
ಬಾಲಿವುಡ್ ನಟ ಅಕ್ಷಯ್ ಕುಮಾರ್ (Akshay Kumar) ಅದೃಷ್ಟ ಏಕೋ ಇತ್ತೀಚೆಗೆ ಕೈ ಕೊಟ್ಟಂತೆ ಕಾಣುತ್ತಿದೆ. ಅವರ ಹೊಸ ಸಿನಿಮಾಗಳು ಯಶಸ್ಸು ಕಾಣುತ್ತಿಲ್ಲ. ಈ ವಿಚಾರ ಅವರ ಅಭಿಮಾನಿಗಳಿಗೆ ಬೇಸರ ತರಿಸುತ್ತಿದೆ. ಅವರು ಕೂಡ ಈ ವಿಚಾರದಿಂದ ಡಿಸ್ಟರ್ಬ್ ಆಗುತ್ತಿದ್ದಾರೆ. ಈ ವರ್ಷ ಅವರ ಐದನೇ ಸಿನಿಮಾ ರಿಲೀಸ್ ಆಗಿದೆ. ಆದರೆ, ಚಿತ್ರ ಮಾತ್ರ ಸಾಧಾರಣ ಕಲೆಕ್ಷನ್ ಮಾಡಿದೆ. ಇದರಿಂದ ಅಕ್ಷಯ್ ಕುಮಾರ್ ಅದೃಷ್ಟ ಬದಲಾಗುವುದೇ ಇಲ್ಲವೇ ಎನ್ನುವ ಪ್ರಶ್ನೆ ಮೂಡಿದೆ.
ಅಕ್ಷಯ್ ಕುಮಾರ್ ಅವರು 2021ರಲ್ಲಿ ರಿಲೀಸ್ ಆದ ‘ಸೂರ್ಯವಂಶಿ’ ಸಿನಿಮಾ ಬಳಿಕ ಹೇಳಿಕೊಳ್ಳುವಂತಹ ದೊಡ್ಡ ಯಶಸ್ಸು ಕಾಣಲಿಲ್ಲ. ಇದು ಅವರ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈ ಕಾರಣದಿಂದಲೇ ಅವರು ಒಪ್ಪಿಕೊಂಡ ಸಿನಿಮಾಗಳ ಶೂಟ್ ಪೂರ್ಣಗೊಳಿಸುತ್ತಿದ್ದಾರೆ. ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳಲು ಅವರು ಯೋಚಿಸುತ್ತಿದ್ದಾರೆ. ಹೀಗಿರುವಾಗಲೇ ಅವರ ನಟನೆಯ ‘ಜಾಲಿ ಎಲ್ಎಲ್ಬಿ 3’ ಸಿನಿಮಾ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅರ್ಷದ್ ವಾರ್ಸಿ ನಟಿಸಿದ್ದಾರೆ.
ಅಕ್ಷಯ್ ಕುಮಾರ್ ಸಿನಿಮಾಗಳ ಮೊದಲ ದಿನವೇ 30 ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಇದೆ. ಆದರೆ, ‘ಜಾಲಿ ಎಲ್ಎಲ್ಬಿ 3’ ಸಿನಿಮಾ 12 ಕೋಟಿ ರೂಪಾಯಿ ಗಳಿಕೆ ಮಾಡಿದೆ. 12 ಕೋಟಿ ರೂಪಾಯಿ ಸಣ್ಣ ಮೊತ್ತವೇನೂ ಅಲ್ಲ. ಆದರೆ, ಅಕ್ಷಯ್ ಕುಮಾರ್ಗೆ ಇರೋ ಸ್ಟಾರ್ಡಂಗೆ ಈ ಕಲೆಕ್ಷನ್ ಏನೂ ಅಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಒಳ್ಳೆಯ ಕಥೆ ಇದ್ರೆ ಹೇಳಿ ಸಿನಿಮಾ ಮಾಡೋಣ’; ರಾಜ್ ಬಿ ಶೆಟ್ಟಿಗೆ ಅಕ್ಷಯ್ ಕುಮಾರ್ ಬುಲಾವ್
ಅಕ್ಷಯ್ ಕುಮಾರ್ ಬಳಿ ಸದ್ಯ ‘ಭೂತ್ ಬಂಗ್ಲಾ’ ಹಾಗೂ ‘ಹೈವಾನ್’ ಸಿನಿಮಾ ಇದೆ. ಎರಡೂ ಚಿತ್ರಗಳ ಶೂಟ್ ನಡೆಯುತ್ತಿದ್ದು, 2026ರಲ್ಲಿ ರಿಲೀಸ್ ಆಗಲಿವೆ. ಈ ವರ್ಷ ಅಕ್ಷಯ್ ನಟನೆಯ ‘ಸ್ಕೈ ಫೋರ್ಸ್’, ‘ಕೇಸರಿ ಚಾಪ್ಟರ್ 2’, ‘ಹೌಸ್ಫುಲ್ 5’, ‘ಕಣ್ಣಪ್ಪ’ (ಅತಿಥಿ ಪಾತ್ರ) ರಿಲೀಸ್ ಆಗಿವೆ. ಕನ್ನಡದ ರಾಜ್ ಬಿ ಶೆಟ್ಟಿ ಅವರನ್ನು ಅಕ್ಷಯ್ ಇತ್ತೀಚೆಗೆ ಭೇಟಿ ಮಾಡಿದ್ದರು. ಈ ವೇಳೆ ಹೊಸ ಕಥೆ ಮಾಡಲು ರಾಜ್ಗೆ ಅಕ್ಷಯ್ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.