ನನಗಿಂತ ಹೆಚ್ಚಾಗಿ ಬೇರೆ ನಟಿಯರ ಜೊತೆ ಕಾಲ ಕಳೆದರು: ಗೋವಿಂದ ಪತ್ನಿ ಸುನೀತಾ ಆರೋಪ

ಬಾಲಿವುಡ್ ಹೀರೋ ಗೋವಿಂದ ಅವರನ್ನು ಮದುವೆಯಾದ ಸುನೀತಾ ಅಹುಜಾ ಅವರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಸ್ಟಾರ್ ನಟನ ಪತ್ನಿಯಾಗುವುದು ಅಷ್ಟು ಸುಲಭ ಅಲ್ಲ ಎಂದು ಅವರು ಹೇಳಿದ್ದಾರೆ. ಅದಕ್ಕೆ ಕಾರಣವನ್ನೂ ತಿಳಿಸಿದ್ದಾರೆ. ಮಾಧ್ಯಮವೊಂದಕ್ಕೆ ಸುನೀತಾ ಅಹುಜಾ ಅವರು ಸಂದರ್ಶನ ನೀಡಿದ್ದು, ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನನಗಿಂತ ಹೆಚ್ಚಾಗಿ ಬೇರೆ ನಟಿಯರ ಜೊತೆ ಕಾಲ ಕಳೆದರು: ಗೋವಿಂದ ಪತ್ನಿ ಸುನೀತಾ ಆರೋಪ
Govinda, Sunita Ahuja

Updated on: Jun 13, 2025 | 7:26 PM

ನಟ ಗೋವಿಂದ (Govinda) ಅವರ ಖಾಸಗಿ ಜೀವನದ ಬಗ್ಗೆ ಹಲವು ಅಂತೆ-ಕಂತೆಗಳು ಹರಿದಾಡಿವೆ. ಪತ್ನಿ ಸುನೀತಾ ಅಹುಜಾ ಜೊತೆ ಗೋವಿಂದ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಅಲ್ಲದೇ ವಿಚ್ಛೇದನ ಪಡೆಯುವ ಸಾಧ್ಯತೆ ಇದೆ ಎಂದು ಕೂಡ ಗಾಸಿಪ್ ಹಬ್ಬಿಸಲಾಗಿತ್ತು. ಆದರೆ ಅದು ಯಾವುದೂ ನಿಜ ಆಗಲಿಲ್ಲ. ಹಾಗಂತ ಗೋವಿಂದ ಮತ್ತು ಸುನೀತಾ ಅಹುಜಾ (Sunita Ahuja) ನಡುವೆ ಎಲ್ಲವೂ ಚೆನ್ನಾಗಿದೆ ಎಂದೇನಿಲ್ಲ. ಗಂಡನ ಬಗ್ಗೆ ಸುನೀತಾ ಅಹುಜಾ ಅವರಿಗೆ ಸಾಕಷ್ಟು ದೂರುಗಳಿವೆ. ಆ ಕುರಿತು ಅವರು ಮುಕ್ತವಾಗಿ ಹೇಳಿಕೆ ನೀಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸುನೀತಾ ಅಹುಜಾ ಅವರು ಮಾತನಾಡಿದ್ದಾರೆ. ಸ್ಟಾರ್ ನಟನ ಪತ್ನಿಯಾಗಿ ಕಾಲ ಕಳೆಯುವುದು ಸುಲಭವಲ್ಲ ಎಂದು ಅವರು ಹೇಳಿದ್ದಾರೆ. ಸಿನಿಮಾ ಕೆಲಸಗಳ ಸಲುವಾಗಿ ಗೋವಿಂದ ಅವರು ಮನೆಯಿಂದ ಹೊರಗೆ ಇದ್ದಿದ್ದೇ ಹೆಚ್ಚು. ಆ ಸಂದರ್ಭಗಳಲ್ಲಿ ಸುನೀತಾ ಅಹುಜಾ ಅವರಿಗೆ ಅಭದ್ರತೆ ಕಾಡಿತ್ತು.

‘ಸಿನಿಮಾ ನಟನ ಹೆಂಡತಿ ಆಗಬೇಕು ಎಂದರೆ ನಿಮ್ಮ ಹೃದಯ ಕಲ್ಲಾಗಿರಬೇಕು. ಹೀರೋಗಳು ತಮ್ಮ ಪತ್ನಿಗಿಂತಲೂ ಹೆಚ್ಚಾಗಿ ಹೀರೋಯಿನ್​ಗಳ ಜೊತೆ ಸಮಯ ಕಳೆಯುತ್ತಾರೆ’ ಎಂದು ಸುನೀತಾ ಅಹುಜಾ ಹೇಳಿದ್ದಾರೆ. ಪಾರ್ಟ್ನರ್ ಮೇಲೆ ನಂಬಿಕೆ ಇಲ್ಲದಿದ್ದರೆ ಜೀವನವೇ ಹಾಳಾಗುತ್ತದೆ ಎಂಬುದು ಸುಹೀತಾ ಅವರಿಗೆ ಅರ್ಥ ಆಗಿದೆ.

ಇದನ್ನೂ ಓದಿ
ಸಿನಿಮಾಗಳನ್ನು ಬಿಟ್ಟು ವಾಚ್‌ಮ್ಯಾನ್ ಆದ ನಟ; ಈ ಪರಿಸ್ಥಿತಿ ಯಾರಿಗೂ ಬರಬಾರದು
ದಕ್ಷಿಣದ ನಿರ್ಮಾಪಕರ ನೋಡಿ ಕಲಿಯಿರಿ: ಸ್ಟಾರ್ ನಟ ಟಾಂಗ್
ಬಾಲಿವುಡ್ ಹೀರೋಗಳ ಬಣ್ಣ ಬಯಲು ಮಾಡಿದ ಸೋನು ಸೂದ್
‘ಬಾಲಿವುಡ್ ಸಿನಿಮಾಗಳು ಭಾರತವನ್ನು ಕೆಟ್ಟದಾಗಿ ತೋರಿಸಿವೆ’; ರಿಷಬ್ ಶೆಟ್ಟಿ

1987ರಲ್ಲಿ ಸುನೀತಾ ಅಹುಜಾ ಮತ್ತು ಗೋವಿಂದ ಅವರ ಮದುವೆ ನಡೆಯಿತು. ಈ ಜೋಡಿಗೆ ಇಬ್ಬರು ಮಕ್ಕಳು ಇದ್ದಾರೆ. ಸುನೀತಾ ಅಹುಜಾ ಅವರು ಮಕ್ಕಳಿಗೆ ಜನ್ಮ ನೀಡುವಾಗಲೂ ಗೋವಿಂದ ಜೊತೆಗೆ ಇರಲಿಲ್ಲ. ಆ ಘಟನೆಯನ್ನೆಲ್ಲ ಸುನೀತಾ ಅವರು ಈಗ ಮೆಲುಕು ಹಾಕಿದ್ದಾರೆ. ಕುಟುಂಬದವರ ಬೆಂಬಲದಿಂದ ಎಲ್ಲ ಸವಾಲುಗಳನ್ನು ಎದುರಿಸಿರುವುದಾಗಿ ಸುನೀತಾ ಹೇಳಿದ್ದಾರೆ.

ಇದನ್ನೂ ಓದಿ: ‘ಜೀವನ ಹಾಳು ಮಾಡುತ್ತಿದ್ದೀರಿ’: ನಟ ಗೋವಿಂದ ಬಗ್ಗೆ ಪತ್ನಿ ಸುನೀತಾ ಟೀಕೆ

ಹಲವು ವರ್ಷಗಳಿಂದ ಗೋವಿಂದ ಅವರು ಸೈಲೆಂಟ್ ಆಗಿದ್ದಾರೆ. ಸಿನಿಮಾದಲ್ಲಿ ನಟಿಸಲು ಅವರು ಆಸಕ್ತಿ ತೋರಿಸುತ್ತಿಲ್ಲ. ಆ ಬಗ್ಗೆ ಸುನೀತಾ ಅಹುಜಾ ಅವರಿಗೆ ಬೇಸರ ಇದೆ. ಬರೀ ಮನೆಯಲ್ಲಿ ಕುಳಿತುಕೊಂಡು ಗೋವಿಂದ ಅವರು ತಮ್ಮ ಪ್ರತಿಭೆಯನ್ನು ಹಾಳುಮಾಡಿಕೊಳ್ಳಬಾರದು. ಬೇರೆ ನಟರ ರೀತಿ ಸಿನಿಮಾದಲ್ಲಿ ಆ್ಯಕ್ಟೀವ್ ಆಗಬೇಕು ಎಂದು ಸುನೀತಾ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.