‘ವಾರ್​ 2’ ಸಿನಿಮಾಗಾಗಿ ಮುಂಬೈಗೆ ತೆರಳಿದ ಜೂನಿಯರ್​ ಎನ್​ಟಿಆರ್​; 10 ದಿನ ಶೂಟಿಂಗ್​

ಮುಂಬೈನ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಜೂನಿಯರ್​ ಎನ್​ಟಿಆರ್​ ಅವರ ಫೋಟೋಗಳು ವೈರಲ್​ ಆಗಿವೆ. ಈ ಫೋಟೋದಲ್ಲಿ ಕಾಣಿಸಿಕೊಂಡ ರೀತಿಯೇ ‘ವಾರ್​ 2’ ಚಿತ್ರದಲ್ಲಿ ಅವರ ಗೆಟಪ್​ ಇರಲಿದೆ ಎಂದು ನೆಟ್ಟಿಗರು ಊಹಿಸಿದ್ದಾರೆ. ಹೃತಿಕ್​ ರೋಷನ್​ ಜೊತೆ 10 ದಿನಗಳ ಕಾಲ ಸಾಹಸ ಸನ್ನಿವೇಶದ ಶೂಟಿಂಗ್​ನಲ್ಲಿ ಜೂನಿಯರ್​ ಎನ್​ಟಿಆರ್​ ಭಾಗಿಯಾಗಲಿದ್ದಾರೆ.

‘ವಾರ್​ 2’ ಸಿನಿಮಾಗಾಗಿ ಮುಂಬೈಗೆ ತೆರಳಿದ ಜೂನಿಯರ್​ ಎನ್​ಟಿಆರ್​; 10 ದಿನ ಶೂಟಿಂಗ್​
ಜೂನಿಯರ್​ ಎನ್​ಟಿಆರ್​

Updated on: Apr 11, 2024 | 10:44 PM

ನಟ ಜೂನಿಯರ್​ ಎನ್​ಟಿಆರ್​ (Jr NTR) ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ‘ಆರ್​ಆರ್​ಆರ್​’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಅವರು ಪ್ಯಾನ್​ ಇಂಡಿಯಾ ಹೀರೋ ಆಗಿ ಮಿಂಚುತ್ತಿದ್ದಾರೆ. ಅವರಿಗೆ ಬಾಲಿವುಡ್​ನಲ್ಲೂ ಬೇಡಿಕೆ ಸೃಷ್ಟಿ ಆಗಿದೆ. ಈಗಾಗಲೇ ತಿಳಿದಿರುವಂತೆ ಜೂನಿಯರ್​ ಎನ್​ಟಿಆರ್​ ಅವರು ‘ವಾರ್​ 2’ (War 2) ಸಿನಿಮಾದಲ್ಲಿ ಮುಖ್ಯ ಪಾತ್ರ ನಿಭಾಯಿಸಲಿದ್ದಾರೆ. ಆ ಸಿನಿಮಾದ ಶೂಟಿಂಗ್​ ಸಲುವಾಗಿ ಅವರೀಗ ಮುಂಬೈಗೆ ತೆರಳಿದ್ದಾರೆ. ಮುಂಬೈಗೆ ಕಾಲಿಡುತ್ತಿದ್ದಂತೆಯೇ ಪಾಪರಾಜಿಗಳು ಅವರನ್ನು ಮುತ್ತಿಕೊಂಡಿದ್ದಾರೆ. ‘ವಾರ್​ 2’ ಚಿತ್ರದಲ್ಲಿ ಹೃತಿಕ್​ ರೋಷನ್​ (Hrithik Roshan) ಜೊತೆ ಜೂನಿಯರ್​ ಎನ್​ಟಿಆರ್​ ತೆರೆಹಂಚಿಕೊಳ್ಳಲಿದ್ದಾರೆ.

ಹೃತಿಕ್​ ರೋಷನ್​ ಮತ್ತು ಜೂನಿಯರ್​ ಎನ್​ಟಿಆರ್ ಅವರ ಕಾಂಬಿನೇಷನ್​ ಎಂಬ ಕಾರಣಕ್ಕೆ ‘ವಾರ್​ 2’ ಸಿನಿಮಾ ಮೇಲೆ ಅಭಿಮಾನಿಗಳಿಗೆ ಇರುವ ನಿರೀಕ್ಷೆ ದೊಡ್ಡದು. ಅಯಾನ್​ ಮುಖರ್ಜಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಮುಂಬೈನಲ್ಲಿ ಈ ಚಿತ್ರದ ಶೂಟಿಂಗ್​ ನಡೆಯುತ್ತಿದೆ. ಅದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೂನಿಯರ್​ ಎನ್​ಟಿಆರ್​ ಅವರು ಮುಂಬೈಗೆ ಹೋಗಿದ್ದಾರೆ. ಆರಂಭದಲ್ಲೇ ಅವರು ಆ್ಯಕ್ಷನ್​ ಸನ್ನಿವೇಶಗಳ ಚಿತ್ರೀಕರಣ ಮಾಡಲಿದ್ದಾರೆ ಎನ್ನಲಾಗಿದೆ.

‘ವಾರ್​ 2’ ಕಥೆಯಲ್ಲಿ ಬರುವ ಒಂದು ಪ್ರಮುಖವಾದ ಸಾಹಸ ಸನ್ನಿವೇಶಕ್ಕಾಗಿ ಹೃತಿಕ್​ ರೋಷನ್​ ಅವರು ಈಗಾಗಲೇ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಅವರಿಗೆ ಈಗ ಜೂನಿಯರ್​ ಎನ್​ಟಿಆರ್​ ಸಾಥ್​ ನೀಡಲಿದ್ದಾರೆ. ಮುಂದಿನ 10 ದಿನಗಳ ಕಾಲ ಫೈಟಿಂಗ್​ ದೃಶ್ಯಗಳ ಚಿತ್ರೀಕರಣ ಭರ್ಜರಿಯಾಗಿ ನಡೆಯಲಿದೆ. ಈ ಸಿನಿಮಾಗೆ ‘ಯಶ್​ ರಾಜ್​ ಫಿಲ್ಮ್ಸ್​’ ಬಂಡವಾಳ ಹೂಡುತ್ತಿದೆ. ಅದ್ದೂರಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

‘ಯಶ್​ ರಾಜ್​ ಸ್ಪೈ ಯೂನಿವರ್ಸ್​’ ಭಾಗವಾಗಿ ‘ವಾರ್​ 2’ ಸಿನಿಮಾ ಸಿದ್ಧವಾಗುತ್ತಿದೆ. ಈ ವರ್ಷ ಆಗಸ್ಟ್​ನಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಕಿಯಾರಾ ಅಡ್ವಾಣಿ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಮುಂಬೈ ಏರ್​ಪೋರ್ಟ್​ನಲ್ಲಿ ಜೂನಿಯರ್​ ಎನ್​ಟಿಆರ್​ ಅವರ ಫೋಟೋಗಳನ್ನು ಪಾಪರಾಜಿಗಳು ಕ್ಲಿಕ್​ ಮಾಡಿದ್ದಾರೆ. ಈ ಫೋಟೋದಲ್ಲಿ ಕಾಣಿಸಿಕೊಂಡ ರೀತಿಯೇ ‘ವಾರ್​ 2’ ಸಿನಿಮಾದಲ್ಲಿ ಅವರ ಲುಕ್​ ಇರಲಿದೆ ಎಂದು ಕೆಲವರು ಊಹಿಸಿದ್ದಾರೆ.

ಇದನ್ನೂ ಓದಿ: ಜೂ. ಎನ್​ಟಿಆರ್​ ಜತೆ ಕೈ ಜೋಡಿಸಿದ ಕರಣ್​ ಜೋಹರ್​; ‘ದೇವರ’ ದೊಡ್ಡ ಪ್ಲ್ಯಾನ್​

ಇತ್ತ, ಟಾಲಿವುಡ್​ನಲ್ಲಿ ಜೂನಿಯರ್​ ಎನ್​ಟಿಆರ್​ ಅವರು ‘ದೇವರ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. 2 ಪಾರ್ಟ್​ನಲ್ಲಿ ಆ ಚಿತ್ರ ಮೂಡಿಬರುತ್ತಿದೆ. ಈಗಾಗಲೇ ರಿಲೀಸ್​ ಆಗಿರುವ ಟ್ರೇಲರ್ ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us