Esha Gupta: ಪ್ರತಿಷ್ಠಿತ ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಲಿದ್ದಾರೆ ನಟಿ ಇಶಾ ಗುಪ್ತಾ

|

Updated on: May 15, 2023 | 7:54 PM

Cannes Film Festival 2023: ಇಶಾ ಗುಪ್ತಾ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 2012ರಲ್ಲಿ. ಅನೇಕ ಸ್ಟಾರ್​ ಹೀರೋಗಳ ಜೊತೆ ನಟಿಸಿ ಅವರು ಜನಪ್ರಿಯತೆ ಪಡೆದರು. ಕಾನ್​ ಚಿತ್ರೋತ್ಸವದಲ್ಲಿ ಇಶಾ ಭಾಗಿ ಆಗುತ್ತಿರುವುದು ಇದೇ ಮೊದಲು.

Esha Gupta: ಪ್ರತಿಷ್ಠಿತ ಕಾನ್​ ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಲಿದ್ದಾರೆ ನಟಿ ಇಶಾ ಗುಪ್ತಾ
ಇಶಾ ಗುಪ್ತಾ
Follow us on

ಜಗತ್ತಿನಾದ್ಯಂತ ಪ್ರಸಿದ್ಧಿ ಹೊಂದಿರುವ ಕಾನ್​ ಚಿತ್ರೋತ್ಸವಕ್ಕೆ (Cannes Film Festival 2023) ಕ್ಷಣಗಣನೆ ಆರಂಭ ಆಗಿದೆ. ಪ್ರತಿ ವರ್ಷ ನಡೆಯುವ ಈ ಸಿನಿಮೋತ್ಸವದಲ್ಲಿ ಪ್ರಪಂಚದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗುತ್ತಾರೆ. ಈ ಸಮಾರಂಭದ ರೆಡ್​ ಕಾರ್ಪೆಟ್​ ಮೇಲೆ ತಾರೆಯರು ಹೆಜ್ಜೆ ಹಾಕುವುದೇ ಒಂದು ಸಂಭ್ರಮ. ಹಾಗಂತ ಎಲ್ಲರಿಗೂ ಈ ಅವಕಾಶ ಸಿಗುವುದಿಲ್ಲ. ಭಾರತದ ಕೆಲವು ನಟಿಯರು ಈ ಹಿಂದೆ ಚಾನ್ಸ್​ ಗಿಟ್ಟಿಸಿಕೊಂಡಿದ್ದರು. ಈ ಬಾರಿ ಖ್ಯಾತ ನಟಿ ಇಶಾ ಗುಪ್ತಾ (Esha Gupta) ಕೂಡ ಕಾನ್​ ಸಿನಿಮೋತ್ಸವಕ್ಕೆ ಹಾಜರಿ ಹಾಕುತ್ತಿದ್ದಾರೆ. ಈ ಸುದ್ದಿ ಕೇಳಿ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಇಶಾ ಗುಪ್ತಾ ಅವರು ಸಕ್ರಿಯರಾಗಿದ್ದಾರೆ. ಆಗಾಗ ಅವರು ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಬಾರಿ ಅವರು ಕಾನ್​ (Cannes) ಚಿತ್ರೋತ್ಸವದ ರೆಡ್​ ಕಾರ್ಪೆಟ್​ ಮೇಲೆ ಯಾವ ರೀತಿಯ ಉಡುಗೆ ಧರಿಸಿ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

2023ನೇ ಸಾಲಿನ ಕಾನ್​ ಚಿತ್ರೋತ್ಸವವು ಮೇ 16ರಂದು ಆರಂಭ ಆಗಲಿದೆ. ಮೇ 27ರ ತನಕ ಈ ಸಿನಿಮೋತ್ಸವ ನಡೆಯಲಿದೆ. ಇಶಾ ಗುಪ್ತಾ ಸೇರಿದಂತೆ ಭಾರತದ ಕೆಲವು ನಟಿಯರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಇಶಾ ಗುಪ್ತಾ ಅವರು 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲಿ ಅವರು ಇಮ್ರಾನ್​ ಹಷ್ಮಿ ಜೊತೆ ನಟಿಸಿದರು. ನಂತರ ಅಜಯ್​ ದೇವಗನ್​, ಅಕ್ಷಯ್​ ಕುಮಾರ್​ ಮುಂತಾದ ಸ್ಟಾರ್​ ನಟರ ಜೊತೆಗೂ ಅಭಿನಯಿಸಿ ಜನಪ್ರಿಯತೆ ಪಡೆದರು.

ಇದನ್ನೂಓದಿ: ಕಾನ್​ ಚಿತ್ರೋತ್ಸವದಲ್ಲಿ ದೀಪಿಕಾ ರಂಗು

ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದಲ್ಲಿ ಈ ಮೊದಲು ಭಾಗಿ ಆಗಿದ್ದರು. ಈ ವರ್ಷ ಅನುಷ್ಕಾ ಶರ್ಮಾ ಅವರು ಭಾಗಿ ಆಗುತ್ತಿದ್ದಾರೆ. ಅವರು ರೆಡ್​ ಕಾರ್ಪೇಟ್​ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಕಾನ್ ಚಿತ್ರೋತ್ಸವದ ಅಧಿಕೃತ ವೆಬ್​ಸೈಟ್​ನಲ್ಲಿ ಈ ಸಿನಿಮೋತ್ಸವದ ಟಿಕೆಟ್​ಗಳು ಲಭ್ಯವಿದೆ. 6,100 ರೂಪಾಯಿ ಹಾಗೂ 25 ಸಾವಿರ ರೂಪಾಯಿ ರೇಂಜ್​ನಲ್ಲಿ ಟಿಕೆಟ್​ಗಳು ಲಭ್ಯವಿದೆ.

ಇದನ್ನೂಓದಿ: ಗುಲಾಬಿ ಬಣ್ಣದ ಗೌನ್​ ಧರಿಸಿ ಕಾನ್​ ಚಿತ್ರೋತ್ಸವದಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ; ಫೋಟೋ ವೈರಲ್​

ಕಾನ್​ ಚಿತ್ರೋತ್ಸವ ಫ್ರಾನ್ಸ್​ನಲ್ಲಿ ನಡೆಯಲಿದೆ. ವಿವಿಧ ದೇಶದವರು ಭಾಗಿ ಆಗುತ್ತಿದ್ದಾರೆ. ನಿರ್ದೇಶಕ ಪೌಲ್ ಡೇನೋ, ಅಫ್ಘಾನಿಸ್ತಾನದ ಕಥೆಗಾರ, ನಿರ್ದೇಶಕ ಅತಿಖ್ ರಹೀಮಿ ಮೊದಲಾದವರು ಈ ಸಿನಿಮೋತ್ಸವದ ಪ್ಯಾನೆಲ್​​ನಲ್ಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.