ಸೀರೆ ಉಟ್ಟ ಆಮಿರ್ ಖಾನ್ ಮಗಳು ಇರಾ​ಗೆ ಬಾಯ್​ಫ್ರೆಂಡ್​ನಿಂದ ಮುತ್ತಿನ ಮಳೆ

| Updated By: ರಾಜೇಶ್ ದುಗ್ಗುಮನೆ

Updated on: Jan 31, 2022 | 6:23 PM

ಆಮಿರ್​ ಖಾನ್​ ಮಗಳು ಕಳೆದ ಕೆಲ ವರ್ಷಗಳಿಂದ ನೂಪುರ್​ ಶಿಖಾರೆ ಜತೆ ಡೇಟಿಂಗ್​ ನಡೆಸುತ್ತಿದ್ದಾರೆ. ನೂಪುರ್​ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ.

ಸೀರೆ ಉಟ್ಟ ಆಮಿರ್ ಖಾನ್ ಮಗಳು ಇರಾ​ಗೆ ಬಾಯ್​ಫ್ರೆಂಡ್​ನಿಂದ ಮುತ್ತಿನ ಮಳೆ
Follow us on

ಆಮಿರ್​ ಖಾನ್​ (Aamir Khan) ಮಗಳು ಇರಾ ಖಾನ್ (Ira Khan)​ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಅವರು ಈವರೆಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿಲ್ಲ. ಆದರೆ, ಅವರ ಖ್ಯಾತಿ ತುಂಬಾನೇ ದೊಡ್ಡದಿದೆ. ಸ್ಟಾರ್​ ನಟನ ಮಗಳು ಎನ್ನುವ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಯ್​ಫ್ರೆಂಡ್ ನೂಪುರ್​ ಶಿಖಾರೆ (Nupur Shikhare)​  ವಿಚಾರದಲ್ಲಿ ಇರಾ ಖಾನ್​ ಎಂದಿಗೂ ಮುಚ್ಚುಮರೆ ಮಾಡಿದವರಲ್ಲ. ಈ ಬಗ್ಗೆ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಮಿತಿ ಮೀರಿತ್ತು. ಈ ಬಗ್ಗೆಯೂ ಇತ್ತೀಚೆಗೆ ಬರೆದುಕೊಂಡಿದ್ದರು. ಈಗ ಅವರು ಬಾಯ್​ಫ್ರೆಂಡ್​ ಜತೆ ಕಾಣಿಸಿಕೊಂಡಿದ್ದು, ಸೀರೆಯಲ್ಲಿ ಮಿಂಚಿದ್ದಾರೆ.

ಆಮಿರ್​ ಖಾನ್​ ಮಗಳು ಕಳೆದ ಕೆಲ ವರ್ಷಗಳಿಂದ ನೂಪುರ್​ ಶಿಖಾರೆ ಜತೆ ಡೇಟಿಂಗ್​ ನಡೆಸುತ್ತಿದ್ದಾರೆ. ನೂಪುರ್​ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ. ಈ ಮೊದಲು ಕೂಡ ಅವರು ಇದೇ ರೀತಿ ಮಾಡಿದ್ದರು. ಈ ಬಾರಿ ಅವರು ಹಂಚಿಕೊಂಡ ಫೋಟೋ ವಿಶೇಷವಾಗಿತ್ತು. ಈ ಫೋಟೋಗೆ ಅಭಿಮಾನಿಗಳು ಪ್ರೀತಿ ತೋರಿಸಿದ್ದಾರೆ.

ಇರಾ ಅವರು ನೂಪುರ್​ ಹಾಗೂ ಪ್ರೀತಮ್​ ಜತೆ ನಿಂತಿದ್ದಾರೆ. ಇರಾ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇರಾ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರು ಸಖತ್​ ಕ್ಯೂಟ್​ ಎಂದು ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ.

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್​ ಖಾನ್​ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್​, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್​ ಮತ್ತು ರೀನಾ ಡಿವೋರ್ಸ್​ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್​ ಖಾನ್​ ಇಂದಿಗೂ ಚೆನ್ನಾಗಿಯೇ ಇದ್ದಾರೆ. ರೀನಾ ದತ್ತಾ ಜತೆ ವಿಚ್ಛೇದನ ಪಡೆದ ನಂತರದಲ್ಲಿ ಆಮಿರ್​ ಖಾನ್​ ಕಿರಣ್​ ರಾವ್​ ಅವರನ್ನು ಮದುವೆ ಆಗಿದ್ದರು. ಕಳೆದ ವರ್ಷ ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.

ದೇಹದ ತೂಕದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ ಇರಾ

ಸ್ಟಾರ್​ ನಟರ ಮಕ್ಕಳ ಎಂದರೆ ಅಭಿಮಾನಿಗಳು ಒಂದು ಕಣ್ಣು ಇಟ್ಟಿರುತ್ತಾರೆ. ಅವರು ಏನು ಮಾಡುತ್ತಾರೆ? ಅವರ ದಿನಚರಿ ಏನು? ಯಾವ ರೀತಿಯ ಬಟ್ಟೆ ತೊಡುತ್ತಾರೆ, ಹೀಗೆ ಪ್ರತಿ ವಿಚಾರವನ್ನೂ ಗಮನಿಸುತ್ತಾರೆ. ಇನ್ನು, ಮಾಡುವ ಸಣ್ಣ ತಪ್ಪಿಗೆ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಿದೆ. ಕೆಲವರು ಬಾಡಿ ಶೇಮಿಂಗ್​ ಎದುರಿಸಿದ ಘಟನೆಯೂ ಇದೆ. ಇರಾ ಖಾನ್​ ಕೂಡ ಇದೇ ರೀತಿಯ ವಿಚಾರಕ್ಕೆ ಸುದ್ದಿ ಆಗಿದ್ದರು.  ಅವರ ದೇಹದ ತೂಕ ಬರೋಬ್ಬರಿ 20 ಕೆ.ಜಿ. ಹೆಚ್ಚಿತ್ತು. ಈ ಬಗ್ಗೆ ಅವರೇ ಬರೆದುಕೊಂಡಿದ್ದರು.

ಇದನ್ನೂ ಓದಿ:  ಮತ್ತೆ ಒಂದಾದ ಆಮಿರ್​ ಖಾನ್-ಕಿರಣ್​ ರಾವ್​; ಅಚ್ಚರಿ ತಂದ ಮಾಜಿ ದಂಪತಿಯ ನಿರ್ಧಾರ

ಆಮಿರ್​ ಖಾನ್ ಜತೆ ಮಗನ ವಿಷಯ ಮಾತಾಡುತ್ತ ಭಾವುಕರಾದ ನಾಗಾರ್ಜುನ; ಅಲ್ಲಿ ನಡೆದ ಮಾತುಕತೆ ಏನು?