ನಟಿ ಜಾನ್ವಿ ಕಪೂರ್ (Janhvi Kapoor) ಅವರು ಬಾಲಿವುಡ್ನಲ್ಲಿ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಮೊದಲ ಸಿನಿಮಾ ‘ಧಡಕ್’ ಚಿತ್ರ (Dhadak Movie) ಸಾಧಾರಣ ಯಶಸ್ಸು ಕಂಡಿದ್ದು ಹೊರತುಪಡಿಸಿ ಅವರ ಬೇರೆ ಯಾವುದೇ ಸಿನಿಮಾ ಹೇಳಿಕೊಳ್ಳುವಂತಹ ಗೆಲುವು ಕಂಡಿಲ್ಲ. ಸಿನಿಮಾ ಗೆಲ್ಲದೇ ಇರುವುದಕ್ಕೆ ಅನೇಕರು ಜಾನ್ವಿ ಅವರನ್ನು ದೂರಿದ್ದೂ ಇದೆ. ಇನ್ನು ರಿಲೇಶನ್ಶಿಪ್ ಸ್ಟೇಟಸ್ ವಿಚಾರದಲ್ಲಿ ಜಾನ್ವಿ ಗುಟ್ಟು ಕಾಯ್ದುಕೊಂಡಿದ್ದಾರೆ. ಆದರೆ, ಈಗ ಅವರು ಪೋಸ್ಟ್ ಮಾಡಿರುವ ಹೊಸ ಫೋಟೋ ಸಾಕಷ್ಟು ಗಮನ ಸೆಳೆಯುತ್ತಿದೆ. ಎಕ್ಸ್ ಬಾಯ್ಫ್ರೆಂಡ್ ಫೋಟೋ ಪೋಸ್ಟ್ ಮಾಡಿರುವ ಜಾನ್ವಿ, ಲವ್ ಯೂ ಎಂದಿದ್ದಾರೆ.
ಜಾನ್ವಿ ಅವರು ಅಕ್ಷತ್ ರಾಜನ್ ಜತೆ ರಿಲೇಶನ್ಶಿಪ್ನಲ್ಲಿದ್ದರು ಎನ್ನಲಾಗಿತ್ತು. ಇಬ್ಬರೂ ಬಾಲ್ಯದ ಗೆಳೆಯರು. ಇವರ ಮಧ್ಯೆ ಪ್ರೀತಿ ಚಿಗುರಿತ್ತು. ಅನೇಕ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಆದರೆ, ಬಳಿಕ ಜಾನ್ವಿ ಹಾಗೂ ಅಕ್ಷತ್ ಬೇರೆ ಆದರು. ಈಗ ಅಚ್ಚರಿ ಎಂಬಂತೆ ರಾಜನ್ಗೆ ಬರ್ತ್ಡೇ ವಿಶ್ ಮಾಡಿದ್ದಾರೆ ಜಾನ್ವಿ.
ಜಾನ್ವಿ ಕಪೂರ್ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅಕ್ಷತ್ ಅವರು ಕೇಕ್ ಕಟ್ ಮಾಡುತ್ತಿದ್ದಾರೆ. ಇದಕ್ಕೆ ‘ನನ್ನ ಹೃದಯವೇ ನಿನಗೆ ಹುಟ್ಟು ಹಬ್ಬದ ಶುಭಾಶಯ. ನಿನಗೆ ಒಂದು ಮುತ್ತು. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಜಾನ್ವಿ ಬರೆದುಕೊಂಡಿದ್ದಾರೆ. ಈ ಸ್ಟೇಟಸ್ ರೀ-ಪೋಸ್ಟ್ ಮಾಡಿಕೊಂಡಿರುವ ಅಕ್ಷತ್ ‘ಐ ಲವ್ ಯೂ ಟೂ’ ಎಂದಿದ್ದಾರೆ.
ಜಾನ್ವಿ ಕಪೂರ್ ಅವರು ಖಾಸಗಿ ಬದುಕನ್ನು ಫ್ಯಾನ್ಸ್ ಮುಂದೆ ತೆರೆದಿಡಲು ಹೆಚ್ಚು ಇಷ್ಟಪಡುವುದಿಲ್ಲ. ಈ ಕಾರಣಕ್ಕೆ ಅವರು ರಿಲೇಶನ್ಶಿಪ್ನಲ್ಲಿದ್ದಾರೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಇದೆ. ಆದರೆ, ಈಗ ಜಾನ್ವಿ ಕಪೂರ್ ಅವರ ಹೊಸ ಪೋಸ್ಟ್ ಸಾಕಷ್ಟು ಅನುಮಾನ ಮೂಡಿಸಿದೆ. ಇವರಿಬ್ಬರ ಮಧ್ಯೆ ಗೆಳೆತನ ಇದೆಯೋ ಅಥವಾ ಪ್ರೀತಿಯೋ ಎಂಬ ಗೊಂದಲ ಮೂಡಿದೆ.
ಇದನ್ನೂ ಓದಿ: 44 ಕೋಟಿ ರೂಪಾಯಿಗೆ ಮನೆ ಮಾರಿಕೊಂಡ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್; ಖರೀದಿಸಿದ ಹೀರೋ ಯಾರು?
ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾನ್ವಿ ಕಪೂರ್ ಅವರು ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಗುಡ್ಲಕ್ ಜೆರ್ರಿ’ ಸಿನಿಮಾ ಇತ್ತೀಚೆಗೆ ಒಟಿಟಿಯಲ್ಲಿ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆಯಿತು. ವರುಣ್ ಧವನ್ ಜತೆ ‘ಬವಾಲ್’ ಸಿನಿಮಾದಲ್ಲಿ ಜಾನ್ವಿ ನಟಿಸುತ್ತಿದ್ದಾರೆ. ‘ಮಿಸ್ಟರ್ ಆ್ಯಂಡ್ ಮಿಸಸ್ ಮಾಹಿ’ ಚಿತ್ರದ ಕೆಲಸದಲ್ಲೂ ಅವರು ಬ್ಯುಸಿ ಆಗಿದ್ದಾರೆ.
Published On - 6:55 pm, Thu, 15 September 22