ಶ್ರೀಮಂತಿಕೆಯಿಂದ ತಾಯಿ ಕಳೆದುಕೊಂಡ ನಟ ಜಾಕಿ ಶ್ರಾಫ್
Jackie Shroff: ಜಾಕಿ ಶ್ರಾಫ್ ಅವರು ತಮ್ಮ ತಾಯಿ ರೀತಾ ಶ್ರಾಫ್ ಅವರನ್ನು 2014ರಲ್ಲಿ ಕಳೆದುಕೊಂಡಿದ್ದಾರೆ. ಐಷಾರಾಮಿ ಜೀವನಶೈಲಿ ಮತ್ತು ದೊಡ್ಡ ಮನೆಯಿಂದಾಗಿ ತಾಯಿಯೊಂದಿಗಿನ ಸಂಬಂಧ ದೂರವಾಯಿತು ಎಂದು ಅವರು ವಿಷಾದಿಸುತ್ತಾರೆ. ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದಾಗ ತಾಯಿಯೊಂದಿಗಿನ ನಿಕಟ ಸಂಬಂಧವಿತ್ತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ದೊಡ್ಡ ಮನೆಯಿಂದಾಗಿ ಅವರ ನಡುವಿನ ಸಂಬಂಧ ಬಿಗಡಾಯಿತು ಎಂದು ಅವರು ಹೇಳುತ್ತಾರೆ.

ಜಾಕಿ ಶ್ರಾಫ್ ಅವರು ಬಾಲಿವುಡ್ನ (Bollywood) ಯಶಸ್ವಿ ನಟ ಎನಿಸಿಕೊಂಡಿದ್ದಾರೆ. ಅವರು ದಕ್ಷಿಣದಲ್ಲೂ ನಟಿಸುತ್ತಿದ್ದಾರೆ. ಅವರ ತಾಯಿ ರೀತಾ ಶ್ರಾಫ್ 2014ರಲ್ಲಿ ಹಾರ್ಟ್ಗೆ ಸಂಬಂಧಿಸಿದ ಕಾಯಿಲೆಯಿಂದ ನಿಧನ ಹೊಂದಿದರು. ಅವರು ನಿಧನ ಹೊಂದಲು ತಮ್ಮ ಐಷಾರಾಮಿ ಜೀವನ ಕಾರಣ ಎಂದು ಹೇಳಿದ್ದಾರೆ. ಮೊದಲಿನ ರೀತಿಯ ಜೀವನ ಇದ್ದಿದ್ದರೆ ಬಹುಶಃ ತಾಯಿಯನ್ನು ಉಳಿಸಿಕೊಳ್ಳಬಹುದಿತ್ತು ಎಂದು ಅವರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಜಾಕಿ ಶ್ರಾಫ್ ಅವರ ರೀತಾ ಶ್ರಾಫ್ಗೆ 2014ರಲ್ಲಿ ಹಾರ್ಟ್ ಸ್ಟ್ರೋಕ್ ಆಯಿತು. ಇವರು ಸಣ್ಣವರಿದ್ದಾಗ ಸಣ್ಣ ಮನೆಯಲ್ಲಿ ವಾವಾಗಿದ್ದರು. ಆ ವೇಳೆ ಏನೇ ಆದರೂ ಒಬ್ಬರಿಗೊಬ್ಬರು ಕೇಳಿಕೊಳ್ಳಲಾಗುತ್ತಿತ್ತು. ಆದರೆ, ಯಾವಾಗ ದೊಡ್ಡ ಮನೆಗೆ ತೆರಳಿದರೋ ಆಗ ಎಲ್ಲವೂ ಬದಲಾಯಿತು ಎಂದು ಅವರು ಹೇಳಿದ್ದಾರೆ.
‘ನಾವು ಸಣ್ಣ ಮನೆಯಲ್ಲಿ ವಾಸವಾಗಿದ್ದೆವು. ನನಗೆ ಕೆಮ್ಮು ಬಂದರೆ ಅವರು ಏನಾಯಿತು ಎಂದು ಕೇಳುತ್ತಿದ್ದರು. ಅಮ್ಮನಿಗೆ ತೊಂದರೆ ಆದರೆ ಎಲ್ಲರೂ ಕೇಳುತ್ತಿದ್ದರು. ವರ್ಷ ಕಳೆದಂತೆ ಇಂಡಸ್ಟ್ರಿಯಲ್ಲಿ ನಾನು ಹಣ ಮಾಡಿದೆ. ದೊಡ್ಡ ಮನೆ ಮಾಡಿದೆ. ಅಮ್ಮನಿಗೆ ವಿಶೇಷ ಬೆಡ್ರೂಂ ಕೊಟ್ಟೆ ಎಂದು ಖುಷಿ ಆಯಿತು. ನಮ್ಮಿಬ್ಬರ ಮಧ್ಯೆ ಗೋಡೆ ಬಂತು’ ಎಂದಿದ್ದಾರೆ ಜಾಕಿ.
ಇದನ್ನೂ ಓದಿ:ಬಾಲಿವುಡ್ನ ಹೊಸ ಯುವ ಜೋಡಿ, ಕಾರ್ತಿಕ್ ಜೊತೆಗೆ ಕನ್ನಡತಿ ಶ್ರೀಲೀಲಾ ಡೇಟಿಂಗ್
‘ಅಮ್ಮನಿಗೆ ವಿಶೇಷ ಬೆಡ್ರೂಂ ಮಾಡಿದೆ ಎಂದು ಖುಷಿ ಆಯಿತು. ಅಮ್ಮನಿಗೆ ಒಂದು ರಾತ್ರಿ ಹಾರ್ಟ್ ಅಟ್ಯಾಕ್ ಆಯಿತು. ರೂಂನಲ್ಲಿ ಗೋಡೆ ಇಲ್ಲದೆ ಇದ್ದಿದ್ದರೆ ಅವರು ಬದುಕುತ್ತಿದ್ದರು. ನಾನು ಹಣ ಏನೋ ಮಾಡಿದೆ. ಆದರೆ, ಮಧ್ಯಯದಲ್ಲಿ ಗೋಡೆ ಬಂತು. ಸಂಬಂಧ ಕಡಿದು ಹೋಯ್ತು’ ಎಂದು ಅವರು ಹೇಳಿದ್ದಾರೆ.
ಈ ವಿಡಿಯೋಗೆ ವಿವಿಧ ಕಮೆಂಟ್ಗಳು ಬಂದಿವೆ. ಜಾಕಿಗೆ ಸಾಕಷ್ಟು ಹಣ ಬಂದಿರಬಹುದು. ಆದರೆ, ಅವರು ಈಗಲೂ ಸಂಬಂಧಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ ಎಂದಿದ್ದಾರೆ. ಜಾಕಿ ಶ್ರಾಫ್ಗೆ ಈಗ 68 ವರ್ಷ. ಅವರು ಕನ್ನಡದಲ್ಲೂ ಸಿನಿಮಾ ಮಾಡಿದ್ದಾರೆ. ‘ಅಣ್ಣಾ ಬಾಂಡ್’ ಅವರು ನಟಿಸಿದ ಯಶಸ್ವಿ ಚಿತ್ರಗಳಲ್ಲಿ ಒಂದು. ‘ಗುಡ್ ಬ್ಯಾಡ್ ಅಗ್ಲಿ’ ಅವರು ನಟಿಸಿದ ಇತ್ತೀಚಿನ ಚಿತ್ರ. ಇದು ತಮಿಳಿನ ಅಜಿತ್ ನಟನೆಯ ಸಿನಿಮಾ. ಹಿಂದಿಯಲ್ಲಿ ಅವರು ಅಕ್ಷಯ್ ಕುಮಾರ್ ಅವರ ‘ವೆಲ್ಕಮ್ಟು ಜಂಗಲ್’ ಚಿತ್ರ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



