ನಷ್ಟದ ಭೀತಿಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ನಿರ್ಮಾಪಕರು

ಭಾರಿ ನಿರೀಕ್ಷೆಯ 'ಹೈ ಜವಾನಿ ತೋ ಇಷ್ಕ್ ಹೋನಾ ಹೈ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ. 55 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿತವಾದ ಈ ಚಿತ್ರ ಕನಿಷ್ಠ 110 ಕೋಟಿ ಗಳಿಸಬೇಕಿತ್ತು. ಆದರೆ, ಕಳಪೆ ಗಳಿಕೆಯಿಂದ ನಿರ್ಮಾಪಕರಿಗೆ ಕೋಟಿಗಟ್ಟಲೆ ನಷ್ಟ ಖಚಿತವಾಗಿದೆ. ದೊಡ್ಡ ತಾರಾಗಣ ಹಾಗೂ ಭರ್ಜರಿ ಪ್ರಚಾರವಿದ್ದರೂ, ಸಿನಿಮಾ ಯಶಸ್ಸಿಗೆ ಗ್ಯಾರಂಟಿ ಇಲ್ಲ ಎಂಬುದಕ್ಕೆ ಇದೊಂದು ಉತ್ತಮ ನಿದರ್ಶನ.

ನಷ್ಟದ ಭೀತಿಯಲ್ಲಿ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ನಿರ್ಮಾಪಕರು
Hai Jawani Toh Ishq Hona Hai

Updated on: Jun 08, 2026 | 10:51 AM

ಚಿತ್ರರಂಗದಲ್ಲಿ ದೊಡ್ಡ ತಾರಾಗಣ ಹಾಗೂ ಭರ್ಜರಿ ಪ್ರಚಾರದೊಂದಿಗೆ ತೆರೆಗೆ ಬರುವ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡುತ್ತವೆ ಎಂಬ ನಂಬಿಕೆ ಸದಾ ನಿಜವಾಗುವುದಿಲ್ಲ. ಇದಕ್ಕೆ ಲೇಟೆಸ್ಟ್ ಉದಾಹರಣೆ ಸಿಕ್ಕಿದೆ. ಭಾರಿ ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿದ್ದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ಇದೀಗ ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಕಾಣದೆ ಸಂಪೂರ್ಣವಾಗಿ ಮಕಾಡೆ ಮಲಗುವ ಸೂಚನೆ ನೀಡಿದೆ. ವೀಕೆಂಡ್ ಮುಗಿದು ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದರೂ ಚಿತ್ರದ ಗಳಿಕೆಯಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ.

ಪ್ರಸ್ತುತ ದೇಶಾದ್ಯಂತ 1,380 ಶೋಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ, ಚಿತ್ರಮಂದಿರಗಳ ಸಂಖ್ಯೆ ಹೆಚ್ಚಿದ್ದರೂ ಪ್ರೇಕ್ಷಕರು ಇಲ್ಲದೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಭಾನುವಾರ 9 ಕೋಟಿ ರೂಪಾಯಿ ಗಳಿಸಿರೋ ಈ ಚಿತ್ರ ಈವರೆಗೆ ಭಾರತದಲ್ಲಿ 24.08 ಕೋಟಿ ರೂಪಾಯಿಗೆ ತಲುಪಿದೆ. ಸದ್ಯಕ್ಕೆ ಚಿತ್ರದ ಅಂತಿಮ ಕಲೆಕ್ಷನ್ ವರದಿಗಳು ಬಾಕಿ ಇವೆಯಾದರೂ, ಸದ್ಯದ ಟ್ರೆಂಡ್ ನೋಡಿದರೆ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಾಣುತ್ತಿಲ್ಲ.

ಈ ಚಿತ್ರದ ಒಟ್ಟು ವೆಚ್ಚ ಬರೋಬ್ಬರಿ 55 ಕೋಟಿ ರೂಪಾಯಿ ಎನ್ನಲಾಗಿದೆ. ಥಿಯೇಟರ್‌ಗಳಿಂದ ಬರುವ ಒಟ್ಟಾರೆ ಕಲೆಕ್ಷನ್ ಹಣ ನೇರವಾಗಿ ನಿರ್ಮಾಪಕರ ಕೈ ಸೇರುವುದಿಲ್ಲ. ಚಿತ್ರಮಂದಿರಗಳಿಂದ ಬರುವ ಒಟ್ಟು ಗಳಿಕೆಯಲ್ಲಿ ಕೇವಲ ಅರ್ಧದಷ್ಟು (ಸುಮಾರು 50 ಪ್ರತಿಶತ) ಹಣ ಮಾತ್ರ ನಿರ್ಮಾಪಕರ ಕೈ ಸೇರುವ ಸಾಧ್ಯತೆ ಇರುತ್ತದೆ. ಇನ್ನುಳಿದ ಅರ್ಧದಷ್ಟು ಮೊತ್ತ ಚಿತ್ರಮಂದಿರದ ಮಾಲೀಕರು, ವಿತರಕರು ಹಾಗೂ ತೆರಿಗೆ ಪಾಲಾಗುತ್ತದೆ.

ಇದನ್ನೂ ಓದಿ: 200 ಕೋಟಿ ರೂಪಾಯಿ ಕ್ಲಬ್ ಸೇರಿದ ರಾಮ್ ಚರಣ್ ಸಿನಿಮಾ ‘ಪೆದ್ದಿ’; ಆದರೂ ಇದೆ ಸವಾಲು

ಈ ಲೆಕ್ಕಾಚಾರವನ್ನು ಅನ್ವಯಿಸಿ ನೋಡುವುದಾದರೆ, 55 ಕೋಟಿ ರೂಪಾಯಿ ಬಂಡವಾಳ ಹೂಡಿರುವ ನಿರ್ಮಾಪಕರಿಗೆ ಸದ್ಯ ಬಂದಿರುವ ಕಲೆಕ್ಷನ್‌ನಿಂದ ಕೈಗೆ ಸಿಗುವುದು ತೀರಾ ಕಡಿಮೆ ಮೊತ್ತ. ಸಿನಿಮಾ ಕನಿಷ್ಠ 110 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದರೆ ಮಾತ್ರ ನಿರ್ಮಾಪಕರು ಸೇಫ್ ಜೋನ್ ತಲುಪಲು ಸಾಧ್ಯವಿತ್ತು. ಆದರೆ ಸದ್ಯ ಸಿನಿಮಾ 30 ಕೋಟಿಯ ಗಡಿಯನ್ನೂ ದಾಟಲು ಒದ್ದಾಡುತ್ತಿರುವುದರಿಂದ, ಬಂಡವಾಳ ಹೂಡಿದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿಗಳ ಭಾರಿ ಪ್ರಮಾಣದ ನಷ್ಟ ಉಂಟಾಗುವುದು ಈಗ ಶೇಕಡಾ ನೂರರಷ್ಟು ಖಚಿತವಾದಂತಿದೆ. ಒಟಿಟಿ ಹಾಗೂ ಸ್ಯಾಟಲೈಟ್ ಹಕ್ಕುಗಳಿಂದ ಚಿತ್ರ ಹಣ ಮಾಡಿದರೂ ನಿರ್ಮಾಪಕರ ನಷ್ಟವನ್ನು ಸಂಪೂರ್ಣವಾಗಿ ಭರಿಸಲು ಇದು ಸಹಾಯ ಮಾಡದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us