ಆಸ್ಪತ್ರೆಗೆ ಓಡೋಡಿ ಬಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್; ಐಸಿಯುನಲ್ಲಿ ತಾಯಿ

ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ತಾಯಿ ಕಿಮ್ ಫರ್ನಾಂಡಿಸ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರು ಬೇರೆ ಎಲ್ಲ ಕೆಲಸಗಳನ್ನು ಬಿಟ್ಟು ಆಸ್ಪತ್ರೆಗೆ ಬಂದಿದ್ದಾರೆ. ವೈದ್ಯರು ಸದ್ಯದಲ್ಲೇ ಕಿಮ್ ಅವರ ಹೆಲ್ತ್ ಅಪ್​ಡೇಟ್ ನೀಡಲಿದ್ದಾರೆ.

ಆಸ್ಪತ್ರೆಗೆ ಓಡೋಡಿ ಬಂದ ನಟಿ ಜಾಕ್ವೆಲಿನ್ ಫರ್ನಾಂಡಿಸ್; ಐಸಿಯುನಲ್ಲಿ ತಾಯಿ
Jacqueline Fernandez Kim Fernandez

Updated on: Apr 02, 2025 | 6:17 PM

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರ ಮನೆಯಲ್ಲಿ ದುಃಖದ ವಾತಾವರಣ ನಿರ್ಮಾಣ ಆಗಿದೆ. ಅವರ ತಾಯಿಗೆ ತೀವ್ರ ಅನಾರೋಗ್ಯ ಉಂಟಾಗಿದೆ. ಇತ್ತೀಚೆಗೆ ಜಾಕ್ವೆಲಿನ್ ಫರ್ನಾಂಡಿಸ್ ತಾಯಿ ಕಿಮ್ ಫರ್ನಾಂಡಿಸ್ ( Kim Fernandez) ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಅವರ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎನ್ನಲಾಗಿದೆ. ಆದ್ದರಿಂದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿಯನ್ನು (Jacqueline Fernandez Mother) ನೋಡಲು ಜಾಕ್ವೆಲಿನ್ ಫರ್ನಾಂಡಿಸ್ ಅವರು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. ಅವರ ಮುಖದಲ್ಲಿ ಚಿಂತೆ ಕಾಣಿಸುತ್ತಿದೆ.

ಮೂಲಗಳ ಪ್ರಕಾರ, ಕಿಮ್ ಫರ್ನಾಂಡಿಸ್ ಅವರಿಗೆ ಹಾರ್ಟ್​ ಸ್ಟ್ರೋಕ್ ಆಗಿದೆ. ಪರಿಸ್ಥಿತಿ ಗಂಭೀರ ಆಗಿರುವುದರಿಂದ ಜಾಕ್ವೆಲಿನ್ ಫರ್ನಾಂಡಿಸ್ ಕುಟುಂಬದವರಿಗೆ ಆತಂಕ ಆಗಿದೆ. ಈಗಾಗಲೇ ಕಿಮ್ ಫರ್ನಾಂಡಿಸ್ ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ಕೂಡ ಹಬ್ಬಿದೆ. ಆದರೆ ಈ ಬಗ್ಗೆ ಕುಟುಂಬದವರು ಮತ್ತು ವೈದ್ಯರು ಅಧಿಕೃತ ಮಾಹಿತಿ ನೀಡಬೇಕಿದೆ.

ಇದನ್ನೂ ಓದಿ
ಜಾಕ್ವೆಲಿನ್ ಫರ್ನಾಂಡಿಸ್ ಹಿನ್ನೆಲೆ ಎಷ್ಟು ಕಾಂಪ್ಲಿಕೇಟ್ ಆಗಿದೆ ನೋಡಿ
‘ವಂಚನೆ ಹಣದಲ್ಲಿ ಗಿಫ್ಟ್ ಕೊಟ್ಟ ಅಂತ ನನಗೆ ಗೊತ್ತಿರಲಿಲ್ಲ’: ಜಾಕ್ವೆಲಿನ್
ಜಾಕ್ವೆಲಿನ್​ಗೆ ಬಿಟ್ಟು ಬಿಡದೇ ಕಾಡುತ್ತಿರುವ ಸುಕೇಶ್; ಮತ್ತೊಂದು ಪ್ರೇಮಪತ್ರ
ಸದ್ದಿಲ್ಲದೆ ಹಾಲಿವುಡ್​ಗೆ ಹಾರಿದ ಜಾಕ್ವೆಲಿನ್ ಫರ್ನಾಂಡೀಸ್

ಸಲ್ಮಾನ್ ಖಾನ್ ಅವರ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಆಪ್ತವಾಗಿದ್ದಾರೆ. ನಟಿಯ ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್ ಖಾನ್ ನೆರವಾಗಿದ್ದಾರೆ ಎನ್ನಲಾಗಿದೆ. ಭಾನುವಾರ (ಮಾರ್ಚ್​ 30) ಸಲ್ಮಾನ್ ಖಾನ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಹಾಗೆಯೇ ಚಿತ್ರರಂಗದ ಕೆಲವು ಆಪ್ತರು ಕೂಡ ಜಾಕ್ವೆಲಿನ್ ಅವರಿಗೆ ಈ ಸಂದರ್ಭದಲ್ಲಿ ನೆರವಾಗುತ್ತಿದ್ದಾರೆ.

ತಾಯಿಗೇ ಏಕಾಏಕಿ ಆರೋಗ್ಯ ಕೈಕೊಟ್ಟಿರುವುದರಿಂದ ಜಾಕ್ವೆಲಿನ್ ಫರ್ನಾಂಡಿಸ್ ಅವರು ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು ಆಸ್ಪತ್ರೆಗೆ ಬಂದಿದ್ದಾರೆ. ಈ ಮೊದಲು ಒಪ್ಪಿಕೊಂಡು ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. ಅದನ್ನು ಗಮನಿಸಿದರೆ ಕಿಮ್ ಫರ್ನಾಂಡಿಸ್ ಅವರ ಪರಿಸ್ಥಿತಿ ತುಂಬ ಬಿಗಡಾಯಿಸಿದೆ ಎಂಬುದು ಖಚಿತ.

ಇದನ್ನೂ ನೋಡಿ: ಮಲ್ಲಿಗೆ ಹೂವಿನಲ್ಲೇ ಮುಳುಗೆದ್ದ ಜಾಕ್ವೆಲಿನ್ ಫರ್ನಾಂಡಿಸ್

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಖತ್ ಬ್ಯುಸಿ ನಟಿ. ಹಿಂದಿ ಮಾತ್ರವಲ್ಲದೇ ಬೇರೆ ಭಾಷೆಯ ಚಿತ್ರರಂಗದಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಕನ್ನಡದ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಕೂಡ ಅವರೊಂದು ಚಿಕ್ಕ ಪಾತ್ರ ಮಾಡಿದ್ದರು. ‘ರಾ ರಾ ರಕ್ಕಮ್ಮ’ ಹಾಡಿನಲ್ಲಿ ಅವರು ಭರ್ಜರಿಯಾಗಿ ಕುಣಿದಿದ್ದರು. ಬಾಲಿವುಡ್​ನ ಹಲವು ಸಿನಿಮಾಗಳಲ್ಲಿ ನಟಿಸಿ ಅವರು ಸೈ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.