ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಅವರ ಬಗ್ಗೆ ಹೊಸ ಅನುಮಾನ ಮೂಡಿದೆ. ಅವರು ಮತ್ತೆ ತಾಯಿ ಆಗುತ್ತಿದ್ದಾರೆ ಎಂಬ ಬಗ್ಗೆ ಗಾಸಿಪ್ ಹಬ್ಬಿದೆ. ಇಷ್ಟಕ್ಕೆಲ್ಲ ಕಾರಣ ಆಗಿರುವುದು ಒಂದೇ ಒಂದು ವಿಡಿಯೋ. ಹೌದು, ಐಶ್ವರ್ಯಾ ರೈ ಬಚ್ಚನ್ ಅವರು ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಅವರ ಜೊತೆ ಪುತ್ರಿ ಆರಾಧ್ಯಾ ಕೂಡ ಇದ್ದಳು. ಈ ವೇಳೆ ಐಶ್ವರ್ಯಾ ಧರಿಸಿದ್ದ ಬಟ್ಟೆ ಮತ್ತು ಅವರು ನಡೆದು ಬಂದ ರೀತಿ ನೋಡಿ ಅಭಿಮಾನಿಗಳ ಮನದಲ್ಲಿ ಪ್ರಶ್ನೆ ಮೂಡಿದೆ. ಅಮಿತಾಭ್ ಬಚ್ಚನ್ (Amitabh Bachchan) ಸೊಸೆ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ. ಪ್ರೆಗ್ನೆಂಟ್ (Aishwarya Rai Pregnant) ಹೌದೋ ಅಲ್ಲವೋ ಎಂಬ ಬಗ್ಗೆ ಕುಟುಂಬದ ಕಡೆಯಿಂದ ಸ್ಪಷ್ಟನೆ ಸಿಗಬೇಕಷ್ಟೇ.
ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಗ್ಲಾಮರಸ್ ಆಗಿ ಡ್ರೆಸ್ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಇತ್ತೀಚೆಗೆ ಐಶ್ವರ್ಯಾ ರೈ ಬಚ್ಚನ್ ಅವರು ಫ್ಯಾಮಿಲಿ ಜೊತೆ ನ್ಯೂಯಾರ್ಕ್ಗೆ ತೆರಳಿದ್ದರು. ವಾಪಸ್ ಬರುವಾಗ ಮುಂಬೈ ವಿಮಾನ ನಿಲ್ದಾಣದಲ್ಲಿ ಅವರ ಫೋಟೋ ಮತ್ತು ವಿಡಿಯೋ ಸೆರೆ ಹಿಡಿಯಲು ಪಾಪರಾಜಿಗಳು ಮುಗಿಬಿದ್ದಿದ್ದಾರೆ. ಈ ಸಮಯದಲ್ಲಿ ಐಶ್ವಯಾ ಧರಿಸಿದ್ದ ಡ್ರೆಸ್ ಹೈಲೈಟ್ ಆಗಿದೆ.
ಐಶ್ವರ್ಯಾ ರೈ ಅವರು ಉದ್ದನೆಯ ಗೌನ್ ರೀತಿಯ ಕಾಸ್ಟ್ಯೂಮ್ ಧರಿಸಿದ್ದಾರೆ. ಅದರ ಮೇಲೆ ಕಪ್ಪು ಬಣ್ಣದ ಕೋಟ್ ತೊಟ್ಟಿದ್ದಾರೆ. ಅದೂ ಸಾಲದೆಂಬಂತೆ, ಹೊಟ್ಟೆ ಭಾಗ ಕಾಣದ ರೀತಿಯಲ್ಲಿ ಕೈ ಅಡ್ಡ ಇಟ್ಟುಕೊಂಡೇ ನಡೆದುಬಂದಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಹಲವಾರು ಬಗೆಯಲ್ಲಿ ಕಮೆಂಟ್ ಮಾಡಲು ಆರಂಭಿಸಿದ್ದಾರೆ. ಐಶ್ವರ್ಯಾ ಪ್ರೆಗ್ನೆಂಟ್ ಆಗಿರುವುದರಿಂದಲೇ, ಬೇಬಿ ಬಂಪ್ ಕಾಣಬಾರದು ಎಂದು ಈ ರೀತಿ ನಡೆದುಕೊಂಡಿದ್ದಾರೆ ಎಂಬುದು ಹಲವರ ವಾದ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಒಂದೊಳ್ಳೆಯ ಕಮ್ಬ್ಯಾಕ್ ಪ್ರಾಜೆಕ್ಟ್ಗಾಗಿ ಐಶ್ವರ್ಯಾ ರೈ ಕಾಯುತ್ತಿದ್ದಾರೆ. ಈಗ ಅವರು ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಅದು ಸೆಪ್ಟೆಂಬರ್ 30ರಂದು ರಿಲೀಸ್ ಆಗಲಿದೆ. ಆ ಚಿತ್ರದಲ್ಲಿ ಅವರು ನಂದಿನಿ ಎಂಬ ರಾಣಿ ಪಾತ್ರ ಮಾಡಿದ್ದಾರೆ. ‘ಪೊನ್ನಿಯಿನ್ ಸೆಲ್ವನ್’ ಮೂಲಕ ಐಶ್ವರ್ಯಾ ಭರ್ಜರಿ ಗೆಲುವು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.
Published On - 7:19 am, Wed, 20 July 22