ನಷ್ಟದಲ್ಲಿಲ್ಲ ಪೂಜಾ ಎಂಟರ್​ಟೇನ್​ಮೆಂಟ್; ಲಾಭ ಕಂಡ ರಕುಲ್ ಪತಿಯ ಸಂಸ್ಥೆ

ಬಾಲಿವುಡ್​ನಲ್ಲಿ ಪೂಜಾ ಎಂಟರ್​ಟೇನ್​ಮೆಂಟ್ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಅಕ್ಷಯ್ ಕುಮಾರ್ ಸಿನಿಮಾಗಳನ್ನು ಹೆಚ್ಚೆಚ್ಚು ನಿರ್ಮಿಸಿ ಈ ಸಂಸ್ಥೆ ನಷ್ಟ ಅನುಭವಿಸಿದೆ. ‘ಬಡೇ ಮಿಯಾ ಚೋಟೆ ಮಿಯಾ’, ‘ಗಣಪತ್’, ‘ಮಿಷನ್ ರಾಣಿಗಂಜ್​’ ರೀತಿಯ ಸಿನಿಮಾಗಳು ನಿರ್ಮಾಣ ಸಂಸ್ಥೆಗೆ ಹೊರೆಯಾಗಿದೆ.

ನಷ್ಟದಲ್ಲಿಲ್ಲ ಪೂಜಾ ಎಂಟರ್​ಟೇನ್​ಮೆಂಟ್; ಲಾಭ ಕಂಡ ರಕುಲ್ ಪತಿಯ ಸಂಸ್ಥೆ
ರಕುಲ್-ಜಾಕಿ
Follow us
ರಾಜೇಶ್ ದುಗ್ಗುಮನೆ
|

Updated on: Jul 02, 2024 | 12:58 PM

ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ಪೂಜಾ ಎಂಟರ್​ಟೇನ್​ಮೆಂಟ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದೆ. ಈ ಸಂಸ್ಥೆಯ ವಶು ಭಗ್ನಾನಿ ಹಾಗೂ ಜಾಕಿ ಭಗ್ನಾನಿಗೆ ಸಂಕಷ್ಟ ಉಂಟಾಗಿದೆ ಎನ್ನಲಾಗಿದೆ. 250 ಕೋಟಿ ರೂಪಾಯಿ ಸಾಲ ತೀರಿಸಲು ಮುಂಬೈನ ಎಳಂತಸ್ತಿನ ಕಚೇರಿಯನ್ನು ಇವರು ಮಾರಾಟ ಮಾಡಿದರು ಎಂದು ಕೂಡ ವರದಿ ಆಗಿದೆ. ಈಗ 2023-24ನೇ ಸಾಲಿನ ಇವರ ಲಾಭ-ನಷ್ಟದ ಲೆಕ್ಕ ಸಿಕ್ಕಿದೆ. ಈ ವರದಿ ಗಮನ ಸೆಳೆದಿದೆ.

ಪೂಜಾ ಎಂಟರ್​ಟೇನ್​ಮೆಂಟ್ ಬಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಆ್ಯಕ್ಟೀವ್ ಆಗಿದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಸಿನಿಮಾಗಳನ್ನು ಹೆಚ್ಚೆಚ್ಚು ನಿರ್ಮಿಸಿ ಈ ಸಂಸ್ಥೆ ಕೈ ಸುಟ್ಟುಕೊಂಡಿದೆ. ‘ಬಡೇ ಮಿಯಾ ಚೋಟೆ ಮಿಯಾ’, ‘ಗಣಪತ್’, ‘ಮಿಷನ್ ರಾಣಿಗಂಜ್​’ ರೀತಿಯ ಸಿನಿಮಾಗಳು ನಿರ್ಮಾಣ ಸಂಸ್ಥೆಗೆ ಹೊರೆಯಾಗಿದೆ. ಆದರೆ, ಸಾಲದ ವಿಚಾರವನ್ನು ವಶು ಅವರು ಅಲ್ಲಗಳೆದಿದ್ದಾರೆ. ಈ ಮಧ್ಯೆ ಸಂಸ್ಥೆ ಲಾಭದಲ್ಲಿದೆ ಎಂದು ವರದಿ ಆಗಿದೆ.

ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಪೂಜಾ ಎಂಟರ್​ಟೇನ್​ಮೆಂಟ್ ಲಾಭದಲ್ಲಿದೆ. 2023-24ನೇ ಆರ್ಥಿಕ ವರ್ಷದಲ್ಲಿ ಪೂಜಾ ಎಂಟರ್​ಟೇನ್​ಮೆಂಟ್ 58.07 ಕೋಟಿ ಆದಾಯ ಗಳಿಸಿದೆ. ಇತರ ಖರ್ಚುಗಳನ್ನು ಕಳೆದರೆ ಈ ಚಿತ್ರದಿಂದ ಸಂಸ್ಥೆಗೆ ಆದ ಲಾಭ ಕೇವಲ 8 ಕೋಟಿ ರೂಪಾಯಿ. 2022-23ನೇ ಸಾಲಿನಲ್ಲಿ ಆದಾಯ 46.6 ಕೋಟಿ ರೂಪಾಯಿ ಇತ್ತು ಮತ್ತು ಲಾಭ ಕೇವ 2.86 ಕೋಟಿ ರೂಪಾಯಿ ಆಗಿತ್ತು.

ಷೇರು ಮಾರುಕಟ್ಟೆಯಲ್ಲಿ ಪೂಜಾ ಎಂಟರ್​ಟೇನ್​ಮೆಂಟ್ (Vashu Bhagnani Industries Ltd) ಷೇರು ನಷ್ಟ ಅನುಭವಿಸುತ್ತಿದೆ. ಸೋಮವಾರ ಹಾಗೂ ಮಂಗಳವಾರ ಈ ಸಂಸ್ಥೆಯ ಷೇರುಗಳು ನಷ್ಟ ಅನುಭವಿಸುತ್ತಿವೆ. ಈ ಸಂಸ್ಥೆಯ ಷೇರಿನ ಬೆಲೆ 406 ರೂಪಾಯಿ ತಲುಪಿತ್ತು. ಈಗ 283 ರೂಪಾಯಿಗೆ ಇಳಿದಿದೆ.

ಇದನ್ನೂ ಓದಿ: ತಮ್ಮ ಸಿನಿಮಾ ನಿರ್ಮಿಸಿ ಕೈ ಸುಟ್ಟುಕೊಂಡ ನಿರ್ಮಾಪಕನಿಗೆ ಅಕ್ಷಯ್​ ಕುಮಾರ್ ಸಹಾಯ

‘ಬಡೇ ಮಿಯಾ ಚೋಟೆ ಮಿಯಾ’ ಚಿತ್ರದ ಸಂಭಾವನೆಯನ್ನು ಈಗಲೇ ನೀಡೋದು ಬೇಡ ಎಂದು ಅಕ್ಷಯ್ ಹೇಳಿದ್ದಾರಂತೆ. ‘ಅಕ್ಷಯ್ ಕುಮಾರ್​ ಇತ್ತೀಚೆಗೆ ಭೇಟಿ ಆಗಿದ್ದರು. ಸಿನಿಮಾಗಾಗಿ ಕೆಲಸ ಮಾಡಿದ ಎಲ್ಲರಿಗೂ ಸಂಬಳ ನೀಡುವ ತನಕ ತಮ್ಮ ಸಂಭಾವನೆಯನ್ನು ನೀಡುವುದು ಬೇಡ ಅಂತ ಅವರು ಹೇಳಿದ್ದಾರೆ. ನಮ್ಮ ಸಂದರ್ಭವನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಅಕ್ಷಯ್​ ಕುಮಾರ್ ಅವರಿಗೆ ಧನ್ಯವಾದಗಳು’ ಎಂದು ಜಾಕಿ ಭಗ್ನಾನಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.