ಶಾರುಖ್ ಖಾನ್ (Shah Rukh Khan) ಅವರನ್ನು ಕಂಡರೆ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಸಾಕಷ್ಟು ಅಭಿಮಾನ ಇದೆ. ಅವರನ್ನು ಆರಾಧಿಸುತ್ತಾರೆ. ಆದಾಗ್ಯೂ ಅವರು ಶಾರುಖ್ ಜೊತೆ ಸಿನಿಮಾ ಮಾಡುವ ಆಸಕ್ತಿ ತೋರಿಸಿಲ್ಲ. ಮುಂದಿನ ದಿನಗಳಲ್ಲಿ ಶಾರುಖ್ ಜೊತೆ ಸಿನಿಮಾ ಮಾಡುವ ಆಲೋಚನೆಯೂ ಅವರಿಗೆ ಇಲ್ಲ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಶಾರುಖ್ ಖಾನ್ ಅವರ ಅಭಿಮಾನಿಗಳನ್ನು ಎದುರಿಸೋ ಶಕ್ತಿ ಅವರಿಗೆ ಇಲ್ಲವಂತೆ.
‘ಶಾರುಖ್ ಅವರ ಚಕ್ ದೇ ಇಂಡಿಯಾ ನನ್ನ ಫೇವರಿಟ್ ಸಿನಿಮಾ. ಕಭಿ ಹಾ ಕಭಿ ನಾ ಮೊದಲಾದ ಸಿನಿಮಾಗಳೂ ನನ್ನ ಅಚ್ಚು ಮೆಚ್ಚಿನ ಸಿನಿಮಾಗಳು. ಆರಂಭದಲ್ಲಿ ಶಾರುಖ್ ಖಾನ್ ಎಲ್ಲರ ಜೊತೆಯೂ ಕೆಲಸ ಮಾಡಿದರು. ಆದರೆ, ಈಗ ಶಾರುಖ್ ಜೊತೆ ಸಿನಿಮಾ ಮಾಡೋಕೆ ಸಾಧ್ಯವಿಲ್ಲ. ನಾನು ನಿರ್ದೇಶಕನಾಗಿ ಅವರನ್ನು ಸಾಕಷ್ಟು ಇಷ್ಟಪಟ್ಟಿದ್ದೆ. ಆದರೆ, ಈಗ ಅವರ ಅಭಿಮಾನಿಗಳ ಬಗ್ಗೆ ನನಗೆ ಭಯ ಇದೆ’ ಎಂದಿದ್ದಾರೆ ಅನುರಾಗ್ ಕಶ್ಯಪ್.
ಈ ರೀತಿಯ ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡುವಾಗ ಸಾಕಷ್ಟು ಎಚ್ಚರಿಕೆ ಬೇಕು. ಸಿನಿಮಾ ಫ್ಲಾಪ್ ಆಯಿತು ಎಂದರೆ ಬೈಗುಳ ಎದುರಿಸಬೇಕಾಗುತ್ತದೆ. ಇದೇ ಭಯ ಅವರಿಗೂ ಇದೆ. ‘ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ದೊಡ್ಡ ಸ್ಟಾರ್‌ಗಳ ಅಭಿಮಾನಿಗಳ ಬಗ್ಗೆ ನನಗೆ ಭಯ ಇದೆ. ಅಭಿಮಾನಿಗಳಿಂದಾಗಿ ನಟರು ಒಂದೇ ರೀತಿಯ ಪಾತ್ರ ಮಾಡಲು ಬಯಸುತ್ತಾರೆ. ಅಭಿಮಾನಿಗಳು ಕೂಡ ತಮ್ಮ ಹೀರೋನಿಂದ ಮತ್ತೆ ಮತ್ತೆ ಅದೇ ವಿಷಯಗಳನ್ನು ಬಯಸುತ್ತಾರೆ. ಅದು ಸಂಭವಿಸದಿದ್ದರೆ ಅಭಿಮಾನಿಗಳು ಆ ರೀತಿಯ ಸಿನಿಮಾಗಳನ್ನು ತಿರಸ್ಕರಿಸುತ್ತಾರೆ. ಹೀಗಾಗಿ. ನಟರು ಸಹ ಹೊಸ ವಿಷಯಗಳನ್ನು ಪ್ರಯತ್ನಿಸುವ ಬಗ್ಗೆ ಭಯಪಡುತ್ತಾರೆ’ ಎಂದಿದ್ದಾರೆ ಅನುರಾಗ್.
‘ನನಗೆ ಏನು ಅನಿಸುತ್ತದೆಯೋ ಅದನ್ನು ಮಾಡುತ್ತೇನೆ. ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿನಿಮಾ ಮಾಡಲ್ಲ. ಸ್ಟಾರ್ ಹೀರೋ ಜೊತೆ ಸಿನಿಮಾ ಮಾಡಿದಾಗ ಇದು ದುಬಾರಿ ಆಗಬಹುದು. ಹಾಗಾಗಿ ಶಾರುಖ್ ಅಥವಾ ಇನ್ಯಾವುದೇ ದೊಡ್ಡ ಹೀರೋ ಜೊಯೆ ನನಗೆ ಸಿನಿಮಾ ಮಾಡುವ ಸಾಮರ್ಥ್ಯ ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ನಟನೆಯ ‘ಕಿಂಗ್’ ಸಿನಿಮಾ ಬಗ್ಗೆ ಸುಳ್ಳು ಸುದ್ದಿ ಹಬ್ಬಲು ಕಾರಣವಾಯ್ತು ಈ ಫೋಟೋ
‘ನನ್ನ ಜೀವನದ ದೊಡ್ಡ ದುರಂತವೆಂದರೆ ‘ಪ್ಯಾರ್ ವಿತ್ ಡಿಜೆ ಮೊಹಾಬತ್’ ಸಿನಿಮಾ. ಆ ಚಿತ್ರದಿಂದ ನಾನು ನನ್ನ ಎಲ್ಲಾ ಹಣವನ್ನು ಕಳೆದುಕೊಂಡೆ. ಈ ಸಿನಿಮಾ ಮಾಡುವುದು ಮೂರ್ಖತನ ಎಂದು ಎಲ್ಲರೂ ಭಾವಿಸಿದ್ದರು. ಆದರೆ ನಾನು ಏನು ಅಂದುಕೊಂಡಿದ್ದೆನೋ ಅದನ್ನು ಮಾಡಲು ಸಾಧ್ಯವಾಯಿತು. ಆ ವೈಫಲ್ಯ ನನ್ನದು. ನಾನು ಅದರ ಸಂಪೂರ್ಣ ಮಾಲೀಕತ್ವವನ್ನು ತೆಗೆದುಕೊಳ್ಳುತ್ತೇನೆ. ಇದು ಹೆಚ್ಚು ತೃಪ್ತಿಕರವಾಗಿದೆ ಏಕೆಂದರೆ ನನಗೆ ಯಾವುದೇ ವಿಷಾದವಿಲ್ಲ’ ಎಂದಿದ್ದಾರೆ ಅನುರಾಗ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.