ್ಐಆರ್ ಆಧಾರದಲ್ಲಿ ಬಂಧಿಸುವಂತಿಲ್ಲ; ಸುಪ್ರೀಂ ಕೋರ್ಟ್:
ನಟಿ ಗೆಹನಾ ವಿರುದ್ಧ ಇತ್ತೀಚೆಗೆ 3ನೇ ಎಫ್ಐಆರ್ ದಾಖಲಿಸಲಾಗಿತ್ತು. ಗೆಹನಾ ಮುಂಬೈನ ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿನ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಗೆಹನಾ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲೂ ಗೆಹನಾಗೆ ಹಿನ್ನಡೆಯಾಗಿತ್ತು. ನಂತರ ಅವರು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಮುಂಬೈ ಹೈಕೋರ್ಟ್ ನೀಡಿದ್ದ ತಡೆಯನ್ನು ವಾಪಸ್ ಪಡೆದಿದೆ. ಈ ಮೂಲಕ ಗೆಹನಾಗೆ ನಿರೀಕ್ಷಣಾ ಜಾಮೀನಿಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದ್ದು, ಬಂಧನದ ಭೀತಿ ದೂರವಾಗಿದೆ. ಇದೇ ವೇಳೆ ಸುಪ್ರೀಂ ಕೋರ್ಟ್ ನಟಿ ಗೆಹನಾಗೆ ವಿಚಾರಣೆಗೆ ಸಹಕರಿಸುವಂತೆ ತಾಕೀತು ಮಾಡಿದೆ.
ಇದನ್ನೂ ಓದಿ:
ನಗ್ನವಾಗಿ ಲೈವ್ ಬಂದ ನಟಿ ಗೆಹನಾ; ಜನರಿಗೆ ಸವಾಲು ಹಾಕಿದ ಅಶ್ಲೀಲ ಸಿನಿಮಾ ಆರೋಪಿ
ಖಾಸಗಿ ಅಂಗದ ಬಗ್ಗೆ ಅಶ್ಲೀಲ ಕಮೆಂಟ್ ಹಾಕಿದವರಿಗೆ ಚಳಿ ಬಿಡಿಸಿದ ಅಮಲಾ ಪೌಲ್
Malaika Arora: ಬಾತುಕೋಳಿಯಂತೆ ನಡೆದು ಟ್ರಾಲ್ಗೆ ಒಳಗಾದ ಮಲೈಕಾ; ವಿಡಿಯೊ ನೋಡಿ
(Gehana Vasisth welcomes Raj Kundra with a hot photo meanwhile she got clearance for anticipatory bail from SC)
Published On - 2:24 pm, Wed, 22 September 21