Parineeti Chopra: ‘ನಮ್ಮ ಪ್ರಪಂಚ ಬೇರೆ ಬೇರೆ’: ಎಂಗೇಜ್ಮೆಂಟ್ ಬಳಿಕ ಬಹಿರಂಗ ಪತ್ರ ಬರೆದ ಪರಿಣೀತಿ ಚೋಪ್ರಾ
Raghav Chadha Engagement: ಇತ್ತೀಚೆಗೆ ರಾಘವ್ ಚಡ್ಡಾ ಮತ್ತು ಪರಿಣೀತಿ ಚೋಪ್ರಾ ಅವರ ನಿಶ್ಚಿತಾರ್ಥ ನಡೆದಿದೆ. ಪರಿಣೀತಿ ಅವರು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪತ್ರ ಹಂಚಿಕೊಂಡಿದ್ದಾರೆ.
ಬಾಲಿವುಡ್ನ ಖ್ಯಾತ ನಟಿ ಪರಿಣೀತಿ ಚೋಪ್ರಾ (Parineeti Chopra) ಮತ್ತು ಆಪ್ ಮುಖಂಡ ರಾಘವ್ ಚಡ್ಡಾ (Raghav Chadha) ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಜೋಡಿಗೆ ಎಲ್ಲರೂ ಶುಭ ಕೋರಿದ್ದಾರೆ. ಅವರಿಬ್ಬರ ಫೋಟೋಗಳು ವೈರಲ್ ಆಗಿವೆ. ಎಂಗೇಜ್ಮೆಂಟ್ (Engagement) ಬಳಿಕ ರಾಘವ್ ಚಡ್ಡಾ ಮತ್ತು ಪರಿಣೀತಿ ಚೋಪ್ರಾ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪತ್ರ ಹಂಚಿಕೊಂಡಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಅವರು ಬರೆದುಕೊಂಡಿದ್ದಾರೆ. ‘ರಾಘವ್ ಮತ್ತು ನಾನು ಕಳೆದ ಕೆಲವು ವಾರಗಳಲ್ಲಿ, ಅದರಲ್ಲೂ ವಿಶೇಷವಾಗಿ ನಮ್ಮ ನಿಶ್ಚಿತಾರ್ಥದ ಬಳಿಕ ನಿಮ್ಮೆಲ್ಲರಿಂದ ಸಾಕಷ್ಟು ಪ್ರೀತಿ ಮತ್ತು ಪಾಸಿಟಿವಿಟಿ ಪಡೆದಿದ್ದೇವೆ’ ಎಂದು ಪರಿಣೀತಿ ಚೋಪ್ರಾ ಅವರು ಬರಹ ಆರಂಭಿಸಿದ್ದಾರೆ.
‘ನಮ್ಮದು ಬೇರೆ ಬೇರೆ ಪ್ರಪಂಚ. ಈ ಸಮ್ಮಿಲನದಿಂದ ನಮ್ಮ ಪ್ರಪಂಚಗಳು ಒಂದಾಗುತ್ತವೆ. ನಾವು ಊಹಿಸಿರುವುದಕ್ಕಿಂತ ದೊಡ್ಡ ಕುಟುಂಬವನ್ನು ನಾವು ಗಳಿಸಿದ್ದೇವೆ. ನಾವು ನೋಡಿದ, ಓದಿದ ಎಲ್ಲ ಶುಭ ಹಾರೈಕೆಗಳು ನಮ್ಮ ಹೃದಯ ಮುಟ್ಟಿವೆ. ಎಲ್ಲರಿಗೂ ಪ್ರತ್ಯೇಕವಾಗಿ ಧನ್ಯವಾದ ಹೇಳಲು ಸಾಧ್ಯವಿಲ್ಲ. ಮಾಧ್ಯಮದಲ್ಲಿ ಇರುವ ಸ್ನೇಹಿತರಿಗೆ ವಿಶೇಷ ಧನ್ಯವಾದ. ದಿನವಿಡೀ ಅಲ್ಲಿದ್ದಕ್ಕಾಗಿ ಮತ್ತು ನಮ್ಮನ್ನು ಹುರಿದುಂಬಿಸಿದ್ದಕ್ಕಾಗಿ ಧನ್ಯವಾದಗಳು’ ಎಂದು ಪತ್ರದಲ್ಲಿ ಬರೆಯಲಾಗಿದೆ.
ಅದ್ದೂರಿಯಾಗಿ ನೆರವೇರಿದ ಪರಿಣೀತಿ ಚೋಪ್ರಾ-ರಾಘವ್ ಚಡ್ಡ ನಿಶ್ಚಿತಾರ್ಥ
ರಾಜಕೀಯಕ್ಕೂ ಬಣ್ಣದ ಲೋಕಕ್ಕೂ ಉತ್ತಮ ನಂಟಿದೆ. ಅನೇಕರು ಸಿನಿಮಾದಿಂದ ರಾಜಕೀಯಕ್ಕೆ ಕಾಲಿಟ್ಟಿದ್ದಾರೆ. ಈಗ ಪರಿಣೀತಿ ಅವರು ರಾಜಕಾರಣಿಯನ್ನೇ ಮದುವೆ ಆಗುತ್ತಿದ್ದಾರೆ. ರಾಘವ್ ಚಡ್ಡಾ ಮತ್ತು ಪರಿಣೀತಿ ಚೋಪ್ರಾ ಅವರು ಅಕ್ಟೋಬರ್ನಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ. ಅದಕ್ಕೂ ಮೊದಲು ಇವರು ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
View this post on Instagram
ಪರಿಣೀತಿ ಹಾಗೂ ರಾಘವ್ ಚಡ್ಡಾ ಲಂಡನ್ನಲ್ಲಿ ಒಟ್ಟಿಗೆ ಓದಿದ್ದಾರೆ. ಈ ವೇಳೆ ಅವರ ಮಧ್ಯೆ ಪರಿಚಯ ಬೆಳೆದಿದೆ. ಈ ಪರಿಚಯ ಪ್ರೀತಿಗೆ ತಿರುಗಿದೆ. ಪರಿಣೀತಿ ಚೋಪ್ರಾಗೆ ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ. ಅವರನ್ನು ಹುಡುಕಿಕೊಂಡು ದೊಡ್ಡ ನಿರ್ಮಾಪಕರಾಗಲೀ, ನಿರ್ದೇಶಕರಾಗಲೀ ಬರುತ್ತಿಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿಕೊಂಡು ಅವರು ಮುನ್ನಡೆಯುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.