‘ಊಂಚಾಯಿ’ ಸಿನಿಮಾದ 3 ನೇ ದಿನದ ಬಾಕ್ಸ್​ ಆಫೀಸ್ ಕಲೆಕ್ಷನ್ ಎಷ್ಟು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 14, 2022 | 3:31 PM

ಅಮಿತಾಬ್​ ಬಚ್ಚನ್​ ಅವರ ‘ಊಂಚಾಯಿ' ಸಿನಿಮಾವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ವರದಿಯ ಪ್ರಕಾರ ಮೂರನೇ ದಿನ 4.90 ರಿಂದ5.20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ಹೇಳಲಾಗಿದೆ.

‘ಊಂಚಾಯಿ ಸಿನಿಮಾದ 3 ನೇ ದಿನದ ಬಾಕ್ಸ್​ ಆಫೀಸ್ ಕಲೆಕ್ಷನ್ ಎಷ್ಟು?
ಅಮಿತಾಭ್​ ಬಚ್ಚನ್​
Follow us on

ಅಮಿತಾಭ್ ಬಚ್ಚನ್​, ಅನುಪಮ್​ ಖೇರ್​, ನೀನಾ ಗುಪ್ತಾ ಮತ್ತು ಬೋಮನ್​ ಇರಾನಿ ನಟಿಸಿರುವ ಸೂರಜ್​ ಬರ್ಜಾತ್ಯಾ ಅವರ ‘ಊಂಚಾಯಿ‘(unchai) ಸಿನಿಮಾವು ಶುಕ್ರವಾರ(ನವೆಂಬರ್​ 11) ರಿಲೀಸ್ ಆಗಿತ್ತು. ಮೊದಲ ದಿನವೇ 1.81ಕೋಟಿ ರೂಪಾಯಿ ಗಳಿಸುವುದರೊಂದಿಗೆ ಉತ್ತಮ ಓಪನಿಂಗ್​ ಮಾಡಿತು. ಎರಡನೇ ದಿನ 3.65ಕೋಟಿ ರೂಪಾಯಿ ಗಳಿಸಿಕೊಂಡಿದ್ದ ‘ಊಂಚಾಯಿ’ ಚಿತ್ರ, ಮೂರನೇ ದಿನ 35ರಿಂದ40 ಶೇಕಡ ಜಿಗಿತವನ್ನು ಕಾಣುವುದರೊಂದಿಗೆ ಗಲ್ಲಾಪೆಟ್ಟಿಗೆಯಲ್ಲಿ 4.90-5.20 ಕೋಟಿ ರೂ. ಕಮಾಯಿ ಮಾಡಿದೆ. ಇದರೊಂದಿಗೆ ‘ಊಂಚಾಯಿ’ ಚಿತ್ರವು ಒಟ್ಟೂ 10.50 ಕೋಟಿ ರೂಪಾಯಿ ಗಳಿಸಿಕೊಂಡಿದೆ.

‘ಊಂಚಾಯಿ’ ಸಿನಿಮಾವು ದೇಶಾದ್ಯಂತ ಸೀಮಿತ ಬಿಡುಗಡೆಯನ್ನು ಹೊಂದಿದೆ. ಕೊರೊನಾ ಬಳಿಕ ಅಮಿತಾಭ್​ ನಟನೆಯ ಈ ಸಿನಿಮಾವು ವಾರಾಂತ್ಯದ ಅತ್ಯಧಿಕ ದಾಖಲೆಯಾಗಿದೆ. ಇನ್ನು ಇವತ್ತು(ನವೆಂಬರ್ 14) ಕೂಡ ಎಂದಿನಂತೆ ಚೆನ್ನಾಗಿ ಕಮಾಯಿ ಮಾಡಿದರೆ ತಿಂಗಳ ಪೂರ್ತಿ ಬಾಕ್ಸ್​ಆಫೀಸ್​ನಲ್ಲಿ ತನ್ನ ಓಟವನ್ನು ಮುಂದುವರೆಸುವ ಸಾಧ್ಯತೆ ಇದೆ. ಬಾಲಿವುಡ್​ನಲ್ಲಿ ‘ಲಾಲ್​ ಸಿಂಗ್​ ಚಡ್ಡಾ’ದಂತಹ ದೊಡ್ಡ ಬಜೆಟ್​ ಸಿನಿಮಾಗಳು ಮತ್ತು ಅಕ್ಷಯ್​ ಕುಮಾರ್​ ಅವರ ನಾಲ್ಕು ಚಿತ್ರಗಳು ಈ ವರ್ಷದಲ್ಲಿ ವಿಫಲವಾದವು, ಪ್ರಾದೇಶಿಕ ಸಿನಿಮಾಗಳ ಮುಂದೆ ಸತತ ಸೋಲನ್ನು ಅನುಭವಿಸುತ್ತಿರುವ ಬಾಲಿವುಡ್ ಸಿನಿಮಾಗಳು ‘ಊಂಚಾಯಿ’ ಚಿತ್ರದಿಂದ ಟೇಕ್​ ಆಫ್​ ಮಾಡುವ ನಿರೀಕ್ಷೆಯಲ್ಲಿದೆ.

ಇದನ್ನೂ ಓದಿ:Amitabh Bachchan: ಪುನೀತ್​​ ಬಗ್ಗೆ ಅಮಿತಾಭ್​ ಬಚ್ಚನ್​ ಮಾತು; ದಿಗ್ಗಜ ನಟನಿಗೂ ಕಾಡುತ್ತಿದೆ ಅಪ್ಪು ನಗು

ಕತ್ರಿನಾ ಕೈಫ್​ ಅವರ ಇತ್ತೀಚಿನ ಹಾರರ್​-ಕಾಮಿಡಿ ‘ಫೋನ್​ಭೂತ್’​ ಸಿನಿಮಾ ಕೂಡ ಬಾಕ್ಸ್​ಆಫೀಸ್​ನಲ್ಲಿ ಹೇಳಿಕೊಳ್ಳುವಷ್ಟು ಗಳಿಕೆ ಮಾಡಿಲ್ಲ. ಇದರೊಟ್ಟಿಗೆ ಜಾನ್ವಿ ಕಪೂರ್​ ಅವರ ಥ್ರಿಲ್ಲರ್​ ಸಿನಿಮಾ ‘ಮಿಲಿ’ ಕೂಡ ಫ್ಲಾಪ್​ ಆಯಿತು. ಇನ್ನು ಈ ಚಿತ್ರದಲ್ಲಿ ನಟಿಸಿದ ಅನುಪಮ್​ ಖೇರ್ ‘ಊಂಚಾಯಿ’ ಸಿನಿಮಾ ಟಿಕೆಟ್​ ಪಡೆಯಲು ಪ್ರಯತ್ನಿಸುತ್ತಿರುವ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಊಂಚಾಯಿ’ ಸಿನಿಮಾವನ್ನು ಸೂರಜ್​ ಬರ್ಜಾತ್ಯಾ ನಿರ್ದೇಶಿಸಿದ್ದು, ರಾಜಶ್ರೀ ಪ್ರೊಡಕ್ಷನ್ಸ್​ ಅಡಿ ನಿರ್ಮಾಣ ಮಾಡಲಾಗಿದೆ. ‘ಊಂಚಾಯಿ’ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದ್ದು, ಈ ಸಿನಿಮಾವು ಬಾಕ್ಸ್​​ ಆಫೀಸ್​ನಲ್ಲಿ ಎಷ್ಟರ ಮಟ್ಟಿಗೆ ಗಳಿಕೆ ಮಾಡಬಹುದು ಎಂದು ಕಾದು ನೋಡಬೇಕಾಗಿದೆ.

ಇನ್ನಷ್ಟು ಹೆಚ್ಚಿನ ಮನರಂಜನಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ