ಹಣದಾಸೆಗೆ ಒಂದೇ ಹಾಡನ್ನು ನಾಲ್ಕು ಕಂಪೆನಿಗೆ ಮಾರಿದ ಹನಿ ಸಿಂಗ್?

Housefull 5: ಹೌಸ್​ಫುಲ್ 5 ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿತ್ತು. ಆದರೆ ಟೀಸರ್​ನಲ್ಲಿ ಬಳಸಿದ್ದ ‘ಲಾಲ್ ಪರಿ’ ಹಾಡಿನ ಹಕ್ಕು ವಿವಾದಕ್ಕೆ ಕಾರಣವಾದ ಕಾರಣ ಟೀಸರ್ ಅನ್ನು ಯೂಟ್ಯೂಬ್ ತೆಗೆದು ಹಾಕಿತ್ತು. ಹಾಡು ಮಾಡಿದ ಹನಿ ಸಿಂಗ್, ಹಣದ ಆಸೆಗೆ ಒಂದೇ ಹಾಡನ್ನು ನಾಲ್ಕು ವಿವಿಧ ಕಂಪೆನಿಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿತ್ತು. ಇಲ್ಲಿದೆ ಮಾಹಿತಿ...

ಹಣದಾಸೆಗೆ ಒಂದೇ ಹಾಡನ್ನು ನಾಲ್ಕು ಕಂಪೆನಿಗೆ ಮಾರಿದ ಹನಿ ಸಿಂಗ್?
Honey Singh

Updated on: May 14, 2025 | 1:30 PM

ಹನಿ ಸಿಂಗ್ (Honey Singh) ಭಾರತದ ಬಲು ಜನಪ್ರಿಯ ರ್ಯಾಪರ್ ಮತ್ತು ಸಂಗೀತಗಾರ. ಹಲವು ಸಿನಿಮಾಗಳಿಗೆ ಸೂಪರ್ ಹಿಟ್ ಹಾಡುಗಳನ್ನು ಹನಿಸಿಂಗ್ ನೀಡಿದ್ದಾರೆ. ಆದರೆ ಇದೀಗ ಹನಿ ಸಿಂಗ್ ತಮ್ಮ ಹಾಡೊಂದನ್ನು ಹಣಕ್ಕಾಗಿ ನಾಲ್ಕು ವಿವಿಧ ನಿರ್ಮಾಣ ಸಂಸ್ಥೆ ಮತ್ತು ಆಡಿಯೋ ಕಂಪೆನಿಗಳಿಗೆ ಆರೋಪ ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್​ಮುಖ್, ನಾನಾ ಪಾಟೇಕರ್ ಅವರುಗಳು ನಟಿಸಿರುವ ‘ಹೌಸ್​ಫುಲ್ 5’ ಸಿನಿಮಾ ಟೀಸರ್ ಬಿಡುಗಡೆ ಆಗಿತ್ತು. ಟೀಸರ್​ನಲ್ಲಿ ಹನಿ ಸಿಂಗ್ ಅವರ ‘ಲಾಲ್ ಪರಿ’ ಹಾಡು ಇತ್ತು. ಇದೀಗ ವಿವಾದಕ್ಕೆ ಕಾರಣವಾಗಿದೆ.

ಟೀಸರ್​ನಲ್ಲಿ ‘ಲಾಲ್ ಪರಿ’ ಹಾಡು ಬಳಸಿರುವ ಕಾರಣಕ್ಕೆ ಮೊಫೂಶನ್ ಮ್ಯೂಸಿಕ್ ಸ್ಟುಡಿಯೋ ದೂರು ಸಲ್ಲಿಸಿದ್ದು ಹಕ್ಕುಚ್ಯುತಿ ಉಲ್ಲಂಘನೆ ಆರೋಪ ಮಾಡಿತ್ತು. ಯೂಟ್ಯೂಬ್​ಗೆ ಸಹ ದೂರು ನೀಡಲಾಗಿತ್ತು. ದೂರು ಸ್ವೀಕರಿಸಿದ್ದ ಯೂಟ್ಯೂಬ್, ‘ಹೌಸ್​ಫುಲ್ 5’ ಟೀಸರ್ ಅನ್ನು ಯೂಟ್ಯೂಬ್​ನಿಂದ ತೆಗೆದು ಹಾಕಿತ್ತು. ಕೆಲ ವರದಿಗಳ ಪ್ರಕಾರ ಇದೇ ‘ಲಾಲ್ ಪರಿ’ ಹಾಡನ್ನು ಹನಿ ಸಿಂಗ್, ಜೀ ಮ್ಯೂಸಿಕ್, ದಿನೇಶ್ ಪ್ರೊಡಕ್ಷನ್​ಗೂ ಮಾರಾಟ ಮಾಡಿದ್ದರು ಅದೇ ಹಾಡನ್ನು ನಾಡಿಯಾವಾಲ ನಿರ್ಮಾಣ ಸಂಸ್ಥೆಗೂ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ಚಾರ್ ಬೋಟಲ್ ವೋಡ್ಕಾ‘ ಹಾಡು ಬರೆದಾಗ ಹನಿ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ ಶಾರುಖ್ ಖಾನ್

ನಾಡಿಯಾವಾಲ, ‘ಹೌಸ್​ಫುಲ್ 5’ ಸಿನಿಮಾನಲ್ಲಿ ‘ಲಾಲ್ ಪರಿ’ ಹಾಡು ಬಳಸಿದ್ದು, ಚಿತ್ರೀಕರಣ ಸಹ ಆಗಿರುವ ಕಾರಣ ಇತರೆ ಮೂರು ಸಂಸ್ಥೆಗಳಿಗೆ ಕೋಟ್ಯಂತರ ಹಣ ನೀಡಿ ಹಾಡನ್ನು ಮರು ಖರೀದಿ ಮಾಡಬೇಕಿದೆ ಎಂದು ವರದಿಯಾಗಿತ್ತು. ವಿವಾದ ಭುಗಿಲೆದ್ದ ಬೆನ್ನಲ್ಲೆ ನಾಡಿಯಾವಾಲ ಸಂಸ್ಥೆಗೆ ಲಿಖಿತ ಪ್ರಮಾಣ ನೀಡಿರುವ ಹನಿಸಿಂಗ್, ‘ಹಾಡಿನ ಹಕ್ಕು ತಮ್ಮ ಬಳಿಯೇ ಇದೆ’ ಎಂದಿದ್ದಾರೆ.

ಇದೀಗ ಹನಿಸಿಂಗ್ ಅವರ ಲಿಖಿತ ಪ್ರಮಾಣದ ಬಳಿಕ ನಾಡಿಯಾವಾಲ ಸಂಸ್ಥೆಯು ಮೊಫೂಶನ್ ಮ್ಯೂಸಿಕ್ ಸ್ಟುಡಿಯೋ ಹಾಗೂ ಯೂಟ್ಯೂಬ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದೆ. ಎರಡೂ ಸಂಸ್ಥೆಗಳ ಮೇಲೆ ತಲಾ 25 ಕೋಟಿ ರೂಪಾಯಿಯ ಮೊಕದ್ದಮೆ ದಾಖಲಿಸಿದೆ. ಕಾಪಿರೈಟ್ ದೂರು ಬಂದ ಕೂಡಲೇ ಯೂಟ್ಯೂಬ್, ನಾಡಿಯಾವಾಲ ನಿರ್ಮಾಣ ಸಂಸ್ಥೆಯನ್ನು ಸಂಪರ್ಕ ಮಾಡದೇ ತಮ್ಮ ಟೀಸರ್ ಅನ್ನು ತೆಗೆದು ಹಾಕಿದ್ದ ಅಕ್ಷಮ್ಯ ಎಂದಿದೆ ನಿರ್ಮಾಣ ಸಂಸ್ಥೆ, ನಾಡಿಯಾವಾಲ ಯೂಟ್ಯೂಬ್ ಚಾನೆಲ್​ಗೆ 16 ಲಕ್ಷಕ್ಕೂ ಹೆಚ್ಚು ಸಬ್​ಸ್ಕ್ರೈಬರ್​ಗಳಿದ್ದು, ಭಾರತದ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಅದೂ ಸಹ ಒಂದಾಗಿದೆ.

‘ಹೌಸ್​ಫುಲ್ 5’ ಸಿನಿಮಾನಲ್ಲಿ ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್, ರಿತೇಶ್ ದೇಶ್​ಮುಖ್, ನಾನಾ ಪಾಟೇಕರ್, ಸಂಜಯ್ ದತ್, ಜಾಕಿ ಶ್ರಾಫ್, ಕೃತಿ ಸನೊನ್, ಜಾಕ್ವೆಲಿನ್ ಫರ್ನಾಂಡೀಸ್, ಸೌಂದರ್ಯಾ ಶರ್ಮಾ, ನೋರಾ ಫತೇಹಿ ಇನ್ನೂ ಕೆಲವರು ನಟಿಸಿದ್ದಾರೆ. ಹಾಸ್ಯಮತ ಥ್ರಿಲ್ಲರ್ ಸಿನಿಮಾ ಇದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:30 pm, Wed, 14 May 25