ರಾಕ್​ಸ್ಟಾರ್ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಜಾನ್ ಅಬ್ರಹಾಂ, ರಣ್​ಬೀರ್​ಗೆ ಪಾತ್ರ ಸಿಕ್ಕಿದ್ದು ಹೇಗೆ?

|

Updated on: May 05, 2023 | 5:51 PM

Rockstar: ರಣ್​ಬೀರ್ ಕಪೂರ್ ವೃತ್ತಿ ಜೀವನದ ನಂಬರ್ 1 ಸಿನಿಮಾ ರಾಕ್​ಸ್ಟಾರ್​ಗೆ ಮೊದಲು ಆಯ್ಕೆ ಆಗಿದ್ದಿದ್ದು ಜಾನ್ ಅಬ್ರಹಾಂ, ಆದರೆ ಜಾನ್​ ಬದಲಿಗೆ ರಣ್​ಬೀರ್​ಗೆ ಆ ಪಾತ್ರ ದೊರೆತಿದ್ದು ಹೇಗೆ?

ರಾಕ್​ಸ್ಟಾರ್ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದು ಜಾನ್ ಅಬ್ರಹಾಂ, ರಣ್​ಬೀರ್​ಗೆ ಪಾತ್ರ ಸಿಕ್ಕಿದ್ದು ಹೇಗೆ?
ರಣ್​ಬೀರ್-ಜಾನ್ ಅಬ್ರಹಾಂ
Follow us on

ರಣ್​ಬೀರ್ ಕಪೂರ್ (Ranbir Kapoor) ನಟನಾ ವೃತ್ತಿಯಲ್ಲಿಯೇ ಅತ್ಯುತ್ತಮ ನಟನೆ ನೀಡಿರುವುದು ರಾಕ್​ಸ್ಟಾರ್ (Rockstar) ಸಿನಿಮಾದಲ್ಲಿ. ಆ ಸಿನಿಮಾದ ನಟನೆಗೆ ಹಲವು ಪ್ರಶಸ್ತಿಗಳನ್ನು ರಣ್​ಬೀರ್ ಕಪೂರ್ ಬಾಚಿಕೊಂಡರು. ಸಿನಿಮಾ ಸಹ ದೊಡ್ಡ ಹಿಟ್ ಆಯಿತು. ರಾಕ್​ಸ್ಟಾರ್ ಸಿನಿಮಾದ ಹಾಡುಗಳು, ಹಲವು ದೃಶ್ಯಗಳು ಈಗಲೂ ರೀಲ್ಸ್​ಗಳಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಕಾಣುತ್ತಲೇ ಇರುತ್ತವೆ. ರಣ್​ಬೀರ್ ಹೊರತಾಗಿ ಇನ್ಯಾರೂ ಆ ಪಾತ್ರ ಮಾಡಲಾರರು ಎನ್ನುವಷ್ಟು ಅದ್ಭುತವಾಗಿ ರಣ್​ಬೀರ್ ರಾಕ್​ಸ್ಟಾರ್ ಜೋರ್ಡನ್ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಆದರೆ ಹೆಚ್ಚು ಮಂದಿಗೆ ಗೊತ್ತಿಲ್ಲದ ವಿಷಯವೆಂದರೆ ಆ ರಾಕ್​ಸ್ಟಾರ್ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದು ರಣ್​ಬೀರ್ ಅಲ್ಲ ಬದಲಿಗೆ ಜಾನ್ ಅಬ್ರಹಾಂ! (John Abraham)

ಹೌದು, ಈ ಕತೆಯನ್ನು ಸ್ವತಃ ರಣ್​ಬೀರ್ ಕಪೂರ್ ಹೇಳಿಕೊಂಡಿದ್ದಾರೆ. ‘ಅಂಜಾನ-ಅಂಜಾನಿ’ ಸಿನಿಮಾದ ಬಳಿಕ ನಿರ್ದೇಶಕ ಇಮ್ತಿಯಾಜ್ ಅಲಿ, ರಣ್​ಬೀರ್​ ಕಪೂರ್ ಗೆ ಕತೆ ಹೇಳಲು ಬಂದಿದ್ದರಂತೆ, ಯಾವುದೇ ಮಾರ್ಕೆಟಿಂಗ್​ಗೆ ಸಂಬಂಧಿಸಿದ ಕತೆ ಅದಾಗಿತ್ತು. ಆದರೆ ಅದೇ ಸಮಯದಲ್ಲಿ ರಣ್​ಬೀರ್, ಜಾನ್ ಅಬ್ರಹಾಂ, ರಾಕ್​ಸ್ಟಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರಂತಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಇಮ್ತಿಯಾಜ್, ಇಲ್ಲ ಆ ಕತೆ ಬರೆದಾತನೇ ಆ ಸಿನಿಮಾದಲ್ಲಿ ನಟಿಸುತ್ತಾನಂತೆ ಅದಕ್ಕೆ ಆ ಸಿನಿಮಾದಿಂದ ಜಾನ್ ಹೊರಗೆ ಬಂದಿದ್ದಾರೆ ಎಂದಿದ್ದಾರೆ ಇಮ್ತಿಯಾಜ್. ಅದಾದ ಮೂರು ತಿಂಗಳ ಬಳಿಕ ಮತ್ತೆ ರಣ್​ಬೀರ್ ಅನ್ನು ಭೇಟಿಯಾದ ಇಮ್ತಿಯಾಜ್, ರಾಕ್​ಸ್ಟಾರ್ ಕತೆ ಬರೆದ ವ್ಯಕ್ತಿಯೊಟ್ಟಿಗೆ ನಾನು ಮಾತನಾಡಿದ್ದೇನೆ, ಆ ಸಿನಿಮಾವನ್ನು ನಾವು ಮಾಡುತ್ತಿದ್ದೇವೆ ನೀವೇ ನಾಯಕ ಎಂದರಂತೆ.

ರಾಕ್​ಸ್ಟಾರ್ ಸಿನಿಮಾದ ಕತೆ ಬರೆದಿದ್ದು ಮೌಜಮ್ ಬೇಗ್ ಎಂಬಾತ. ಆದರೆ ಆತನಿಂದ ಕತೆ ತೆಗೆದುಕೊಂಡ ಇಮ್ತಿಯಾಜ್ ಅದನ್ನು ಸಿನಿಮಾ ಮಾಡಿದರು. ಹಿಂದೊಮ್ಮೆ ಸಂದರ್ಶನದಲ್ಲಿ ಈ ಬಗ್ಗೆ ಹೇಳಿದ್ದ ಇಮ್ತಿಯಾಜ್, ಮೌಜಮ್ ಬರೆದ ಕತೆಗೂ ನಾನು ತಿದ್ದಿ ಬರೆದ ಚಿತ್ರಕತೆಗೂ ಅಜಗಜಾಂತರ ವ್ಯತ್ಯಾಸವಿದೆ. ಆದರೂ ನಾವು ಮೌಜಮ್​ಗೆ ಕೊಡಬೇಕಾದುದ್ದಕ್ಕಿಂತಲೂ ಹೆಚ್ಚಿನದನ್ನು ಕೊಟ್ಟಿದ್ದೇವೆ ಎಂದಿದ್ದರು.

ರಾಕ್​ಸ್ಟಾರ್​ಗೆ ಮೊದಲ ಆಯ್ಕೆ ಆಗಿದ್ದ ಜಾನ್ ಅಬ್ರಹಾಂ ಅನ್ನು ಏಕೆ ತೆಗೆದಿರಿ ಎಂದಿದ್ದಕ್ಕೆ, ಮೊದಲಿಗೆ ಕತೆ ಬರೆದಾಗ ಜಾನ್ ಅಬ್ರಹಾಂ ಸೂಕ್ತ ವ್ಯಕ್ತಿ ಎನಿಸಿತ್ತು. ಆದರೆ ನಾನು ಕತೆಯನ್ನು ತಿದ್ದಲು ಪ್ರಾರಂಭಿಸಿದಾಗ ಕತೆ ಬೇರೆಯದ್ದೇ ರೂಪ ಪಡೆದುಕೊಂಡಿತು ಆಗ ಕಡಿಮೆ ವಯಸ್ಸಿನ, ಯಂಗ್ ಆದ ಸಾಧಾರಣ ವ್ಯಕ್ತಿ ನಾಯಕನಾದ ಹಾಗಾಗಿ ಜಾನ್ ಅಬ್ರಹಾಂ ಬದಲಿಗೆ ರಣ್​ಬೀರ್ ಕಪೂರ್ ಅನ್ನು ಆಯ್ಕೆ ಮಾಡಿಕೊಂಡೆ ಎಂದಿದ್ದರು.

ಇದನ್ನೂ ಓದಿ:ರಣ್​ಬೀರ್ ಕಪೂರ್​ನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಬಾಲಿವುಡ್ ಬೆಡಗಿ ಆಲಿಯಾ ಭಟ್

ಆ ಸಿನಿಮಾದ ಮೂಲಕ ನರ್ಗಿಸ್ ಫಕ್ರಿ ಸಹ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಆದರೆ ಅವರೂ ಸಹ ನಾಯಕಿ ಪಾತ್ರಕ್ಕೆ ಮೊದಲ ಆಯ್ಕೆ ಆಗಿರಲಿಲ್ಲ. ಜಬ್ ವಿ ಮೆಟ್ ಸಿನಿಮಾದಲ್ಲಿ ಕರೀನಾ ಕಪೂರ್ ನಟನೆ ಇಷ್ಟಪಟ್ಟಿದ್ದ ಇಮ್ತಿಯಾಜ್ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಳ್ಳಲಿದ್ದರು. ಆದರೆ ಸಿನಿಮಾದಲ್ಲಿ ನಾಯಕ-ನಾಯಕಿ ನಡುವೆ ಹಲವು ರೊಮ್ಯಾಂಟಿಕ್ ದೃಶ್ಯಗಳಿದ್ದು ರಣ್​ಬೀರ್ ಹಾಗೂ ಕರೀನಾ ಅಕ್ಕ-ತಮ್ಮಂದಿರಾದ ಕಾರಣ ಕರೀನಾರನ್ನು ನಾಯಕಿಯಾಗಿ ತೆಗೆದುಕೊಳ್ಳಲಿಲ್ಲ. ಆ ಬಳಿಕ ಸೋನಂ ಕಪೂರ್, ದಿಯಾನಾ ಪೆಂಟಿಯನ್ನೂ ನಾಯಕಿ ಪಾತ್ರಕ್ಕೆ ಕೇಳಲಾಯ್ತು ಆದರೆ ಅವರೂ ಸಹ ವಿವಿಧ ಕಾರಣಗಳಿಗೆ ನಟಿಸಲು ಸಾಧ್ಯವಾಗಲಿಲ್ಲ ಹಾಗಾಗಿ ಕೊನೆಗೆ ನರ್ಗಿಸ್ ಫಕ್ರಿಯನ್ನು ನಾಯಕಿಯನ್ನಾಗಿ ಇಮ್ತಿಯಾಜ್ ಆಯ್ಕೆ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:59 pm, Fri, 5 May 23