AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಪ್ಪಲಿ ಬಿಚ್ಚಿಟ್ಟು ‘ಹನುಮಾನ್ ಅಂಶ್’ ಸಿನಿಮಾ ನೋಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ವೈರಲ್

ಆಗಸ್ಟ್ 7ರಂದು ಬಿಡುಗಡೆಯಾದ ‘ಹನುಮಾನ್ ಅಂಶ್’ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ. ಇದುವರೆಗೆ ಸುಮಾರು 72.88 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರುವ ಈ ಸಿನಿಮಾಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿದೆ. ಭಕ್ತಿಪ್ರಧಾನ ಕಥಾಹಂದರ ಇರುವ ಈ ಸಿನಿಮಾವನ್ನು ಪ್ರೇಕ್ಷಕರು ಧರ್ಮಭೇದವಿಲ್ಲದೇ ನೋಡುತ್ತಿದ್ದಾರೆ ಎಂಬುದು ವಿಶೇಷ.

ಚಪ್ಪಲಿ ಬಿಚ್ಚಿಟ್ಟು ‘ಹನುಮಾನ್ ಅಂಶ್’ ಸಿನಿಮಾ ನೋಡಿದ ಮುಸ್ಲಿಂ ವ್ಯಕ್ತಿ: ವಿಡಿಯೋ ವೈರಲ್
Hanuman AnshImage Credit source: X/@Geetashloks
ಮದನ್​ ಕುಮಾರ್​
|

Updated on: Sep 04, 2026 | 4:38 PM

Share

ಬಾಲಿವುಡ್‌ನ ಯಾವುದೇ ಘಟಾನುಘಟಿ ಸೂಪರ್‌ಸ್ಟಾರ್‌ಗಳಿಲ್ಲದೆ, ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿರುವ ಭಕ್ತಿಪ್ರಧಾನ ಸಿನಿಮಾ ‘ಹನುಮಾನ್ ಅಂಶ್’ ಬಗ್ಗೆ ಎಲ್ಲ ಕಡೆಗಳಲ್ಲಿ ಚರ್ಚೆ ನಡೆಯುತ್ತಿದೆ. ಆರಂಭದ ದಿನಗಳಲ್ಲಿ ಕೇವಲ 10 ಲಕ್ಷ ರೂಪಾಯಿ ಗಳಿಕೆ ಮಾಡಿದ್ದ ಈ ಸಿನಿಮಾ, ಪ್ರೇಕ್ಷಕರ ಬಾಯಿಮಾತಿನ ಪ್ರಚಾರದಿಂದಾಗಿ ಈಗ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. ಇದರ ನಡುವೆ, ಮುಸ್ಲಿಂ ವ್ಯಕ್ತಿಯೊಬ್ಬರು ಥಿಯೇಟರ್‌ನಲ್ಲಿ ಬರಿಗಾಲಿನಲ್ಲಿ ಕುಳಿತು ಈ ಸಿನಿಮಾ ವೀಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬಿಳಿ ಬಣ್ಣದ ಕುರ್ತಾ-ಪೈಜಾಮ ಹಾಗೂ ಟೋಪಿ ಧರಿಸಿರುವ ಮುಸ್ಲಿಂ ವ್ಯಕ್ತಿಯೊಬ್ಬರು ಬರಿಗಾಲಿನಲ್ಲಿ ಕುಳಿತು ಅತ್ಯಂತ ತನ್ಮಯತೆಯಿಂದ ‘ಹನುಮಾನ್ ಅಂಶ್’ ಸಿನಿಮಾ ವೀಕ್ಷಿಸುವುದನ್ನು ಕಾಣಬಹುದು. ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ಚಿತ್ರವನ್ನು ಈ ವ್ಯಕ್ತಿ ಇಷ್ಟೊಂದು ಭಕ್ತಿಯಿಂದ ವೀಕ್ಷಿಸುತ್ತಿರುವುದಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋಗೆ ಕಾಮೆಂಟ್ ಮಾಡಿರುವ ಬಳಕೆದಾರರೊಬ್ಬರು, ‘ರಾಜಕೀಯ ಲಾಭಕ್ಕಾಗಿ ದಶಕಗಳಿಂದ ನಡೆಯುತ್ತಿರುವ ಧ್ರುವೀಕರಣ ಇವರ ಮನಸ್ಸನ್ನು ಕಲುಷಿತಗೊಳಿಸಲು ಸಾಧ್ಯವಾಗಿಲ್ಲ’ ಎಂದಿದ್ದಾರೆ. ಮತ್ತೊಬ್ಬರು ‘ಇದು ರಾಜಕೀಯವಿಲ್ಲದ ನಿಜವಾದ ಭಾರತ’ ಎಂದಿದ್ದಾರೆ. ‘ನಾನು ಮುಸ್ಲಿಂ, ಆದರೆ ಈ ಸಿನಿಮಾ ನನಗಿಷ್ಟವಾಯಿತು. ಏಕೆಂದರೆ ಇದರಲ್ಲಿ ಯಾವುದೇ ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಲ್ಲ’ ಎಂಬ ಕಮೆಂಟ್ ಕೂಡ ಬಂದಿದೆ.

ವೈರಲ್ ವಿಡಿಯೋ:

You watched or not ? pic.twitter.com/m99ePJffK2

— Bhagavad Gita 🪷 (@Geetashloks) September 2, 2026

‘ಹನುಮಾನ್ ಅಂಶ್’ ಸಿನಿಮಾದ ಕಥೆ ಏನು?

ವಿಶಾಲ್ ಚತುರ್ವೇದಿ ಬರೆದು ನಿರ್ದೇಶಿಸಿರುವ ಈ ಚಿತ್ರವು ‘ಡಿವೈನ್ ಡಿಟೂರ್: ದಟ್ ಚೇಂಜ್ಡ್ ಮೈ ಲೈಫ್’ ಪುಸ್ತಕವನ್ನು ಆಧರಿಸಿದೆ. ತಾಯಿಯನ್ನು ಕಳೆದುಕೊಂಡ ಲಕ್ಷ್ಮಣ್ ದಾಸ್ ಎಂಬ ಹುಡುಗ, ಜೀವನ ಮತ್ತು ದೇವರ ಹುಡುಕಾಟದಲ್ಲಿ ಆಧ್ಯಾತ್ಮಿಕ ಪಯಣ ಬೆಳೆಸುವ ಕಥೆ ಇಲ್ಲಿದೆ. ಉತ್ತರ ಭಾರತದಾದ್ಯಂತ ಸಂಚರಿಸಿ ಸಾಧು-ಸಂತರನ್ನು ಭೇಟಿಯಾಗುವ ಆತ, ಮುಂದೆ ನೀಮ್ ಕರೋಲಿ ಬಾಬಾ ಆಗಿ ಬದಲಾಗುವ ಹಂತವನ್ನು ಚಿತ್ರದಲ್ಲಿ ಮನಮುಟ್ಟುವಂತೆ ತೋರಿಸಲಾಗಿದೆ. ಶೋಭಿನವ್ ಸತ್ಯಾ ಹಾಗೂ ಚಂದನ್ ಆನಂದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ‘ಹನುಮಾನ್ ಅಂಶ್’ ಮೆಚ್ಚಿದ ಕಂಗನಾ: ಆದರೆ ಚಿತ್ರತಂಡಕ್ಕೆ ಪ್ರೇಮಾನಂದ್ ಮಹಾರಾಜ್ ಎಚ್ಚರಿಕೆ

ಬಾಲಿವುಡ್ ಮಂದಿ ಆರಂಭದಲ್ಲಿ ಬೆಂಬಲ ನೀಡದಿದ್ದರೂ, ಚಿತ್ರದ ಯಶಸ್ಸು ಕಂಡು ಈಗ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಈ ನಡುವೆ, ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಈ ಸಿನಿಮಾವನ್ನು ಸೆಪ್ಟೆಂಬರ್ 11ರಂದು ವಿದೇಶಗಳಲ್ಲೂ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲದೆ, ಈ ಸೂಪರ್ ಹಿಟ್ ಚಿತ್ರಕ್ಕೆ ಸೀಕ್ವೆಲ್ ಕೂಡ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಬರದಿಂದ ನಲುಗಿದ ರೈತರಿಗೆ ಗುಡ್ ನ್ಯೂಸ್:ಬರ ಪರಿಹಾರ ಘೋಷಿಸಿದ ಸರ್ಕಾರ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಟ್ರಂಪ್ ದಂಪತಿಯಿಂದ ಅದ್ದೂರಿ ಸ್ವಾಗತ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಕಲಬುರ್ಗಿಯಲ್ಲಿ ಕನೇರಿ ಶ್ರೀಗಳ ಸಮಾವೇಶಕ್ಕೆ ತೀವ್ರ ವಿರೋಧ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಮತದಾರರ ಹೆಸರು ಡಿಲೀಟ್: ಬಿಜೆಪಿ ಎಂಎಲ್​​ಎ ವಿರುದ್ಧ ದಾಖಲೆ ಬಿಡುಗಡೆ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಕನ್ನಡ ಸಿನಿಮಾಗಳ ಉಳಿವಿಗಾಗಿ ಪ್ರೇಕ್ಷಕರಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಮನವಿ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಬೆಂಗಳೂರಿನಲ್ಲಿ ಧರ್ಮಸ್ಥಳ ದೇವಸ್ಥಾನದ ಮಾದರಿಯಲ್ಲಿ ಗಣಪನ ಪ್ರತಿಷ್ಠಾಪನೆ
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
ಚೀನಾ ಅಧ್ಯಕ್ಷರಿಗೆ ಸ್ವಾಗತ ಕೋರುವಾಗ ಮುಖ ಸಿಂಡರಿಸಿದ ಡೊನಾಲ್ಡ್ ಟ್ರಂಪ್
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
3 ದಿನ ಕರ್ನಾಟಕದಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ ಮುನ್ಸೂಚನೆ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ
ಎಲ್ ನಿನೋ ಕಂಟಕ: ಮುಂದಿನ 6 ತಿಂಗಳಲ್ಲಿ 4.5 ಲಕ್ಷ ಮಂದಿ ಸಾವು ಭೀತಿ