
ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೊಸ ಮ್ಯೂಸಿಕ್ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸೋನು ತುಕ್ರಾಲ್ ಮತ್ತು ಬಿ ಪ್ರಾಕ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡು ಜುಲೈ 15 ರಂದು ಬಿಡುಗಡೆಯಾಗಿದೆ. ಹಾಡು ಬಿಡುಗಡೆಯಾದ ಬೆನ್ನಲ್ಲೇ, ನಟಿಯ ಬಟ್ಟೆಯ ಮುಜುಗರದ ಕ್ಷಣದ ಕುರಿತು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದರಿಂದ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹಾಡಿನ ಒಂದು ಸಣ್ಣ ಭಾಗದಲ್ಲಿ ಜಾಕ್ವೆಲಿನ್ ಅವರ ಮುಜುಗರದ ಕ್ಷಣ ಸೆರೆಯಾಗಿದೆ ಎಂದು ನೆಟ್ಟಿಗರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ಕ್ಲಿಪ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಆದರೆ, ವಿವಾದ ಬೆಳೆಯುತ್ತಿದ್ದಂತೆ ಯೂಟ್ಯೂಬ್‌ನಲ್ಲಿ ಆ ನಿರ್ದಿಷ್ಟ ಭಾಗವನ್ನು ಬ್ಲರ್ ಮಾಡಲಾಗಿದೆ. ಇದು ಅಭಿಮಾನಿಗಳ ಗಮನಕ್ಕೆ ಬಂದಿದೆ.
ವಿಡಿಯೋ ವೈರಲ್ ಆದ ನಂತರ ಚಿತ್ರತಂಡ ಈ ತಪ್ಪು ತಿದ್ದಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಇಡೀ ಘಟನೆಯ ಬಗ್ಗೆ ಜಾಕ್ವೆಲಿನ್ ಫರ್ನಾಂಡಿಸ್ ಆಗಲಿ ಅಥವಾ ವಿಡಿಯೋ ನಿರ್ಮಾಪಕರಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
Jacqueline Fernandez Nip Slip from Jugni Song pic.twitter.com/ixdTTNuHvD
— Batenal (@BatenalPep) July 17, 2026
ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ನಟನೆಯ ‘ವೆಲ್‌ಕಮ್ ಟು ದಿ ಜಂಗಲ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ದೊಡ್ಡ ತಾರಾಗಣದ ಸಿನಿಮಾವಾಗಿದ್ದು, ಸುನಿಲ್ ಶೆಟ್ಟಿ, ದಿಶಾ ಪಟಾನಿ, ಅರ್ಷದ್ ವಾರ್ಸಿ, ರವೀನಾ ಟಂಡನ್ ಮತ್ತು ಪರೇಶ್ ರಾವಲ್ ಸೇರಿದಂತೆ ಬಾಲಿವುಡ್‌ನ ಪ್ರಮುಖ ನಟರು ಈ ಚಿತ್ರದಲ್ಲಿದ್ದಾರೆ.
ಇದನ್ನೂ ಓದಿ: ಸುಕೇಶ್ ಚಂದ್ರಶೇಖರ್ ಕೇಸ್: ಸುಪ್ರೀಂ ಕೋರ್ಟ್‌ನಿಂದ ಅರ್ಜಿ ಹಿಂಪಡೆದ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಇನ್ನು 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಸಿಲುಕಿಕೊಂಡಿದ್ದಾರೆ. ಈ ಪ್ರಕರಣ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಪ್ರಕರಣದ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಡೇಟಿಂಗ್ ಮಾಡುತ್ತಾ ಇದ್ದಿದ್ದೇ ಅವರಿಗೆ ಸಮಸ್ಯೆ ತಂದೊಡ್ಡಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.