ಆದಷ್ಟು ಬೇಗ ‘ವಾರ್ 2’ (War 2) ಸಿನಿಮಾದ ಶೂಟಿಂಗ್ ಆರಂಭ ಆಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ. ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್ಟಿಆರ್ (Jr NTR) ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ. ಅಯಾನ್ ಮುಖರ್ಜಿ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಚಿತ್ರದ ಬಗ್ಗೆ ಒಂದು ಅಪ್ಡೇಟ್ ಸಿಕ್ಕಿದೆ. ಶೀಘ್ರದಲ್ಲೇ ‘ವಾರ್ 2’ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ. ಅದು ಕೂಡ ಜಪಾನ್ನಲ್ಲಿ ಎಂಬುದು ವಿಶೇಷ. ಹೃತಿಕ್ ರೋಷನ್ (Hrithik Roshan) ಅವರ ಇಂಟ್ರಡಕ್ಷನ್ ದೃಶ್ಯದಿಂದಲೇ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಆ ಉದ್ದೇಶದಿಂದಲೇ ಈ ಬಾರಿ ಪಾತ್ರವರ್ಗಕ್ಕೆ ದಕ್ಷಿಣ ಭಾರತದ ಹೀರೋ ಜೂನಿಯರ್ ಎನ್ಟಿಆರ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಅವರು ಈ ಚಿತ್ರದಲ್ಲಿ ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಮಾರ್ಚ್ 7ರಂದು ‘ವಾರ್ 2’ ಸಿನಿಮಾದ ಶೂಟಿಂಗ್ ಶುರುವಾಗಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಹೃತಿಕ್ ಕಟ್ಟುಮಸ್ತಾದ ಬಾಡಿ ಹಿಂದಿರುವ ಟ್ರೇನರ್ ಇವರೇ; ಹುಟ್ಟುಹಬ್ಬಕ್ಕೂ ಬಿಡಲಿಲ್ಲ ವರ್ಕೌಟ್
‘ವಾರ್ 2’ ಸಿನಿಮಾದ ಚಿತ್ರೀಕರಣ ಹಲವು ರಾಷ್ಟ್ರಗಳಲ್ಲಿ ನಡೆಯಲಿದೆ. ಜೂನಿಯರ್ ಎನ್ಟಿಆರ್ ಅವರಿಗೋಸ್ಕರ ದೊಡ್ಡ ಪ್ಲ್ಯಾನ್ ಮಾಡಲಾಗಿದೆ. ಆದಿತ್ಯ ಚೋಪ್ರಾ ಅವರು ಈ ಬಾರಿ ತುಂಬ ದೊಡ್ಡ ಬಜೆಟ್ನಲ್ಲಿ ಸಿನಿಮಾ ಮಾಡುತ್ತಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್’ನಲ್ಲಿ ಜೂನಿಯರ್ ಎನ್ಟಿಆರ್ ಅವರ ಪಾತ್ರ ತುಂಬ ಮಹತ್ವದ್ದಾಗಿರಲಿದೆ. ಮುಂಬರುವ ಸಿನಿಮಾಗಳಲ್ಲಿ ಕೂಡ ಈ ಪಾತ್ರ ಇರಲಿದೆ. ಆ ಪಾತ್ರವನ್ನು ಇಟ್ಟುಕೊಂಡು ಸ್ಪಿನ್ಆಫ್ ಮಾಡುವ ಪ್ಲ್ಯಾನ್ ಕೂಡ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಂಡು ಕೇಳರಿಯದ ಆ್ಯಕ್ಷನ್ಗೆ ಹೃತಿಕ್ ರೋಷನ್ ಸಜ್ಜು
ಹೃತಿಕ್ ರೋಷನ್ ಅವರು ಮಾರ್ಚ್ 7ರಂದು ಜಪಾನ್ಗೆ ತೆರಳಿದ್ದಾರೆ. ಅದೇ ದಿನ ಅವರು ‘ವಾರ್ 2’ ಸಿನಿಮಾದ ಶೂಟಿಂಗ್ನಲ್ಲಿ ಭಾಗಿ ಆಗಲಿದ್ದಾರೆ. 2025ರಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂಬ ಗುರಿ ಇಟ್ಟುಕೊಳ್ಳಲಾಗಿದೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ನಲ್ಲಿ ಹಲವು ಸಿನಿಮಾಗಳು ಸಿದ್ಧವಾಗುತ್ತಿವೆ. ಆಲಿಯಾ ಭಟ್ ಅವರ ಮುಖ್ಯ ಭೂಮಿಕೆಯಲ್ಲಿ ಒಂದು ಸ್ಪೈ ಸಿನಿಮಾ ಮಾಡಲಾಗುತ್ತಿದೆ. ಅದರ ಜೊತೆಗೆ ‘ಪಠಾಣ್ 2’, ‘ಟೈಗರ್ ವರ್ಸಸ್ ಪಠಾಣ್’ ಮುಂತಾದ ಸಿನಿಮಾಗಳು ಪ್ಲ್ಯಾನ್ನಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.