Akshay Kumar: ಅಕ್ಷಯ್ ಕುಮಾರ್ ಕಟ್ಟುನಿಟ್ಟಾಗಿ ತೆರಿಗೆ ಪಾವತಿಸೋದು ಏಕೆ? ಕಾರಣ ತಿಳಿಸಿದ ನಟ
ಇತ್ತೀಚೆಗೆ ಅಕ್ಷಯ್ ಸಿನಿಮಾಗಳು ಫ್ಲಾಪ್ ಆದರೂ ಬೇಡಿಕೆ ಕಡಿಮೆ ಆಗಿಲ್ಲ. ಅಕ್ಷಯ್ ಅವರು ತೆರಿಗೆ ಪಾವತಿ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ನಟ ಅಕ್ಷಯ್ ಕುಮಾರ್ (Akshay Kumar) ಅವರು ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ವರ್ಷಕ್ಕೆ ಅವರ ನಟನೆಯ 4-5 ಸಿನಿಮಾಗಳು ರಿಲೀಸ್ ಆಗುತ್ತವೆ. ಪ್ರತಿ ಚಿತ್ರಕ್ಕೆ ಅವರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಚಿತ್ರರಂಗದಿಂದ ಪ್ರತಿ ವರ್ಷ ಅವರಿಗೆ ನೂರಾರು ಕೋಟಿ ರೂಪಾಯಿ ಸಿಗುತ್ತದೆ. ಇನ್ನು, ಬೇರೆಬೇರೆ ಜಾಹೀರಾತು ಹಾಗೂ ಬ್ರ್ಯಾಂಡ್ಗಳಿಂದಲೂ ಅವರಿಗೆ ಸಾಕಷ್ಟು ದುಡ್ಡು ಸಿಗುತ್ತದೆ. ಇಷ್ಟಿದ್ದರೂ ಅವರು ಎಂದಿಗೂ ತೆರಿಗೆ ಪಾವತಿಯಲ್ಲಿ ಹಿಂದೆ ಬಿದ್ದಿಲ್ಲ. ಹೀಗೇಕೆ ಎನ್ನುವುದಕ್ಕೆ ಅಕ್ಷಯ್ ಕುಮಾರ್ ಅವರು ಉತ್ತರ ನೀಡಿದ್ದಾರೆ.
ಅಕ್ಷಯ್ ಕುಮಾರ್ ಅವರು ಬಾಲಿವುಡ್ನ ಬೇಡಿಕೆಯ ನಟ ಮಾತ್ರ ಅಲ್ಲ. ಅತಿ ಹೆಚ್ಚು ತೆರಿಗೆ ಪಾವತಿಸುವ ಹೀರೋ ಕೂಡ ಹೌದು. 2015 ಹಾಗೂ 2019ರಲ್ಲಿ ಅಕ್ಷಯ್ ಕುಮಾರ್ ಅವರು ಮನರಂಜನಾ ಕ್ಷೇತ್ರದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ಹೀರೋ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದರು. ಇತ್ತೀಚೆಗೆ ಅವರ ಸಿನಿಮಾಗಳು ಫ್ಲಾಪ್ ಆದರೂ ಬೇಡಿಕೆ ಕಡಿಮೆ ಆಗಿಲ್ಲ. ಅಕ್ಷಯ್ ಅವರು ತೆರಿಗೆ ಪಾವತಿ ವಿಚಾರದಲ್ಲಿ ಕಟ್ಟುನಿಟ್ಟಾಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
‘ನೀವು ನಿಮ್ಮ ತೆರಿಗೆಯನ್ನು ಪಾವತಿಸಿದರೆ ಅವರು (ತೆರಿಗೆ ಇಲಾಖೆಯವರು) ಸರಿಯಾಗಿ ಮಾತನಾಡುತ್ತಾರೆ. ಒಬ್ಬ ಅಕೌಂಟೆಂಟ್ ಮಗನಾಗಿ ನಾನು ತೆರಿಗೆಯನ್ನು ಸರಿಯಾಗಿ ಪಾವತಿಸುತ್ತಾನೆ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ತಂದೆ ನನಗೆ ತೆರಿಗೆ ಪಾವತಿಸಲು ಕಲಿಸಿದರು. ಯಾರೋ ಬಂದು ನನ್ನ ಮನೆಗೆ ಬಂದು ನಾನು ಹಣವನ್ನು ಎಲ್ಲಿ ಬಚ್ಚಿಟ್ಟಿದ್ದೇನೆ ಎಂದು ಕೇಳುವುದು ನನಗೆ ಇಷ್ಟವಿಲ್ಲ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅವರು ಕೆನಡಾ ದೇಶದ ಪೌರತ್ವ ಹೊಂದಿದ್ದಾರೆ. ಈ ಬಗ್ಗೆ ಅವರು ಅನೇಕ ಬಾರಿ ಟೀಕೆಗೆ ಒಳಗಾದ ಉದಾಹರಣೆ ಇದೆ. ಈ ಬಗ್ಗೆ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ‘ನನಗೆ ಭಾರತವೇ ಎಲ್ಲವೂ. ನಾನು ಏನೆಲ್ಲ ಸಂಪಾದಿಸಿದ್ದೀನೋ ಅದೆಲ್ಲವೂ ಇಲ್ಲಿಂದಲೇ ಸಂಪಾದಿಸಿರುವುದು. ನನ್ನ ಋಣ ತೀರಿಸಲು ನನಗೆ ಅವಕಾಶ ಸಿಕ್ಕಿದೆ. ಜನರು ಏನೂ ಗೊತ್ತಿಲ್ಲದೆ ಮಾತನಾಡಿದಾಗ ನನಗೆ ಬೇಸರ ಆಗುತ್ತದೆ’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಮೆಟ್ರೋ ಒಳಗೆ ಅಕ್ಷಯ್ ಕುಮಾರ್-ಇಮ್ರಾನ್ ಹಷ್ಮಿ ಡ್ಯಾನ್ಸ್; ಅರೆಸ್ಟ್ ಮಾಡಿ ಎಂದ ನೆಟ್ಟಿಗರು
ಅಕ್ಷಯ್ ಕುಮಾರ್ ನಟನೆಯ ‘ಸೆಲ್ಫಿ’ ಸಿನಿಮಾ ಇಂದು (ಫೆಬ್ರವರಿ 24) ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರು ಸೂಪರ್ಸ್ಟಾರ್ ಪಾತ್ರ ಮಾಡಿದ್ದಾರೆ. ಇದು ಮಲಯಾಳಂನ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ರಿಮೇಕ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ