‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್ ಗಳಿಕೆ: 100 ಕೋಟಿ ಕ್ಲಬ್‌ ಸೇರಲು ಕೆಲವೇ ಲಕ್ಷ ಬಾಕಿ

ಸದ್ಯಕ್ಕಂತೂ ‘ಹನುಮಾನ್ ಅಂಶ್’ ಸಿನಿಮಾದ ಅಬ್ಬರ ತಗ್ಗುವಂತೆ ಕಾಣುತ್ತಿಲ್ಲ. ಈ ಸಿನಿಮಾಗೆ ಫ್ಯಾಮಿಲಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಭಕ್ತಿಪ್ರಧಾನ ಕಥೆಯನ್ನು ನೋಡಿ ಜನರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇದರಿಂದಾಗಿ ವಾರಾಂತ್ಯದಲ್ಲಿ ‘ಹನುಮಾನ್ ಅಂಶ್’ ಸಿನಿಮಾದ ಬಾಕ್ಸ್ ಆಫೀಸ್ ಕಲೆಕ್ಷನ್ ಗಣನೀಯವಾಗಿ ಏರಿಕೆ ಆಗಿದೆ.

‘ಹನುಮಾನ್ ಅಂಶ್’ ಬಾಕ್ಸ್ ಆಫೀಸ್ ಗಳಿಕೆ: 100 ಕೋಟಿ ಕ್ಲಬ್‌ ಸೇರಲು ಕೆಲವೇ ಲಕ್ಷ ಬಾಕಿ
Hanuman Ansh Poster

Updated on: Sep 06, 2026 | 2:02 PM

ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ‘ಹನುಮಾನ್ ಅಂಶ್’ ಸಿನಿಮಾ ಈಗ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಅತ್ಯುತ್ತಮ ಪ್ರತಿಕ್ರಿಯೆಯೊಂದಿಗೆ ಯಶಸ್ವಿ ಪ್ರದರ್ಶನ ಮುಂದುವರಿಸಿದೆ. ಪ್ರೇಕ್ಷಕರ ಬಾಯಿ ಮಾತಿನ ಪ್ರಚಾರದಿಂದ ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಭಾರಿ ಚೇತರಿಕೆ ಕಾಣುತ್ತಿರುವ ಈ ಸಿನಿಮಾ, ತನ್ನ ನಾಲ್ಕನೇ ವಾರದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದೆ. ವಿಶಾಲ್ ಚತುರ್ವೇದಿ ನಿರ್ದೇಶನದ ಈ ಚಿತ್ರವು ತನ್ನ ಐದನೇ ಶನಿವಾರದಂದು ಬಾಕ್ಸ್ ಆಫೀಸ್‌ನಲ್ಲಿ ಅತ್ಯುತ್ತಮ ಗಳಿಕೆ ದಾಖಲಿಸಿದೆ.

ಶೋಭಿನವ್ ಸತ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ, ಆರಂಭದಲ್ಲಿ ಚಿತ್ರಮಂದಿರಗಳಲ್ಲಿ ಅತ್ಯಂತ ನಿಧಾನಗತಿಯ ಗಳಿಕೆಯೊಂದಿಗೆ ಪ್ರದರ್ಶನ ಪ್ರಾರಂಭಿಸಿತ್ತು. ಮೊದಲ ವಾರದಲ್ಲಿ ಕೇವಲ 1.08 ಕೋಟಿ ರೂಪಾಯಿ ಗಳಿಸಿದ್ದ ಈ ಚಿತ್ರ, ಎರಡನೇ ವಾರದಲ್ಲಿ 40 ಲಕ್ಷ ರೂಪಾಯಿ ಸಂಗ್ರಹಿಸಿತ್ತು. ಆದರೆ ಮೂರನೇ ವಾರದಿಂದ ಹಠಾತ್ ಜಿಗಿತ ಕಂಡ ಚಿತ್ರವು 10.40 ಕೋಟಿ ರೂಪಾಯಿ ಬಾಚಿಕೊಂಡಿತು. ಅದರ ನಂತರ ನಾಲ್ಕನೇ ವಾರದಲ್ಲಿ ಭಾರಿ ಯಶಸ್ಸು ಕಂಡು ಬರೋಬ್ಬರಿ 61 ಕೋಟಿ ರೂಪಾಯಿ ಗಳಿಕೆ ಮಾಡಿತು.

ಸ್ಯಾಕ್ನಿಲ್ಕ್ ವರದಿಯ ಪ್ರಕಾರ, 30ನೇ ದಿನದಂದು ಈ ಸಿನಿಮಾ ತನ್ನ ಹಿಂದಿನ ದಿನದ ಗಳಿಕೆಗೆ ಹೋಲಿಸಿದರೆ ಶೇಕಡಾ 62.5ರಷ್ಟು ಭಾರಿ ಏರಿಕೆ ಕಂಡಿದೆ. 30ನೇ ದಿನದಂದು 6,055 ಪ್ರದರ್ಶನಗಳಿಂದ ‘ಹನುಮಾನ್ ಅಂಶ್’ ಒಟ್ಟು 16.25 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಶುಕ್ರವಾರ (29ನೇ ದಿನ) 10 ಕೋಟಿ ರೂಪಾಯಿ ಗಳಿಸಿದ್ದ ಚಿತ್ರವು ಶನಿವಾರದ ಗಳಿಕೆಯೊಂದಿಗೆ ಭಾರತದಲ್ಲಿ ಒಟ್ಟು 99.13 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದ್ದು, 100 ಕೋಟಿ ರೂಪಾಯಿಗಳ ಗಡಿಯನ್ನು ತಲುಪಲು ಇನ್ನು ಕೆಲವೇ ಲಕ್ಷ ರೂಪಾಯಿಗಳಷ್ಟೇ ಬಾಕಿ ಇದೆ. ಇನ್ನು ಭಾರತದ ಒಟ್ಟು ಗ್ರಾಸ್ ಗಳಿಕೆ 117.27 ಕೋಟಿ ರೂಪಾಯಿ ತಲುಪಿದೆ.

ವಿಶಾಲ್ ಚತುರ್ವೇದಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಹನುಮಾನ್ ಅಂಶ್’ ಚಿತ್ರವು ಭಕ್ತರಿಂದ ‘ಮಹರಾಜ್ ಜಿ’ ಎಂದೇ ಪೂಜಿಸಲ್ಪಡುವ ನೀಮ್ ಕರೋಲಿ ಬಾಬಾ ಅವರ ಜೀವನ ಮತ್ತು ಬೋಧನೆಗಳನ್ನು ಆಧರಿಸಿದೆ. ಅಗಲಿದ ತಾಯಿಯನ್ನು ಭೇಟಿಯಾಗಲು ದೇವರನ್ನು ಹುಡುಕುವ ಮಗುವೊಂದು, ದೈವತ್ವವನ್ನು ಕಂಡುಕೊಂಡು ಮಾನವಕುಲದ ಸೇವೆಗೆ ನಿಂತು ‘ಹನುಮಾನ್ ಅಂಶ್’ ನೀಮ್ ಕರೋಲಿ ಬಾಬಾ ಆಗಿ ಹೇಗೆ ಬದಲಾಗುತ್ತಾನೆ ಎಂಬುದೇ ಈ ಚಿತ್ರದ ಮುಖ್ಯ ಕಥಾಹಂದರವಾಗಿದೆ.

ಇದನ್ನೂ ಓದಿ: ಒಟಿಟಿ ಸಂಸ್ಥೆಯಿಂದ ರಿಜೆಕ್ಟ್ ಆಗಿತ್ತು ‘ಹನುಮಾನ್ ಅಂಶ್’ ಸಿನಿಮಾ: ಕಹಿ ಅನುಭವ ತೆರೆದಿಟ್ಟ ನಿರ್ದೇಶಕ

ಸುಮಾರು 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡ ಈ ಸಿನಿಮಾ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆರಂಭದಲ್ಲಿ ‘ಓಹ್ ಮೈ ಡಾಗ್’ ಮತ್ತು ‘ಆರ್ಯಭಟ ಕಾ ಜೀರೋ’ ಸಿನಿಮಾಗಳೊಂದಿಗೆ ಸ್ಪರ್ಧಿಸಿದ್ದ ಈ ಚಿತ್ರ, ನಂತರ ‘ಆವಾರಪನ್ 2’ ಮತ್ತು ‘ಬಟ್ವಾರ 1947’ ಚಿತ್ರಗಳ ನಡುವೆಯೂ ಉತ್ತಮ ಗಳಿಕೆ ಮಾಡಿತು. ಪ್ರಸ್ತುತ ಈ ಸಣ್ಣ ಬಜೆಟ್ ಚಿತ್ರವು ಯಶ್ ನಟನೆಯ ‘ಟಾಕ್ಸಿಕ್’ ಮತ್ತು ಹೊಸದಾಗಿ ಬಿಡುಗಡೆಯಾಗಿರುವ ‘ಮಿರ್ಜಾಪುರ್: ದಿ ಮೂವೀ’ ಸಿನಿಮಾಗಳಿಗೆ ಕಠಿಣ ಸ್ಪರ್ಧೆ ನೀಡುತ್ತಾ ಮುನ್ನುಗ್ಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us