ಮುಂಬೈನಲ್ಲಿ ಜಾನ್ ಅಬ್ರಹಾಂ ಹೊಸ ಬಂಗಲೆ; 84 ಕೋಟಿ ರೂ. ಆಸ್ತಿ ಖರೀದಿಸಿದ ಬಾಲಿವುಡ್ ನಟ

ಬಾಲಿವುಡ್ ನಟ ಜಾನ್ ಅಬ್ರಹಾಂ ಮುಂಬೈನ ಬಾಂದ್ರಾ ವೆಸ್ಟ್‌ನಲ್ಲಿ 84 ಕೋಟಿ ರೂ. ಬೆಲೆಯ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ. ಈ ಬೃಹತ್ ಆಸ್ತಿ 1,017 ಚದರ ಮೀಟರ್ ವಿಸ್ತೀರ್ಣದಲ್ಲಿದೆ. ಇತ್ತೀಚಿನ ಈ ಡೀಲ್ ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಗಣ್ಯರ ಬೃಹತ್ ಖರೀದಿ ಟ್ರೆಂಡ್‌ಗೆ ಸಾಕ್ಷಿಯಾಗಿದೆ. ಜುಹು, ಮಲಬಾರ್ ಹಿಲ್ಸ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ವಹಿವಾಟುಗಳು ಹೆಚ್ಚುತ್ತಿವೆ.

ಮುಂಬೈನಲ್ಲಿ ಜಾನ್ ಅಬ್ರಹಾಂ ಹೊಸ ಬಂಗಲೆ; 84 ಕೋಟಿ ರೂ. ಆಸ್ತಿ ಖರೀದಿಸಿದ ಬಾಲಿವುಡ್ ನಟ
ಜಾನ್ ಅಬ್ರಹಾಂ
Edited By:

Updated on: Jul 21, 2026 | 7:59 AM

ಮುಖ್ಯಾಂಶಗಳು

  • ಕೋಟಿ ಕೋಟಿ ಸುರಿದ ಬಾಲಿವುಡ್ ಸ್ಟಾರ್
  • ಬರೋಬ್ಬರಿ 5 ಕೋಟಿಗೂ ಅಧಿಕ ಸ್ಟಾಂಪ್ ಡ್ಯೂಟಿ ಕಟ್ಟಿದ ಜಾನ್ ಅಬ್ರಹಾಂ
  • ಖಾರ್ ಏರಿಯಾ ಬೆನ್ನಲ್ಲೇ ಈಗ ಬಾಂದ್ರಾ ವೆಸ್ಟ್ ಸರದಿ

ಬಾಲಿವುಡ್ ನಟ ಜಾನ್ ಅಬ್ರಹಾಂ (John Abraham) ಮುಂಬೈನಲ್ಲಿ ಭರ್ಜರಿ ಆಸ್ತಿ ಖರೀದಿಸಿದ್ದಾರೆ. ಬಾಂದ್ರಾ ವೆಸ್ಟ್‌ನಲ್ಲಿ ಒಂದು ಐಷಾರಾಮಿ ಬಂಗಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದರ ಬೆಲೆ ಬರೋಬ್ಬರಿ 84 ಕೋಟಿ ರೂಪಾಯಿ. ಇತ್ತೀಚೆಗಷ್ಟೇ ಅಂದರೆ ಜುಲೈ 14, 2026 ರಂದು ಈ ಬಂಗಲೆ ರಿಜಿಸ್ಟರ್ ಆಗಿದೆ. ಈ ಒಂದು ಡೀಲ್‌ಗಾಗಿ ಜಾನ್ ಅಬ್ರಹಾಂ 5.04 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಕಟ್ಟಿದ್ದಾರೆ. ಇನ್ನು ಈ ಪ್ರಾಪರ್ಟಿ ಒಟ್ಟು 1,017.60 ಚದರ ಮೀಟರ್ ವಿಸ್ತೀರ್ಣದಲ್ಲಿದೆ. ಇದರಲ್ಲಿ ದೊಡ್ಡ ಬಂಗಲೆ ಜೊತೆಗೆ ಒಂದು ಔಟ್‌ಹೌಸ್ ಕೂಡ ಇದೆ. ನೋಶಿರ್ ಎರುಚ್ ಡಿವಿಟ್ರೆ ಎಂಬುವವರಿಂದ ನಟ ಇದನ್ನು ಕೊಂಡುಕೊಂಡಿದ್ದಾರೆ.

ಜಾನ್ ಅಬ್ರಹಾಂಗೆ ಮುಂಬೈನಲ್ಲಿ ಬಂಗಲೆ ಖರೀದಿಸುತ್ತಿರುವುದು ಇದೇ ಮೊದಲೇನಲ್ಲ. 2023ರ ಡಿಸೆಂಬರ್‌ನಲ್ಲೂ ಅವರು ಖಾರ್ ಏರಿಯಾದಲ್ಲಿ ಒಂದು ಮನೆ ಖರೀದಿಸಿದ್ದರು. ಅದಕ್ಕೆ 70.83 ಕೋಟಿ ರೂಪಾಯಿ ಖರ್ಚು ಮಾಡಿದ್ದರು.

ಮುಂಬೈನಲ್ಲಿ ಬಿರುಸು ಪಡೆದ ಬಂಗಲೆ ಖರೀದಿ ಬೇಟೆ

ಮುಂಬೈನ ಪ್ರಮುಖ ಏರಿಯಾಗಳಾದ ಬಾಂದ್ರಾ, ಜುಹು ಮತ್ತು ಮಲಬಾರ್ ಹಿಲ್ಸ್‌ನಲ್ಲಿ ಜಾಗ ಸಿಗುವುದು ತುಂಬಾ ಅಪರೂಪವಾಗಿದೆ. ಸ್ವತಂತ್ರ ಬಂಗಲೆಗಳಂತೂ ಸಿಗುತ್ತಲೇ ಇಲ್ಲ. ಹೀಗಾಗಿಯೇ ಇವುಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಬಂದಿದೆ. ರೇಟ್ ಕೂಡ ಕೋಟಿ ಕೋಟಿ ದಾಟುತ್ತಿದೆ.

ಇದನ್ನೂ ಓದಿ: ‘ಧುರಂಧರ್’ ವಿರುದ್ಧ ಗರಂ ಆದ್ರಾ ಜಾನ್ ಅಬ್ರಹಾಂ ? ವೈರಲ್ ಸುದ್ದಿಯ ಅಸಲಿಯತ್ತು ಇಲ್ಲಿದೆ

ಇತ್ತೀಚೆಗಷ್ಟೇ ಜುಹು ಪ್ರದೇಶದಲ್ಲಿರುವ ‘ವಿಲ್ಲಾ ವಿಲ್ಸನ್’ ಎಂಬ ಬಂಗಲೆ 135 ಕೋಟಿ ರೂಪಾಯಿಗೆ ಸೇಲ್ ಆಗಿತ್ತು. ಕೆಲವು ತಿಂಗಳ ಹಿಂದಷ್ಟೇ ಪ್ರಸಿದ್ಧ ‘ಲೀಲಾ’ ಬಂಗಲೆ 221 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಕಳೆದ ವರ್ಷದ ಫೆಬ್ರವರಿಯಲ್ಲಿ ಐತಿಹಾಸಿಕ ‘ಲಕ್ಷ್ಮಿ ನಿವಾಸ್’ ಬಂಗಲೆ ಕೂಡ ಬರೋಬ್ಬರಿ 276 ಕೋಟಿ ರೂಪಾಯಿಗೆ ಡೀಲ್ ಆಗಿತ್ತು. ಒಟ್ಟಿನಲ್ಲಿ ಮುಂಬೈನಲ್ಲಿ ಕೋಟ್ಯಧಿಪತಿಗಳ ಮನೆ ಖರೀದಿ ಜೋರಾಗಿ ಸಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us