AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೊತ್ತಿಲ್ಲದ ಹುಡುಗಿಯರ ಜೊತೆ ಪಾರ್ಟಿ ಮಾಡಿ 38 ಲಕ್ಷ ರೂ. ಖಾಲಿ ಮಾಡಿದ್ದ ಹನಿ ಸಿಂಗ್  

ಹನಿ ಸಿಂಗ್ ಅವರು ಸಾಕಷ್ಟು ಹಾಡುಗಳು ಮೂಲಕ ಹೆಸರು ಮಾಡಿದವರು. ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಹಣದ ಬಗ್ಗೆ ಯಾವುದೇ ಕೇರ್ ಇರಲಿಲ್ಲ. ಹಣಕ್ಕೆ ನಾನಾ ಮೂಲಗಳು ಸಿಕ್ಕಿದ್ದವು. ಅವರು ಈಗ ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು.

ಗೊತ್ತಿಲ್ಲದ ಹುಡುಗಿಯರ ಜೊತೆ ಪಾರ್ಟಿ ಮಾಡಿ 38 ಲಕ್ಷ ರೂ. ಖಾಲಿ ಮಾಡಿದ್ದ ಹನಿ ಸಿಂಗ್  
ಹನಿ ಸಿಂಗ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Oct 15, 2024 | 8:42 AM

Share

ಬಾಲಿವುಡ್​ನ ಖ್ಯಾತ ಗಾಯಕ ಯೋಯೋ ಹನಿ ಸಿಂಗ್ ಬಗ್ಗೆ ಹೊಸದಾಗಿ ಹೇಳುವುದು ಏನೂ ಉಳಿದಿಲ್ಲ. ಅವರು ಸದಾ ಪಾರ್ಟಿಮೂಡ್​ನಲ್ಲಿ ಇರುತ್ತಾರೆ. ಅವರು ಪಾರ್ಟಿ ಮಾಡೋದನ್ನು ಯಾವಾಗಲೂ ನಿಲ್ಲಿಸಿದವರಲ್ಲ. ಆದರೆ, ಇತ್ತೀಚೆಗೆ ಅವರು ಕೊಂಚ ಬದಲಾಗಿದ್ದಾರೆ. ಪಾರ್ಟಿ ಮಾಡೋದನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಮತ್ತೆ ಮರಳಿ ಕೆಲಸದತ್ತ ಗಮನ ಹರಿಸುತ್ತಿದ್ದಾರೆ. ಅವರು ಒಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದ್ದರು. ಈ ಮೊದಲು ಹೇಗಿದ್ದೆ ಎಂಬುದನ್ನು ಅವರು ಹೇಳಿದ್ದಾರೆ.

ಹನಿ ಸಿಂಗ್ ಅವರು ಸಾಕಷ್ಟು ಹಾಡುಗಳು ಮೂಲಕ ಹೆಸರು ಮಾಡಿದವರು. ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಹಣದ ಬಗ್ಗೆ ಯಾವುದೇ ಕೇರ್ ಇರಲಿಲ್ಲ. ಹಣಕ್ಕೆ ನಾನಾ ಮೂಲಗಳು ಸಿಕ್ಕಿದ್ದವು. ಅವರು ಈಗ ಒಂದು ಶಾಕಿಂಗ್ ವಿಚಾರ ರಿವೀಲ್ ಮಾಡಿದ್ದರು. ಅವರು ಹೇಳುವ ಪ್ರಕಾರ ಒಂದು ರಾತ್ರಿಗೆ ಅವರು ಖರ್ಚು ಮಾಡಿದ್ದು ಬರೋಬ್ಬರಿ 38 ಲಕ್ಷ ರೂಪಾಯಿ. ಈ ವಿಚಾರ ಶಾಕಿಂಗ್ ಎನಿಸಿದೆ.

‘ಪಾರ್ಟಿ ಮೇಲೆ ಸಾಕಷ್ಟು ಹಣ ಖರ್ಚು ಮಾಡಿದ್ದೇನೆ. ಕೈ ಖಾಲಿ ಆಗಿ ಬಿಡುತ್ತಿತ್ತು. ನಾವು 8 ಜನರು ಪಾರ್ಟಿ ಮಾಡಲು ದುಬೈ ಹೋದೆವು. ಬಾಟಲಿಗಳು ಬಂತು. ಅದೇ ರೀತಿ ಯಾವುದೋ ಹುಡುಗಿಯರು ನಮ್ಮ ಜೊತೆ ಸೇರಿದರು. ಒಟ್ಟು 38 ಲಕ್ಷ ರೂಪಾಯಿ ಬಿಲ್ ಆಯಿತು. ಮೂರು ಕ್ರೆಡಿಟ್ ಕಾರ್ಡ್​ ಮೂಲಕ ಹಣ ಪಾವತಿಸಿದೆವು. ಆದರೆ, ರಾತ್ರಿ ನಾನು ಒಬ್ಬಂಟಿಯಾಗಿ ಮಲಗಿದ್ದೆ’ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: ‘ಚಾರ್ ಬೋಟಲ್ ವೋಡ್ಕಾ‘ ಹಾಡು ಬರೆದಾಗ ಹನಿ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ ಶಾರುಖ್ ಖಾನ್

ಹನಿ ಸಿಂಗ್ ಅವರಿಗೆ ಸಣ್ಣ ವಯಸ್ಸಲ್ಲಿ ಜನಪ್ರಿಯತೆ ಸಿಕ್ಕಿತ್ತು. ಯಶಸ್ಸು ಅವರ ನೆತ್ತಿಗೆ ಏರಿತ್ತು. ಈ ಕಾರಣಕ್ಕೆ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಅವರು ಕುಟುಂಬಕ್ಕೆ ಸಮಯ ನೀಡಲಿಲ್ಲ. ಹೀಗಾಗಿ, ಅವರ ಪತ್ನಿ ತೊರೆದು ಹೋದರು. ಆ ಬಳಿಕ ಅವರು ಡ್ರಗ್ಸ್​ಗೆ ಅಡಿಕ್ಟ್ ಆದರು. ಇದರಿಂದ ಹೊರಬರಲು ಸಾಧ್ಯವೇ ಆಗಿರಲಿಲ್ಲ. ಹಲವು ವರ್ಷಗಳ ಕಾಲ ಅವರು ಇಂಡಸ್ಟ್ರಿಯಿಂದ ದೂರವೇ ಉಳಿದರು. ಈಗ ಅವರು ಮತ್ತೆ ಇಂಡಸ್ಟ್ರಿಗೆ ಮರಳಿದ್ದಾರೆ. ‘ಮಿಲಿಯನೇರ್..’ ಹೆಸರಿನ ಹಾಡನ್ನು ರಿಲೀಸ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:59 am, Tue, 15 October 24

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ