ಆಮಿರ್​ ಖಾನ್ ಜತೆ ಮಗನ ವಿಷಯ ಮಾತಾಡುತ್ತ ಭಾವುಕರಾದ ನಾಗಾರ್ಜುನ; ಅಲ್ಲಿ ನಡೆದ ಮಾತುಕತೆ ಏನು?

ನಾಗಾರ್ಜುನ ಅವರ ಮನೆಯಲ್ಲಿ ಆಮಿರ್​ ಖಾನ್​ಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ‘ಲಾಲ್​ ಸಿಂಗ್​ ಚಡ್ಡಾ’ ಬಗ್ಗೆ ಮಾತು ಶುರುವಾಯಿತು. ಅದನ್ನು ಕೇಳುತ್ತಿದ್ದಂತೆಯೇ ನಾಗಾರ್ಜುನ ತುಂಬಾ ಎಮೋಷನಲ್​ ಆಗಿಬಿಟ್ಟರು.

ಆಮಿರ್​ ಖಾನ್ ಜತೆ ಮಗನ ವಿಷಯ ಮಾತಾಡುತ್ತ ಭಾವುಕರಾದ ನಾಗಾರ್ಜುನ; ಅಲ್ಲಿ ನಡೆದ ಮಾತುಕತೆ ಏನು?
ಆಮಿರ್​ ಖಾನ್​, ನಾಗಾರ್ಜುನ, ನಾಗ ಚೈತನ್ಯ
Follow us
TV9 Web
| Updated By: ಮದನ್​ ಕುಮಾರ್​

Updated on: Sep 25, 2021 | 9:40 AM

ಅಕ್ಕಿನೇನಿ ಫ್ಯಾಮಿಲಿಯ ವಿಷಯ ಪದೇಪದೇ ಮುನ್ನೆಲೆಗೆ ಬರುತ್ತಿದೆ. ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬುದರ ಜೊತೆಗೆ ಅವರ ಕುಟುಂಬದ ಬಗ್ಗೆ ಹಲವು ಸಂಗತಿಗಳು ಹೊರಬರುತ್ತಿವೆ. ಈಗ ಬಾಲಿವುಡ್​ ಸ್ಟಾರ್​ ನಟ ಆಮಿರ್​ ಖಾನ್​ ಎದುರು ನಾಗ ಚೈತನ್ಯ ಬಗ್ಗೆ ಮಾತನಾಡುತ್ತಿರುವಾಗ ಅವರ ತಂದೆ ನಾಗಾರ್ಜುನ ಎಮೋಷನಲ್​ ಆದರು ಎಂಬ ಸುದ್ದಿ ಕೇಳಿಬಂದಿದೆ. ಅಷ್ಟಕ್ಕೂ ಈ ಮೂವರು ಸ್ಟಾರ್​ ಕಲಾವಿದರ ನಡುವೆ ನಡೆದ ಮಾತುಕತೆ ಏನು ಎಂಬ ಬಗ್ಗೆ ಕುತೂಹಲ ಇಟ್ಟುಕೊಂಡಿರುವ ಅಭಿಮಾನಿಗಳಿಗೆ ಇಲ್ಲಿದೆ ವಿವರ.

ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ನಟನೆಯ ‘ಲವ್​ ಸ್ಟೋರಿ’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ರಿಲೀಸ್​ ಆಗುವುದಕ್ಕೂ ಮುನ್ನ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಆಮಿರ್​ ಖಾನ್​ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ‘ಲಾಲ್​ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಆಮಿರ್​ ಖಾನ್​ ಮತ್ತು ನಾಗ ಚೈತನ್ಯ ಒಟ್ಟಿಗೆ ಅಭಿನಯಿಸಿದ್ದಾರೆ. ಆ ಸ್ನೇಹದ ಮೇರೆಗೆ ಆಮಿರ್​ ಖಾನ್​ ಅವರು ‘ಲವ್​ ಸ್ಟೋರಿ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಬಂದಿದ್ದರು.

ಆ ಕಾರ್ಯಕ್ರಮ ಮುಗಿದ ಬಳಿಕ ನಾಗಾರ್ಜುನ ಅವರ ಮನೆಯಲ್ಲಿ ಆಮಿರ್​ ಖಾನ್​ಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ನಾಗಾರ್ಜುನ, ನಾಗ ಚೈತನ್ಯ, ಆಮೀರ್​ ಖಾನ್​ ಒಟ್ಟಿಗೆ ಕುಳಿತು ಭೋಜನ ಸವಿದರು. ಆ ಸಂದರ್ಭದಲ್ಲಿ ‘ಲಾಲ್​ ಸಿಂಗ್​ ಚಡ್ಡಾ’ ಬಗ್ಗೆ ಮಾತು ಶುರುವಾಯಿತು. ಆ ಚಿತ್ರದಲ್ಲಿ ನಾಗ ಚೈತನ್ಯ ಮಾಡಿರುವ ಪಾತ್ರದ ಹೆಸರು ಏನು ಎಂಬುದನ್ನು ಆಮಿರ್​ ಖಾನ್​ ಬಹಿರಂಗಪಡಿಸಿದರು. ಬಾಲರಾಜು ಎಂಬ ಪಾತ್ರಕ್ಕೆ ನಾಗ ಚೈತನ್ಯ ಬಣ್ಣ ಹಚ್ಚಿದ್ದಾರೆ. ಅದನ್ನು ಕೇಳುತ್ತಿದ್ದಂತೆಯೇ ನಾಗಾರ್ಜುನ ತುಂಬಾ ಎಮೋಷನಲ್​ ಆಗಿಬಿಟ್ಟರು.

ಅಚ್ಚರಿ ಎಂದರೆ ನಾಗಾರ್ಜುನ ಅವರ ತಂದೆ, ಲೆಜೆಂಡರಿ ನಟ ಅಕ್ಕಿನೇನಿ ನಾಗೇಶ್ವರ ರಾವ್​ ಅವರು ಹಲವು ದಶಕಗಳ ಹಿಂದೆ ‘ಬಾಲರಾಜು’ ಶೀರ್ಷಿಕೆಯ ಚಿತ್ರದಲ್ಲಿ ನಟಿಸಿದ್ದರು. ಅದರಲ್ಲಿ ಅವರ ಪಾತ್ರದ ಹೆಸರು ಕೂಡ ಬಾಲರಾಜು ಎಂದಾಗಿತ್ತು. ಈಗ ಅದೇ ಹೆಸರಿನ ಪಾತ್ರದಲ್ಲಿ ನಾಗೇಶ್ವರ ರಾವ್ ಮೊಮ್ಮಗ ನಟಿಸಿರುವುದು ಕೇಳಿ ನಾಗಾರ್ಜುನ ಭಾವುಕರಾದರು. ಅವರ ಕಣ್ಣೆದುರು ತಂದೆಯ ನೆನಪುಗಳು ಹಾದುಹೋದವು. 2014ರಲ್ಲಿ ಕ್ಯಾನ್ಸರ್​ನಿಂದ ನಾಗೇಶ್ವರ ರಾವ್​ ನಿಧನರಾದರು. ಆಗ ಅವರಿಗೆ 90 ವರ್ಷ ವಯಸ್ಸಾಗಿತ್ತು.

ಇದನ್ನೂ ಓದಿ:

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

ಮಗ-ಸೊಸೆಯ ಡಿವೋರ್ಸ್​ ತೀರ್ಮಾನಕ್ಕೆ ಹೇಗೆ ಸಹಾಯ ಮಾಡ್ತಿದ್ದಾರೆ ನಾಗಾರ್ಜುನ? ಟಾಲಿವುಡ್​ ಗಲ್ಲಿಯಲ್ಲಿ ಗುಸುಗುಸು

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್