AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vikram Vedha Teaser: ‘ಈ ಕಥೆಯಲ್ಲಿ ಇಬ್ಬರೂ ಕೆಟ್ಟವರು’: ‘ವಿಕ್ರಮ್​ ವೇದ’ ಟೀಸರ್​ನಲ್ಲಿ ಹೃತಿಕ್​-ಸೈಫ್​ ಮುಖಾಮುಖಿ

Hrithik Roshan | Saif Ali Khan: ‘ವಿಕ್ರಮ್​ ವೇದ’ ಸಿನಿಮಾದ ಟೀಸರ್​ ರಿಲೀಸ್​ ಆಗಿದೆ. ಹೃತಿಕ್​ ರೋಷನ್​ ಮತ್ತು ಸೈಫ್​ ಅಲಿ ಖಾನ್​ ವೃತ್ತಿಜೀವನಕ್ಕೆ ಈ​ ಸಿನಿಮಾದಿಂದ ಇನ್ನಷ್ಟು ಮೈಲೇಜ್​​ ಸಿಗುವ ನಿರೀಕ್ಷೆ ಇದೆ.

Vikram Vedha Teaser: ‘ಈ ಕಥೆಯಲ್ಲಿ ಇಬ್ಬರೂ ಕೆಟ್ಟವರು’: ‘ವಿಕ್ರಮ್​ ವೇದ’ ಟೀಸರ್​ನಲ್ಲಿ ಹೃತಿಕ್​-ಸೈಫ್​ ಮುಖಾಮುಖಿ
ಹೃತಿಕ್ ರೋಷನ್, ಸೈಫ್ ಅಲಿ ಖಾನ್
TV9 Web
| Updated By: ಮದನ್​ ಕುಮಾರ್​|

Updated on: Aug 24, 2022 | 12:29 PM

Share

ಈ ವರ್ಷದ ಬಹುನಿರೀಕ್ಷಿಯ ಸಿನಿಮಾಗಳ ಪಟ್ಟಿಯಲ್ಲಿ ಹಿಂದಿಯ ‘ವಿಕ್ರಮ್​ ವೇದ’ ಚಿತ್ರ ಕೂಡ ಇದೆ. ಈ ಸಿನಿಮಾದಲ್ಲಿ ಸೈಫ್​ ಅಲಿ ಖಾನ್​ ಹಾಗೂ ಹೃತಿಕ್​ ರೋಷನ್​ (Hrithik Roshan) ನಟಿಸುತ್ತಿದ್ದಾರೆ. ಪುಷ್ಕರ್​-ಗಾಯತ್ರಿ ನಿರ್ದೇಶನದ ಈ ಸಿನಿಮಾದ ಟೀಸರ್​ ಈಗ ಬಿಡುಗಡೆ ಆಗಿದೆ. ಟೀಸರ್ (Vikram Vedha Teaser)​ ನೋಡಿದ ಎಲ್ಲರಿಗೂ ಸಖತ್​ ಕೌತುಕ ಮೂಡಿದೆ. ಖಡಕ್​ ಆದಂತಹ ಡೈಲಾಗ್​ಗಳ ಮೂಲಕ ಹೃತಿಕ್​ ರೋಷನ್​ ಗಮನ ಸೆಳೆದಿದ್ದಾರೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಸಿನಿಮಾದ ಟೀಸರ್​ 13 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಪ್ರೇಕ್ಷಕರಿಗೆ ಈ ಚಿತ್ರದ ಮೇಲೆ ಎಷ್ಟು ನಿರೀಕ್ಷೆ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಸೆಪ್ಟೆಂಬರ್​ 30ರಂದು ‘ವಿಕ್ರಮ್​ ವೇದ’ (Vikram Vedha) ಸಿನಿಮಾ ಬಿಡುಗಡೆ ಆಗಲಿದೆ.

ಎಲ್ಲರಿಗೂ ತಿಳಿದಿರುವಂತೆ ಇದು ತಮಿಳಿನ ‘ವಿಕ್ರಮ್ ವೇದ’ ಸಿನಿಮಾದ ಹಿಂದಿ ರಿಮೇಕ್​. ಮೂಲ ಹೆಸರನ್ನೇ ಇಟ್ಟುಕೊಂಡು ರಿಮೇಕ್​ ಮಾಡಲಾಗುತ್ತಿದೆ. ಪೊಲೀಸ್​ ಅಧಿಕಾರಿ ಪಾತ್ರದಲ್ಲಿ ಸೈಫ್​ ಅಲಿ ಖಾನ್​ ನಟಿಸಿದ್ದರೆ, ಗ್ಯಾಂಗ್​ಸ್ಟರ್​ ಆಗಿ ಹೃತಿಕ್​ ರೋಷನ್​ ಮನರಂಜನೆ ನೀಡಲಿದ್ದಾರೆ. ಇಬ್ಬರ ನಡುವೆ ಈ ಸಿನಿಮಾದಲ್ಲಿ ಹಲವು ಮುಖಾಮುಖಿ ದೃಶ್ಯಗಳು ಇರಲಿವೆ. ಭರ್ಜರಿ ಸಾಹಸ ಸನ್ನಿವೇಶಗಳು ಕೂಡ ಇವೆ ಎಂಬುದಕ್ಕೆ ಟೀಸರ್​ನಲ್ಲಿ ಸುಳಿವು ಸಿಕ್ಕಿದೆ. ರಗಡ್​ ಗೆಟಪ್​ನಲ್ಲಿ ಹೃತಿಕ್​ ರೋಷನ್​ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
‘ಹೃದಯಂ’ ರಿಮೇಕ್​ನಲ್ಲಿ ಸೈಫ್​ ಅಲಿ ಖಾನ್​ ಮಗ ಇಬ್ರಾಹಿಂ? ಲಾಂಚ್​ ಮಾಡ್ತಾರೆ ಕರಣ್​ ಜೋಹರ್​
Image
ಪ್ರೀತಿ ಜಿಂಟಾ ಮುಂದೆ ಸೈಫ್​ ಅಲಿ ಖಾನ್​ ಸ್ಟಂಟ್​ ಎಡವಟ್ಟು​; ಸತ್ತು ಹೋಗ್ತಾರೆ ಅಂತ ಭಾವಿಸಿದ್ದ ನಟಿ
Image
ಗಣೇಶನಿಗೆ ಕೈ ಮುಗಿದ ಸೈಫ್​ ಅಲಿ ಖಾನ್​ ವಿರುದ್ಧ ಒಂದು ವರ್ಗದ ನೆಟ್ಟಿಗರು ಗರಂ; ಹಬ್ಬದ ನಡುವೆ ಟ್ರೋಲ್​​
Image
‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್​ ಅಲಿ ಖಾನ್​

‘ನಿಮಗೊಂದು ಕಥೆ ಹೇಳಲೇ? ಕಾಳಜಿ ಮತ್ತು ತಾಳ್ಮೆ ಇಟ್ಟುಕೊಂಡು ಇದನ್ನು ಕೇಳಿ. ಈ ಬಾರಿ ಬರೀ ಮನರಂಜನೆ ಮಾತ್ರವಲ್ಲ, ಅಚ್ಚರಿ ಕೂಡ ಇರಲಿದೆ’ ಎಂಬ ಸಂಭಾಷಣೆಯೊಂದಿಗೆ ಟೀಸರ್​ ಆರಂಭ ಆಗುತ್ತದೆ. 1 ನಿಮಿಷ 54 ಸೆಕೆಂಡ್​ಗಳ ಟೀಸರ್​ನಲ್ಲಿ ಹಲವು ಅಂಶಗಳನ್ನು ರಿವೀಲ್​ ಮಾಡಲಾಗಿದೆ. ‘ಒಳ್ಳೆಯದು ಮತ್ತು ಕೆಟ್ಟದ್ದರ ನಡುವೆ ಆಯ್ಕೆ ಮಾಡುವುದು ತುಂಬ ಸುಲಭ ಸರ್​. ಆದರೆ ಈ ಕಥೆಯಲ್ಲಿ ಇಬ್ಬರೂ ಕೆಟ್ಟವರು’ ಎಂದು ಹೃತಿಕ್​ ರೋಷನ್​ ಹೇಳಿರುವ ಡೈಲಾಗ್​ ಹೆಚ್ಚು ಹೈಲೈಟ್​ ಆಗಿದೆ. ಆ ಮೂಲಕ ಹಿಂದಿ ಪ್ರೇಕ್ಷಕರ ವಲಯದಲ್ಲಿ ಕೌತುಕ ಮೂಡಿಸಲು ಈ ಟೀಸರ್​ ಯಶಸ್ವಿ ಆಗಿದೆ.

ಸದ್ಯಕ್ಕೆ ಬಾಲಿವುಡ್​ ಪರಿಸ್ಥಿತಿ ಚಿಂತಾಜನಕ ಆಗಿದೆ. ಯಾವುದೇ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ‘ವಿಕ್ರಮ್​ ವೇದ’ ಮೂಲಕವಾದರೂ ಹಿಂದಿ ಗಲ್ಲಾಪೆಟ್ಟಿಗೆಯಲ್ಲಿ ಚೇತರಿಕೆ ಕಾಣಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಟೀಸರ್​ ನೋಡಿದ ಪ್ರೇಕ್ಷಕರು ಪಾಸಿಟಿವ್​ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಸರಳತೆ ಬಗ್ಗೆ ದೊಡ್ಮನೆ ನೋಡಿ ಕಲಿತಿದ್ದೇನೆ: ಜನಾರ್ದನ ರೆಡ್ಡಿ ಪುತ್ರ ಕಿರೀಟಿ
ಸರಳತೆ ಬಗ್ಗೆ ದೊಡ್ಮನೆ ನೋಡಿ ಕಲಿತಿದ್ದೇನೆ: ಜನಾರ್ದನ ರೆಡ್ಡಿ ಪುತ್ರ ಕಿರೀಟಿ
ಬೀದಿ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಸ್ಕೂಟಿ ಸವಾರ ಸಾವು
ಬೀದಿ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಸ್ಕೂಟಿ ಸವಾರ ಸಾವು
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಪಾಕಿಸ್ತಾನದಲ್ಲಿ ಭಾರೀ ಪ್ರವಾಹ; 116 ಸಾವು, 253 ಜನರಿಗೆ ಗಾಯ
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಮನೆಯಂಗಳಕ್ಕೆ ಉರುಳಿ ಬಂದ ಕಲ್ಲು, ಮಣ್ಣು ಮತ್ತು ಗಿಡಗಳು
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಪಾಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ಕೊಲೆ ಆರೋಪಿಯನ್ನು ಶೂಟ್ ಮಾಡಿ ಕೊಲೆ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
ಶ್ರೀರಾಮುಲು ಮಾತುಗಳಲ್ಲಿ ಸ್ಪಷ್ಟತೆಯ ಕೊರತೆ, ಮಾತುಗಳಲ್ಲಿ ಗೊಂದಲ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ವಿಂಗಡಿಸಲು ನಿರ್ಧರಿಸಲಾಗಿದೆ: ಶಿವಕುಮಾರ
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ರವಿಚಂದ್ರನ್ ಅವರನ್ನು ಅಳುವಂತೆ ಮಾಡಿದ ಏಕೈಕ ಸಿನಿಮಾ ಇದು
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್
ಸೇತುವೆ ಲೋಕಾರ್ಪಣೆಗೆ ಬರಬೇಡವೆಂದು ಸಿಎಂಗೆ ಬಿಎಸ್​ವೈ ಹೇಳಿದ್ದರು: ಯತ್ನಾಳ್